More

    ಆದಾಯ ತೆರಿಗೆ ಇಲಾಖೆಯಿಂದ ಸಿಹಿಸುದ್ದಿ : 2,24,829 ಕೋಟಿ ರೂ. ರೀಫಂಡ್

    ನವದೆಹಲಿ : ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು ಸಾವಿರಾರು ಜನರು ವೆಬ್​ಸೈಟ್​ ತೊಂದರೆಗಳ ಮಧ್ಯೆ ರಿಟರ್ನ್​ ಫೈಲ್ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಈ ಸಮಯದಲ್ಲಿ ತೆರಿಗೆ ಇಲಾಖೆಯು ನಿಯಮಿತವಾಗಿ ರಿಟರ್ನ್​ ಸಲ್ಲಿಸಿರುವ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ.

    2020 ರ ಏಪ್ರಿಲ್ 1 ನೇ ತಾರೀಕಿನಿಂದ 2021 ರ ಮಾರ್ಚ್ 29 ರ ನಡುವೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್​ ಟ್ಯಾಕ್ಸಸ್, ಒಟ್ಟು 2,24,829 ಕೋಟಿ ರೂಪಾಯಿಗಳ ಟ್ಯಾಕ್ಸ್ ರೀಫಂಡ್ ಮಾಡಿದೆಯಂತೆ. ಕಳೆದ ವರ್ಷಗಳಲ್ಲಿ ತೆರಿಗೆ ವಿನಾಯಿತಿಯ ಅರ್ಹತೆ ಪಡೆದಿರುವ 2.37 ಕೋಟಿ ತೆರಿಗೆದಾರರಿಗೆ ರೀಫಂಡ್ ನೀಡಲಾಗಿದೆ ಎಂದು ಇಲಾಖೆ ಟ್ವೀಟ್ ಮಾಡಿದೆ.

    ಇದನ್ನೂ ಓದಿ: ಐಎಎಸ್​ ಅಧಿಕಾರಿಗಳ ವರ್ಗಾವಣೆ: ಬಿಬಿಎಂಪಿ ಹೊಣೆ ರಾಕೇಶ್ ಸಿಂಗ್‌ಗೆ, ಕಂದಾಯಕ್ಕೆ ಮಂಜುನಾಥ್ ಪ್ರಸಾದ್

    ಮುಖ್ಯವಾಗಿ ಟಿಡಿಎಸ್​ನಲ್ಲಿ ಕಡಿತವಾಗಿರುವ ಟ್ಯಾಕ್ಸ್​ ಮೊತ್ತವನ್ನು, ವಿನಾಯಿತಿಗೆ ಅರ್ಹರಾದ 2,33,78,418 ವೈಯಕ್ತಿಕ ಪಾವತಿದಾರರಿಗೆ 85,012 ಕೋಟಿ ರೂಪಾಯಿ ಆದಾಯ ತೆರಿಗೆ ರೀಫಂಡ್ ಮಾಡಲಾಗಿದೆ. ಮತ್ತು 1,39,817 ಕೋಟಿ ರೂಪಾಯಿ ಕಾರ್ಪೊರೇಟ್ ಟ್ಯಾಕ್ಸ್ಅನ್ನು 2,85,438 ಪ್ರಕರಣಗಳಲ್ಲಿ ರೀಫಂಡ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

    ರೀಫಂಡ್​ ಸ್ಟೇಟಸ್ : ಅರ್ಹತೆ ಹೊಂದಿದ್ದೂ ಇನ್ನೂ ರೀಫಂಡ್ ಸಿಗದ ತೆರಿಗೆ ಪಾವತಿದಾರರು ತಮಗೆ ರೀಫಂಡ್ ಆಗಿದೆಯಾ ಎಂದು ಪರಿಶೀಲಿಸಲು ನೇರ ಲಿಂಕ್​ ಆದ tin.tin.nsdl.com/oltas/refund-status-pan.html ಗೆ ಭೇಟಿ ನೀಡಬಹುದು. ಟ್ಯಾಕ್ಸ್ ರೀಫಂಡ್ಅನ್ನು ರೀಫಂಡ್ ಬ್ಯಾಂಕರ್​ಗೆ ಕಳುಹಿಸಿದ 10 ದಿನಗಳ ನಂತರ ಈ ಬಗ್ಗೆ ಮಾಹಿತಿ ದೊರಕಲಿದೆ. ಪಾನ್ ಸಂಖ್ಯೆ ಮತ್ತು ಅಸೆಸ್​​ಮೆಂಟ್ ಇಯರ್​ಗಳ ಮಾಹಿತಿ ತುಂಬಿ ರೀಫಂಡ್ ಸ್ಟೇಟಸ್ ಅರಿಯಬಹುದಾಗಿದೆ. ಆದಾಗ್ಯೂ ರೀಫಂಡ್ ಆಗಿರದಿದ್ದಲ್ಲಿ ಇಲಾಖೆಯ ಅಧಿಕೃತ ವೆಬ್​ಸೈಟ್ ಮೂಲಕ ದೂರು ಸಲ್ಲಿಸಬಹುದಾಗಿದೆ. (ಏಜೆನ್ಸೀಸ್)

    VIDEO | ಭಾರತಕ್ಕೆ ಹಾರಿದ ರಫೇಲ್ ಫೈಟರ್ ಜೆಟ್​ಗಳು

    ಲಾಕ್​ಡೌನ್​ನಲ್ಲಿ ಕೆಲಸ ಹೋಯಿತು ಎಂದು ಸಾವಿಗೆ ಶರಣಾದ ಯುವಕ

    ನಾಳೆಯಿಂದ 45 ತುಂಬಿದ ಎಲ್ಲರಿಗೂ ಲಸಿಕೆ : ಸಮರ್ಪಕ ಕಾರ್ಯಾಚರಣೆಗೆ ಕೇಂದ್ರದ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts