More

    ಒಂದು ಡೋಸ್‌ ಔಷಧಕ್ಕೆ 16 ಕೋಟಿ ರೂ! ಮಗು ನಡೆಯುವುದನ್ನು ನೋಡುವ ಕಾತರದಲ್ಲಿ ಪಾಲಕರು

    ಹೈದರಾಬಾದ್‌: ಈ ಚಿತ್ರದಲ್ಲಿರುವ ಮೂರು ವರ್ಷದ ಮುದ್ದಾದ ಮಗುವಿನ ಹೆಸರು ಅಯಾಂಶ್‌. ಹೈದರಾಬಾದ್‌ನ ಯೋಗೇಶ್‌ ಮತ್ತು ರೂಪಲ್ ದಂಪತಿ ಪುತ್ರನೀತ. ಇವನಿಗೆ ಹುಟ್ಟಿನಿಂದಲೇ ಅಪರೂಪದ ಕಾಯಿಲೆ ಕಾಣಿಸಿಕೊಂಡಿತ್ತು. ವಂಶವಾಹಿ ಸಮಸ್ಯೆಯಾದ ಸ್ಪೈನಲ್ ಮಸ್ಕುಲರ್‌ ಅಟ್ರೋಫಿ (ಎಸ್‌ಎಂಎ) ಎನ್ನುವುದು ಇದರ ವೈಜ್ಞಾನಿಕ ಹೆಸರು.

    ಈ ಸಮಸ್ಯೆಯಿಂದಾಗಿ ಮಗು ನಡೆದಾಡುವುದು ಕಷ್ಟವಾಗಿತ್ತು. ಹೀಗೆಯೇ ಮುಂದುವರೆದರೆ ಅದರ ಜೀವಕ್ಕೇ ಅಪಾಯವಿತ್ತು. ಆದರೆ ಈ ಸಮಸ್ಯೆಗೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಔಷಧವಿಲ್ಲ. ಆದ್ದರಿಂದ ಅಮೆರಿಕದಿಂದ ಔಷಧವನ್ನು ಖರೀದಿ ಮಾಡಬೇಕಿತ್ತು. ಆದರೆ ಇದಕ್ಕೆ ತಗಲುವ ವೆಚ್ಚ 16 ಕೋಟಿ ರೂಪಾಯಿ, ಅದೂ ಸಿಂಗಲ್‌ ಡೋಸ್ ಔಷಧ!

    https://twitter.com/FightsSma/status/1402837308185870340/photo/4

    ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದೆನೆಸಿಕೊಂಡಿರುವ ಜಾಲ್ಗೇನ್‌ಸ್ಮಾ ಎನ್ನುವ ಔಷಧ ಇದಾಗಿದ್ದು, ಇದನ್ನು ಕೊಟ್ಟರಷ್ಟೇ ಮಗು ನಡೆದಾಡಲು ಸಾಧ್ಯ ಎಂದಿದ್ದರು ವೈದ್ಯರು. ನಂತರ ಸರ್ಕಾರದ ಮೊರೆ ಹೋಗಿದ್ದ ದಂಪತಿಗೆ ಜಿಎಸ್‌ಟಿ ಇಲ್ಲದೆಯೇ ಅದನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಜೆಎಸ್‌ಟಿ ಹೊರತಾಗಿ ಅದಕ್ಕೆ ತಗಲುವ ವೆಚ್ಚ 16 ಕೋಟಿ ರೂ!

    ನಂತರ ದಂಪತಿ ಗೋಫಂಡ್‌ಮೀ ಮುಖಾಂತರ ಕ್ರೌಡ್‌ ಫಂಡಿಂಗ್‌ಗೆ ಮುಂದಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಸುಮಾರು 65 ಸಾವಿರ ದೇಣಿಗೆದಾರರು ಹಣ ನೀಡಿದ್ದು, ಔಷಧದ ಸಂಪೂರ್ಣ ವೆಚ್ಚ ಇವರಿಗೆ ಸಿಕ್ಕಿದೆ. ನಿಧಿ ಸಂಗ್ರಹಣೆ ಆರಂಭಿಸಿದ ಮೂರೂವರೆ ತಿಂಗಳಲ್ಲೇ ಔಷಧಕ್ಕೆ ಬೇಕಾದಷ್ಟು ಹಣವನ್ನು ಸಂಗ್ರಹಿಸುತ್ತೇವೆಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದಿರುವ ಯೋಗೇಶ್‌ ಈಗ ಮಗು ನಡೆಯುವುದನ್ನು ನೋಡಲು ಕಾತರರಾಗಿದ್ದಾರೆ.

    ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

    ಮದ್ಯ ಖರೀದಿಗೆ ಮುನ್ನವೇ ಖುಷಿಯಲ್ಲಿ ಟೈಟ್‌! ಬಾಟ್ಲಿಗೆ ಪೂಜೆ ಮಾಡಿದ ಎಣ್ಣೆಭಕ್ತ- ಕುಳಿತಲ್ಲೇ ನಮಸ್ಕರಿಸಿದ್ರು ಪ್ರಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts