More

    2 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುವುದಾಗಿ ಹೇಳಿದ ಪ್ರಧಾನಿಯನ್ನೇ ರುಬಿನಾ ಖಾನ್ ಅಚ್ಚರಿಗೊಳಿಸಿದ್ದು ಹೇಗೆ?

    ಭೋಪಾಲ್: ಸ್ವ-ಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಸೇರಿರುವ 2 ಕೋಟಿ ಮಹಿಳೆಯರನ್ನು ‘ಲಕ್ಷಾಧಿಪತಿ’ ಮಹಿಳೆಯರನ್ನಾಗಿ ಮಾಡಲು ನಾನು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ಯ ಅಂಗವಾಗಿ ಬುಧವಾರ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ವರ್ಚುವಲ್ ಸಂವಾದದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

    “ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಇರುವ 2 ಕೋಟಿ ಮಹಿಳೆಯರನ್ನು ದೇಶದಲ್ಲಿ ಲಕ್ಷಾಧಿಪತಿ ಮಹಿಳೆಯರನ್ನಾಗಿ ಮಾಡಲು ನಾನು ಬಯಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

    ತಮ್ಮ ಈ ಪ್ರಯತ್ನಗಳಿಗೆ ಸಹಾಯ ಮಾಡುತ್ತೀರಾ ಎಂದು ರುಬಿನಾ ಖಾನ್ ಎಂಬ ಮಹಿಳೆಗೆ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರಶ್ನಿಸಿದರು.

    ತಮ್ಮ ಗುಂಪಿನಲ್ಲಿ ಎಷ್ಟು ಮಹಿಳೆಯರನ್ನು ಲಕ್ಷಾಧಿಪತಿಯಾಗಿ ಮಾಡಲು ನೀವು ಬಯಸುತ್ತೀರಿ ಎಂದು ನಿರ್ದಿಷ್ಟವಾಗಿ ಮೋದಿ ಅವರು ಪ್ರಶ್ನಿಸಿದಾಗ ರುಬಿನಾ ಅವರು, “ನಾನು ದೇಶದ ಪ್ರತಿಯೊಬ್ಬ ಮಹಿಳೆಯನ್ನು ಲಕ್ಷಾಧಿಪತಿಯನ್ನಾಗಿ ಮಾಡಲು ಬಯಸುತ್ತೇನೆ” ಎಂದು ಉತ್ತರಿಸಿದರು.

    “ಇದು ರಾಜಕೀಯ ಪ್ರತ್ಯುತ್ತರ” ಎಂದು ಪ್ರಧಾನಿ ಮೋದಿ ಹಾಸ್ಯಮಯವಾಗಿ ಹೇಳಿದಾಗ ಗುಂಪಿನಲ್ಲಿದ್ದ ಎಲ್ಲರೂ ನಕ್ಕರು. ನಂತರ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಹಾಜರಿದ್ದ ಮಹಿಳೆಯರಿಗೆ ಲಕ್ಷಾಧಿಪತಿಯಾಗಲು ಬಯಸಿದರೆ ಕೈ ಎತ್ತುವಂತೆ ಕೇಳಿಕೊಂಡರು. ಇದಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

    ನಿಮಗಾಗಿ ನಮ್ಮ ಬಳಿ ಸಾಕಷ್ಟು ಕೆಲಸಗಳಿವೆ. ಆದರೆ, ಇಂತಹ ಕ್ರಮಗಳಿಗೆ ನಮ್ಮನ್ನು ನೀವು ಬೆಂಬಲಿಸಬೇಕು ಎಂದು ಪ್ರಧಾನಿ ಹೇಳಿದಾಗ, “ನಿಮ್ಮ ಕನಸುಗಳನ್ನು ನನಸಾಗಿಸಲು ಎಲ್ಲರೂ ಕೆಲಸ ಮಾಡುತ್ತೇವೆ” ಎಂದು ಎಲ್ಲರೂ ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು.

    ಗ್ರಾಮೀಣ ಜೀವನೋಪಾಯ ಕಾರ್ಯಕ್ರಮವಾದ ಆಜೀವಿಕಾ ಮಿಷನ್ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳೊಂದಿಗೆ ಸಂಯೋಜಿತವಾಗಿರುವ “1.03 ಲಕ್ಷ ಮಹಿಳೆಯರ” ಪರವಾಗಿ ಪ್ರಧಾನ ಮಂತ್ರಿಯವರಿಗೆ ಶುಭ ಹಾರೈಸುತ್ತೇನೆ ಎಂದು ರುಬಿನಾ ಹೇಳಿದರು, ಇದಕ್ಕೆ ಪ್ರಧಾನಿ ಮೋದಿ ಆಶ್ಚರ್ಯ ವ್ಯಕ್ತಪಡಿಸಿ, ಈ ಸಂಖ್ಯೆಯನ್ನು ಪುನರಾವರ್ತಿಸಲು ಕೇಳಿಕೊಂಡರು.

    ಎಸ್​ಎಚ್​ಜಿ ಜತೆ ಸಂಪರ್ಕ ಹೊಂದಿದ ನಂತರ ತಾವು ತಮ್ಮ ಸೊಸೈಟಿಯಿಂದ 5,000 ರೂಪಾಯಿ ಸಾಲ ಪಡೆದು, ತಮ್ಮ ಮನೆಯಿಂದ ಹಾಗೂ ಮೋಟಾರ್​ಸೈಕಲ್​ನಲ್ಲಿ ತಮ್ಮ ಪತಿಯೊಂದಿಗೆ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ ಸಂಗತಿಯನ್ನು ಪ್ರಧಾನಿ ಜತೆ ರುಬಿನಾ ಹಂಚಿಕೊಂಡರು.

    ತಮ್ಮ ಕೆಲಸ ವಿಸ್ತರಿಸಿದಾಗ ತಾವು ಮತ್ತು ತಮ್ಮ ಪತಿ ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾನ್ ಖರೀದಿಸಲು ನಿರ್ಧರಿಸಿದೆವು ಎಂದು ರುಬಿನಾ ಹೇಳಿದ್ದು ಪ್ರಧಾನಿ ಮೋದಿಯವರನ್ನು ಅಚ್ಚರಿಗೊಳಿಸಿತು. “ನನ್ನ ಬಳಿ ಸೈಕಲ್ ಕೂಡ ಇಲ್ಲದಿರುವಾಗ ನೀನು ಮಾರುತಿ ವ್ಯಾನ್ ಹೊಂದಿದ್ದೀಯ” ಎಂದು ಪ್ರಧಾನಿ ಹೇಳಿದಾಗ ಮಹಿಳೆಯರೆಲ್ಲ ಮತ್ತೆ ನಗೆಗಡಲಲ್ಲಿ ತೇಲಿದರು.

    ತಮ್ಮ ವ್ಯಾಪಾರ ಬೆಳೆದಿದ್ದು, ದೇವಾಸ್ ಜಿಲ್ಲೆಯಲ್ಲಿ ಅಂಗಡಿಯನ್ನು ತೆಗೆದುಕೊಂಡು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ರುಬಿನಾ ವಿವರಿಸಿದರು.

    “ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (CRP)” ಯಾಗಿ ತಾನು ಮತ್ತು ತನ್ನ ಗುಂಪಿನಲ್ಲಿರುವ ಮಹಿಳೆಯರು ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಜಿಲ್ಲೆಯ 40 ಹಳ್ಳಿಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸುವ ಮೂಲಕ ಪ್ರಯೋಜನಗಳನ್ನು ಪಡೆದಿದ್ದೇವೆ ಎಂದು ಅವರು ಪ್ರಧಾನಿಗೆ ತಿಳಿಸಿದರು.

    ಕೋವಿಡ್-19 ಅವಧಿಯನ್ನು ಉಲ್ಲೇಖಿಸಿದ ರುಬಿನಾ, ಆರಂಭಿಕ ಪ್ರತಿರೋಧದ ನಂತರ ತಮ್ಮ ಗುಂಪಿನ ಮಹಿಳೆಯರು ಮಾರಣಾಂತಿಕ ವೈರಸ್ ಅನ್ನು ಎದುರಿಸಲು ಮುಖವಾಡಗಳು, ಸ್ಯಾನಿಟೈಸರ್ ಮತ್ತು ಕಿಟ್‌ಗಳನ್ನು ತಯಾರಿಸಲು ನಿರ್ಧರಿಸಿದರು. ಪ್ರತಿಯೊಬ್ಬರೂ ಆ ಚಟುವಟಿಕೆಯಿಂದ 60,000 ರಿಂದ 70,000 ರೂಪಾಯಿ ಗಳಿಸಿದ್ದಾರೆ ಎಂದಾಗ ಮತ್ತೊಮ್ಮೆ ಅಚ್ಚರಿಗೊಳ್ಳುವ ಸರದಿ ಮೋದಿ ಅವರದ್ದಾಗಿತ್ತು.

    ಇಂತಹ ಕೆಲಸದಿಂದ ತಾವು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಲ್ಲದೆ, ಕಷ್ಟದ ಸಮಯದಲ್ಲಿ ಗಳಿಸುವ ಮಾರ್ಗವನ್ನೂ ಕಂಡುಕೊಂಡಿದ್ದಾಗಿ ರುಬಿನಾ ತಿಳಿಸಿದರು.

    ರುಬಿನಾ ಅವರ ಮಕ್ಕಳ ಬಗ್ಗೆ ಮತ್ತು ಅವರು ಓದುತ್ತಿದ್ದಾರೋ ಇಲ್ಲವೋ ಎಂದು ಪ್ರಧಾನಿ ಕೇಳಿದರು, ಅದಕ್ಕೆ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು 10 ನೇ ತರಗತಿಯವರೆಗೆ ಓದಿದ್ದಾರೆ. ಅಲ್ಲದೆ, ಅವರಿಗೂ ಒಬ್ಬ ಮಗನಿದ್ದಾನೆ ಎಂದು ಹೇಳಿದರು. ತಮ್ಮ ಹೆಣ್ಣುಮಕ್ಕಳನ್ನು ಮುಂದೆ ಓದಿಸುವಂತೆ ಪ್ರಧಾನಿ ಮೋದಿ ಸಲಹೆ ನೀಡಿದರು.

    ತಮ್ಮ ನಿರುದ್ಯೋಗಿ ಮಗನಿಗಾಗಿ “ಟವೇರಾ” ವಾಹನವನ್ನು ತಂದಿರುವುದಾಗಿಯೂ ಪ್ರಧಾನಿಗೆ ರುಬಿನಾ ತಿಳಿಸಿದರು. ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿಸಲು ಬ್ಯಾಂಕ್ ಅಧಿಕಾರಿಗಳ ತಂಡವು ತಮ್ಮ ಗ್ರಾಮಗಳಿಗೆ ಭೇಟಿ ನೀಡಿದೆ ಎಂದೂ ಅವರು ಪ್ರಧಾನಿಗೆ ತಿಳಿಸಿದರು.

    ರುಬಿನಾ ಅವರ ಆತ್ಮಸ್ಥೈರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ಮಹಿಳೆಯರ ಈ ಆತ್ಮವಿಶ್ವಾಸ ಮಾತ್ರ ದೇಶವನ್ನು ‘ಆತ್ಮನಿರ್ಭರ (ಸ್ವಾವಲಂಬಿ) ಆಗಿ ಪರಿವರ್ತಿಸುತ್ತದೆ” ಎಂದು ಹೇಳಿದರು.

    72 ಸಾವಿರ ಮೈಲುಗಲ್ಲು ದಾಟಿ ದಾಖಲೆ ಬರೆದ ಸೂಚ್ಯಂಕ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ’ ಈಗ ಕಾನೂನುಬಾಹಿರ ಸಂಘಟನೆ: ಗೃಹ ಸಚಿವಾಲಯ ಹೀಗೆ ಘೋಷಿಸಿದ್ದೇಕೆ?

    ದಾಖಲೆ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ಬೆಳವಣಿಗೆ: ಹೀಗಿವೆ ಐದು ಪ್ರಮುಖ ಕಾರಣಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts