More

    ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ. 31 ಗಡುವು

    ನವದೆಹಲಿ: 2022-23ನೇ ಸಾಲಿನ ಆದಾಯ ತೆರಿಗೆ ವಿವರ (ಐಟಿಆರ್​) ಸಲ್ಲಿಸುವ ಅವಧಿ ಡಿ. 31ರವರೆಗೆ ವಿಸ್ತರಿಸಲಾಗಿದೆ. ಬಡ್ಡಿ ಹಾಗೂ ನಿಗದಿತ ದಂಡ ಶುಲ್ಕದೊಂದಿಗೆ ಐಟಿಆರ್​ ಸಲ್ಲಿಸಬಹುದಾಗಿದ್ದು, ವೈಯಕ್ತಿಕ ಹಾಗೂ ಕಾರ್ಪೊರೇಟ್​ ಸಹಿತ ಎಲ್ಲ ವಿಭಾಗಗಳಿಗೆ ಈ ವಿಸ್ತರಣೆ ಅನ್ವಯವಾಗಲಿದೆ.

    2022-23ನೇ ಹಣಕಾಸು ವರ್ಷದ, ಅಂದರೆ 2023&2024ನೇ ಅಸೆಸ್​ಮೆಂಟ್​ ವರ್ಷದ ಐಟಿಆರ್​ ಸಲ್ಲಿಕೆ ಗಡುವು 2023ರ ಜು. 31ರಂದು ಕೊನೆಗೊಂಡಿತ್ತು. ಸಲ್ಲಿಸಲು ವಿಲರಾದ ವೈಯಕ್ತಿಕ ಆದಾಯ ತೆರಿಗೆದಾರರು ಡಿ. 31ರೊಳಗೆ ಸಲ್ಲಿಸಬಹುದೆಂದು ತಿಳಿಸಲಾಗಿದೆ.

    ಕಾನೂನಿನನ್ವಯ ವಿಳಂಬವಾಗಿ ಐಟಿಆರ್​ ಸಲ್ಲಿಸುವವರು 5 ಸಾವಿರ ರೂ. ದಂಡ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ವಾರ್ಷಿಕ ಒಟ್ಟು ಆದಾಯ 5 ಲಕ್ಷ ರೂ.ಗಿಂತ ಕೆಳಗಿದ್ದರೆ ದಂಡದ ಪ್ರಮಾಣ ಒಂದು ಸಾವಿರ ರೂ. ಆಗಿರಲಿದೆ. ಈ ನಡುವೆ, ಐಟಿಆರ್​ ಸಲ್ಲಿಕೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳನ್ನು ಹಣಕಾಸು ಸಚಿವಾಲಯ ಎಕ್ಸ್​ನಲ್ಲಿ ವಿಕಸಿತ್​ಭಾರತ್​ ಮತ್ತು ಫಿನ್​ಮಿನ್​ರಿವ್ಯೂ2023 ಹ್ಯಾಶ್​ಟ್ಯಾಗ್​ನೊಂದಿಗೆ ಹಂಚಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts