More

    ಗ್ರಾಮಾಭಿವೃದ್ಧಿ ಇಲಾಖೆ ಸಿಬ್ಬಂದಿ ಸೋಂಕಿಗೆ ಬಲಿಯಾದರೆ 50 ಲಕ್ಷ ರೂಪಾಯಿ ಪರಿಹಾರ ಧನ

    ಲಖನೌ: ಕರೊನಾ ಸೋಂಕು ದೇಶಾದ್ಯಂತ ತನ್ನ ಯಮ ರೂಪವನ್ನು ತೋರಲಾರಂಭಿಸಿದೆ. ಅನೇಕ ಇಲಾಖೆಗಳು ತಮ್ಮ ಕೆಲಸವನ್ನು ದುಪ್ಪಟ್ಟು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಸಂಬಂಧ ಇಲಾಖೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.

    ಕರೊನಾದ ಈ ಸಮಯದಲ್ಲೂ ಗ್ರಾಮಾಭಿವೃದ್ಧಿ ಇಲಾಖೆ ಕೆಲಸ ನಿಲ್ಲಿಸಿಲ್ಲ. ಅದರ ಸಿಬ್ಬಂದಿ ಕರೊನಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿ ವಾರಿಯರ್​ಗಳ ರೀತಿ ಕೆಲಸ ಮಾಡುತ್ತಿರುವ ಗ್ರಾಮಾಭಿವೃದ್ಧಿ ಇಲಾಖೆಯ ಸಿಬ್ಬಂದಿಯಲ್ಲಿ ಯಾರಾದರೂ ಸೋಂಕಿನಿಂದಾಗಿ ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ಧನವನ್ನು ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಈ ಕುರಿತಾಗಿ ಗ್ರಾಮೀಣಾಭಿವೃದ್ಧಿ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

    ಇಲಾಖೆಯೊಂದಿಗೆ ಕೈ ಜೋಡಿಸಿಕೊಂಡು ದುಡಿಯುತ್ತಿರುವ ಸರ್ಕಾರಿ, ಅರೆ ಸರ್ಕಾರಿ, ಒಪ್ಪಂದಿತ, ದೈನಂದಿನ ಸಂಬಳ, ಹೊರಗುತ್ತಿಗೆ, ಸ್ವಾಯತ್ತ ಸಂಸ್ಥೆಗಳಿಗೂ ಈ ಪ್ರಕಟಣೆ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಗ್ರಾಮೀಣ ಸಂಸ್ಥೆಗಳಿಗೆ 8,923 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

    ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts