More

    ಗ್ರಾಮೀಣ ಸಂಸ್ಥೆಗಳಿಗೆ 8,923 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

    ನವದೆಹಲಿ: ಕರೊನಾ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಗ್ರಾಮ, ಬ್ಲಾಕ್​ ಮತ್ತು ಜಿಲ್ಲಾ ಪಂಚಾಯತ್​ ರಾಜ್​ ಸಂಸ್ಥೆಗಳಿಗೆ ಅನುದಾನವನ್ನು ನೀಡಲಾಗಿದೆ.


    25 ರಾಜ್ಯಗಳಿಗೆ 8,923 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ಮೂರು ಹಂತದ ಪಂಚಾಯತ್‌ಗಳಿಗೆ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


    15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಅನುದಾನದ ಮೊದಲ ಭಾಗವನ್ನು ಜೂನ್‌ ತಿಂಗಳಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ ಕರೊನಾ ಎದುರಿಸಲು ಬೇಕಾಗ ಅಗತ್ಯತೆ ಮತ್ತು ಸೋಂಕಿನ ನಿಯಂತ್ರಣ ಕ್ರಮಗಳಿಗಾಗಿ ಒಂದು ತಿಂಗಳು ಮುಂಚಿತವಾಗಿ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಚಾಲ್ತಿಯಲ್ಲಿರುವ ಸಂಕಷ್ಟವನ್ನು ಗಣನೆಗೆ ತೆಗೆದುಕೊಂಡು ಹಣವನ್ನು ಬಿಡುಗಡೆ ಮಾಡಲು ಇರುವ ಕೆಲವು ಷರತ್ತುಗಳನ್ನು ಸಹ ತೆಗೆದುಹಾಕಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts