More

    ಕೊವಿಡ್​-19 ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ರಷ್ಯಾ ರಕ್ಷಣಾ ಸಚಿವಾಲಯ; ಜುಲೈ ಅಂತ್ಯಕ್ಕೆ ಫೈನಲ್​ ರಿಸಲ್ಟ್​​

    ಮಾಸ್ಕೋ: ಕೊವಿಡ್​-19 ಲಸಿಕೆ ಸಂಶೋಧಿಸಿದ್ದೇವೆ. ಕ್ಲಿನಿಕಲ್​ ಟ್ರಯಲ್​​​ನ ಎಲ್ಲ ಹಂತಗಳೂ ಸಂಪೂರ್ಣ ಯಶಸ್ವಿಯಾಗಿವೆ ಎಂದು ರಷ್ಯಾ ಹೇಳಿಕೊಂಡಿದೆ.

    ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ತಯಾರಿಸಿದೆ. ಈ ಲಸಿಕೆಯ ಮೇಲೆ ಮಾಸ್ಕೋದ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯವಾದ ಸೆಚೆನೊವ್​ ಯೂನಿವರ್ಸಿಟಿ ಪ್ರಯೋಗಗಳನ್ನು ಜೂ.18ರಂದು ಪ್ರಾರಂಭಿಸಿತ್ತು.

    ಮೊದಲ ಹಂತದಲ್ಲಿ 18 ಯೋಧರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಹೀಗೆ ಪ್ರಯೋಗಕ್ಕೆ ಒಳಪಟ್ಟ ಮೊದಲ ಗುಂಪು ಇಂದು ಡಿಸ್​ಚಾರ್ಜ್​ ಆಗಿದೆ.  ನಾವು ಸಿದ್ಧಪಡಿಸಿದ ಕೊರನಾ ವೈರಸ್ ಲಸಿಕೆ ಸುರಕ್ಷಿತವಾಗಿದೆ. ಲಸಿಕೆ ಸ್ವೀಕರಿಸಿದವರ ಆರೋಗ್ಯದಲ್ಲಿ ಯಾವುದೇ ಅಡ್ಡಪರಿಣಾಮ ಆಗಿಲ್ಲ. ಗಂಭೀರ ಪ್ರತಿಕೂಲಗಳೂ ಉಂಟಾಗಿಲ್ಲ. ಆರೋಗ್ಯವಾಗಿಯೇ ಇದ್ದರು. ಅವರನ್ನು ಡಿಸ್​​ಚಾರ್ಜ್​ ಮಾಡಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

    ಲಸಿಕೆ ಅತ್ಯಂತ ಸುರಕ್ಷಿತವಾಗಿದೆ ಮತ್ತು ವೈರಸ್​ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ನಾವು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇವೆ. ಲಸಿಕೆ ತೆಗೆದುಕೊಂಡವರಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ಆ್ಯಂಟಿಬಾಡಿ ಸೃಷ್ಟಿಯಾಗುತ್ತಿದೆ. ಕರೊನಾ ವೈರಸ್​ ತಗುಲುವುದಿಲ್ಲ ಎಂದು ಸಚಿವಾಲಯ ವಿಡಿಯೋ ಮೂಲಕ ತಿಳಿಸಿದೆ.
    ಹಾಗೇ, ಜುಲೈ ಅಂತ್ಯದ ವೇಳೆಗೆ ಎಲ್ಲರೀತಿಯ ಪ್ರಯೋಗಗಳೂ ಪೂರ್ಣಗೊಳ್ಳಲಿದ್ದು, ನಂತರ ಬಳಕೆಗೆ ಲಭ್ಯವಾಗಲಿದೆ ಎಂದೂ ವಿವರಣೆ ನೀಡಿದೆ. ಇದನ್ನೂ ಓದಿ: ‘ಕರೊಶ್ಯುರ್’ – ದೆಹಲಿ ಐಐಟಿ ಅಭಿವೃದ್ಧಿಪಡಿಸಿದ ಅಗ್ಗದರದ ಟೆಸ್ಟಿಂಗ್ ಕಿಟ್ ಬಿಡುಗಡೆ

    ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ವಿಜ್ಞಾನಿಗಳೊಂದಿಗೆ ಮಿಲಿಟರಿ ಸಂಶೋಧಕರು ಜತೆಯಾಗಿ ಈ ಲಸಿಕೆ ಅಭಿವೃದ್ಧಿಪಡಿಸಿದ್ದಾಗಿ ರಕ್ಷಣಾ ಸಚಿವ ಸೆರ್ಗೆಯ್​ ಶೋಯಿಗು ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್​​ಗೆ ವರದಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

    ಲಸಿಕೆ ಪ್ರಯೋಗಕ್ಕೆ ಒಳಪಟ್ಟ 18 ಮಂದಿ ಯೋಧರು ಮಾಸ್ಕೋದ ಬರ್ಡೆಂಕೋ ಮಿಲಿಟರಿ ಆಸ್ಪತ್ರೆಯಲ್ಲಿ ಅಡ್ಮಿಟ್​ ಆಗಿದ್ದರು. ಪ್ರತಿದಿನ ಅವರನ್ನು ತಪಾಸಣೆ ಮಾಡಲಾಗುತ್ತಿತ್ತು. 28 ದಿನಗಳು ಅವರ ಮೇಲೆ ನಿಗಾ ಇಡಲಾಗಿತ್ತು. ಆರೋಗ್ಯದಲ್ಲಿ ಯಾವುದೇ ಬದಲಾವಣೆ, ಅಡ್ಡಪರಿಣಾಮ ಆಗಿಲ್ಲ. ಇನ್ನೂ ಒಂದು ಗುಂಪು ಇದೆ. ಅವರನ್ನು ಜು.23ರಂದು ಡಿಸ್​​ಚಾರ್ಜ್​ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

    ರಷ್ಯಾದಲ್ಲಿ ಸಿದ್ಧವಾಯ್ತು ಜಗತ್ತಿನ ಮೊದಲ ಕೊವಿಡ್​-19 ಲಸಿಕೆ; ಕ್ಲಿನಿಕಲ್​ ಪ್ರಯೋಗ ಸಂಪೂರ್ಣ ಯಶಸ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts