More

    ರೂ. 6 ಸಾವಿರ ಕೋಟಿಯ ಮಹಾದೇವ್ ಬೆಟ್ಟಿಂಗ್​ ಹಗರಣ: ದುಬೈ ಗೃಹಬಂಧನದಲ್ಲಿ ಚಂದ್ರಕರ್​

    ಮುಬೈ/ರಾಯಪುರ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್​ನನ್ನು ದುಬೈನಲ್ಲಿ “ಗೃಹ ಬಂಧನ” ದಲ್ಲಿ ಇರಿಸಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳು ಈತನನ್ನು ಗಡೀಪಾರು ಮಾಡಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಕೆಲಸ ಮಾಡುತ್ತಿವೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

    ಈ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶೀಘ್ರವೇ ಹೊಸ ಆರೋಪ ಪಟ್ಟಿ ಸಲ್ಲಿಸಬಹುದು ಎಂದೂ ಮೂಲಗಳು ಹೇಳಿವೆ.

    ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್‌ನ ಮತ್ತೊಬ್ಬ ಪ್ರವರ್ತಕ ರವಿ ಉಪ್ಪಲ್ ಎಂಬಾತನನ್ನು ಇಡಿ ಆದೇಶದ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ನೋಟಿಸ್ (ಆರ್‌ಎನ್) ಮೇಲೆ ದುಬೈನಲ್ಲಿ ಸ್ಥಳೀಯ ಅಧಿಕಾರಿಗಳು ಬಂಧಿಸಿದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. 43 ವರ್ಷದ ಉಪ್ಪಲ್​ನನ್ನು ಕಳೆದ ವಾರ ದುಬೈನಲ್ಲಿ ಬಂಧಿಸಲಾಗಿತ್ತು.

    ದುಬೈನಲ್ಲಿ ಚಂದ್ರಕರ್ ಇರುವ ಸ್ಥಳವನ್ನು ಫೆಡರಲ್ ಏಜೆನ್ಸಿಗೆ ತಿಳಿಸಲಾಗಿದ್ದು, ಆತನನ್ನು “ಗೃಹ ಬಂಧನ” ದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಛತ್ತೀಸ್‌ಗಢ ಮತ್ತು ಇತರೆಡೆಗಳಲ್ಲಿ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ‘ಮಹಾದೇವ್ ಬುಕ್ ಆನ್‌ಲೈನ್’ ಅಪ್ಲಿಕೇಶನ್‌ನ ಅಕ್ರಮ ಚಟುವಟಿಕೆಗಳು ಮತ್ತು ಅಕ್ರಮ ಹಣ ವರ್ಗಾವಣೆ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಪ್ರಮುಖರಾದ ಈ ಇಬ್ಬರನ್ನೂ ಭಾರತಕ್ಕೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

    ಛತ್ತೀಸ್‌ಗಢದಿಂದ ನವೆಂಬರ್‌ನಲ್ಲಿ ಬಂಧಿಸಲಾದ ಇಬ್ಬರು ವ್ಯಕ್ತಿಗಳ ವಿರುದ್ಧ ಈ ಪ್ರಕರಣದಲ್ಲಿ ಇಡಿ ಹೊಸ (ಪೂರಕ) ಆರೋಪ ಪಟ್ಟಿ ಸಲ್ಲಿಸುವ ನಿರೀಕ್ಷೆಯಿದೆ. ನಗದು ಕೊರಿಯರ್ ಅಸಿಮ್ ದಾಸ್ ಮತ್ತು ಪೊಲೀಸ್ ಪೇದೆ ಭೀಮ್ ಯಾದವ್ ಈ ಇಬ್ಬರು ಆಪಾದಿತರಾಗಿದ್ದಾರೆ.

    ರಾಯ್‌ಪುರದ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಮೊದಲ ಆರೋಪ ಪಟ್ಟಿಯನ್ನು ಇಡಿಯು ಚಂದ್ರಕರ್, ಉಪ್ಪಲ್ ಮತ್ತು ಇತರ ಕೆಲವರನ್ನು ಹೆಸರಿಸಿದೆ.

    ಸೌರಭ್ 2019 ರಲ್ಲಿ ದುಬೈಗೆ ಹೋಗುವ ಮೊದಲು ಛತ್ತೀಸ್‌ಗಢದ ಭಿಲ್ಲೈ ಪಟ್ಟಣದಲ್ಲಿ ತನ್ನ ಸಹೋದರನೊಂದಿಗೆ ‘ಜ್ಯೂಸ್ ಫ್ಯಾಕ್ಟರಿ’ ಎಂಬ ಹೆಸರಿನ ಜ್ಯೂಸ್ ಅಂಗಡಿಯನ್ನು ನಡೆಸುತ್ತಿದ್ದ ಎಂದು ಸೌರಭ್ ಚಂದ್ರಕರ್ ಅವರ ಚಿಕ್ಕಪ್ಪ ದಿಲೀಪ್ ಚಂದ್ರಕರ್ ಹೇಳಿಕೆಯನ್ನು ಈ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

    ಫೆಬ್ರವರಿ 2023 ರಲ್ಲಿ ಯುಎಇಯ ರಾಸ್ ಅಲ್ ಖೈಮಾದಲ್ಲಿ ವಿವಾಹವಾದ ಸೌರಭ್ ಚಂದ್ರಕರ್, ಭಾರತದಿಂದ ತನ್ನ ಸಂಬಂಧಿಕರನ್ನು ಯುಎಇಗೆ ಕರೆತರಲು ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆದಿದ್ದ. ಈ ಕಾರ್ಯಕ್ರಮಕ್ಕಾಗಿ ಅಂದಾಜು 200 ಕೋಟಿ ರೂಪಾಯಿ “ನಗದು” ಖರ್ಚು ಮಾಡಿದ್ದ ಎಂದು ಇಡಿ ಹೇಳಿದೆ.

    ಛತ್ತೀಸ್‌ಗಢ ಮತ್ತು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ನ ತನಿಖೆಯ ಹೊರತಾಗಿ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಅಕ್ರಮ ಬೆಟ್ಟಿಂಗ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಇಬ್ಬರೂ ಉದ್ಯಮಿಗಳನ್ನು ಇಡಿ ತನಿಖೆ ನಡೆಸುತ್ತಿದೆ. ನ್ಯಾಯಾಲಯ ನೀಡಿದ ಜಾಮೀನು ರಹಿತ ವಾರೆಂಟ್‌ನ ಆಧಾರದ ಮೇಲೆ ಇಡಿ ಮನವಿಯ ಆಧಾರದ ಮೇಲೆ ಇಂಟರ್‌ಪೋಲ್ ಇಬ್ಬರ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು. ಇಡಿ ಪ್ರಕಾರ ಈ ಪ್ರಕರಣದಲ್ಲಿ ಅಂದಾಜು 6,000 ಕೋಟಿ ರೂಪಾಯಿಯ ಅಕ್ರಮ ನಡೆದಿದೆ. ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರ ವಿರುದ್ಧವೂ ಈ ಪ್ರಕರಣದಲ್ಲಿ ಆರೋಪಗಳು ಕೆಲ ದಿನಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಕೇಳಿಬಂದಿದ್ದವು.

    2 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುವುದಾಗಿ ಹೇಳಿದ ಪ್ರಧಾನಿಯನ್ನೇ ರುಬಿನಾ ಖಾನ್ ಅಚ್ಚರಿಗೊಳಿಸಿದ್ದು ಹೇಗೆ?

    72 ಸಾವಿರ ಮೈಲುಗಲ್ಲು ದಾಟಿ ದಾಖಲೆ ಬರೆದ ಸೂಚ್ಯಂಕ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ’ ಈಗ ಕಾನೂನುಬಾಹಿರ ಸಂಘಟನೆ: ಗೃಹ ಸಚಿವಾಲಯ ಹೀಗೆ ಘೋಷಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts