More

    ರಷ್ಯಾದಲ್ಲಿ ಸಿದ್ಧವಾಯ್ತು ಜಗತ್ತಿನ ಮೊದಲ ಕೊವಿಡ್​-19 ಲಸಿಕೆ; ಕ್ಲಿನಿಕಲ್​ ಪ್ರಯೋಗ ಸಂಪೂರ್ಣ ಯಶಸ್ವಿ

    ಮಾಸ್ಕೋ: ಜಗತ್ತಿನ ಹಲವು ರಾಷ್ಟ್ರಗಳು ಮಾರಕ ಕೊವಿಡ್​-19 ಸೋಂಕಿನ ವಿರುದ್ಧ ಹೋರಾಡುವ ಲಸಿಕೆ ಕಂಡುಹಿಡಿಯುತ್ತಿವೆ. ಕ್ಲಿನಕಲ್ ಪ್ರಯೋಗವನ್ನೂ ಹಂತಹಂತವಾಗಿ ನಡೆಸುತ್ತಿವೆ.

    ಈಗಾಗಲೇ ಕೆಲವು ದೇಶಗಳು ತಾವು ಕರೊನಾಕ್ಕೆ ಲಸಿಕೆ ಕಂಡುಹಿಡಿದಿದ್ದು, ಅದು ಪ್ರಯೋಗದ ಹಂತದಲ್ಲಿದೆ ಎಂದು ಹೇಳಿಕೊಂಡಿವೆ.
    ಇದೀಗ ರಷ್ಯಾ ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಲಸಿಕೆ ಸಂಶೋಧನೆ ಮಾಡಿದ್ದೇವೆ. ಅದರ ಕ್ಲಿನಿಕಲ್​ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದೂ ತಿಳಿಸಿದೆ.

    ಜಗತ್ತಿನ ಮೊದಲ ಕೊವಿಡ್​-19 ಲಸಿಕೆಯನ್ನು ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ತಯಾರಿಸಿದೆ. ಈ ಲಸಿಕೆಯ ಮೇಲೆ ಮಾಸ್ಕೋದ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯವಾದ ಸೆಚೆನೊವ್​ ಯೂನಿವರ್ಸಿಟಿ ಪ್ರಯೋಗಗಳನ್ನು ಜೂ.18ರಂದು ಪ್ರಾರಂಭಿಸಿತ್ತು.
    ಇನ್ಸ್ಟಿಟ್ಯೂಟ್​ ಫಾರ್​ ಟ್ರಾನ್ಸ್ಲೇಶನ್​ ಮೆಡಿಕಲ್​ ಆ್ಯಂಡ್​ ಬಯೋಟೆಕ್ನಾಲಜಿಯ ನಿರ್ದೇಶಕ ವಾದಿಮ್​ ತಾರಾಸೊವ್​ ಅವರು ಲಸಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್​ಪೋರ್ಟ್​ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?

    ಲಸಿಕೆ ಪ್ರಯೋಗದಲ್ಲಿ ಸೆಚೆನೊವ್​ ಯೂನಿವರ್ಸಿಟಿಯ ಸ್ವಯಂಸೇವಕರನ್ನು ಒಳಗೊಳ್ಳಲಾಗಿತ್ತು. ಅವರ ಮೇಲೆ ನಡೆಸಿದ ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಅವರಲ್ಲಿ ಒಂದು ಗುಂಪು ಜು.15ರಂದು ಡಿಸ್​ಚಾರ್ಜ್​ ಆಗಲಿದೆ. ಮತ್ತೊಂದು ಗುಂಪಿನಲ್ಲಿರುವವರನ್ನು ಜುಲೈ 20ರಂದು ಡಿಸ್​ಚಾರ್ಜ್​ ಮಾಡುತ್ತೇವೆ ಎಂದು ವಾದಿಮ್​ ತಿಳಿಸಿದ್ದಾರೆ.

    ಮನುಷ್ಯನ ದೇಹಕ್ಕೆ ಈ ಲಸಿಕೆ ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಪ್ರಯೋಗ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದು ಸಾಬೀತಾಗಿದೆ ಎಂದು ಯೂನಿವರ್ಸಿಟಿ ತಿಳಿಸಿದೆ. ಹಾಗೇ ಜಗತ್ತಿನಾದ್ಯಂತ ಸುಮಾರು 100ಕ್ಕೂ ಹೆಚ್ಚು ಲಸಿಕೆಗಳು ಕ್ಲಿನಿಕಲ್​ ಪ್ರಯೋಗದ ಹಂತದಲ್ಲಿವೆ. (ಏಜೆನ್ಸೀಸ್​)

    ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ನೇಪಾಳ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts