More

    70 ಸಾವಿರ ಗಡಿ ದಾಟಿದ ಬಿಎಸ್​ಇ, 21 ಸಾವಿರ ಮೀರಿದ ನಿಫ್ಟಿ: ಗರಿಷ್ಠ ಮಟ್ಟ ತಲುಪಿದ ಷೇರು ಸೂಚ್ಯಂಕ

    ಮುಂಬೈ: ಭಾರತದ ಎರಡೂ ಷೇರು ಮಾರುಕಟ್ಟೆಗಳಲ್ಲಿ ಕೂಡ ಗುರುವಾರ ದಾಖಲೆಯ ದಿನವಾಯಿತು. ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದವು. ಇದೇ ಮೊದಲ ಬಾರಿಗೆ ಬಿಎಸ್​ಇ ಸೂಚ್ಯಂಕವು 70 ಸಾವಿರ ಗಡಿಯನ್ನು ಹಾಗೂ ನಿಫ್ಟಿ ಸೂಚ್ಯಂಕವು 21 ಸಾವಿರ ಗಡಿಯನ್ನು ದಾಟಿ ಸ್ಥಿರಗೊಂಡಿದ್ದು ವಿಶೇಷವಾಗಿತ್ತು.

    ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆದ ಫೆಡರಲ್​ ರಿಸರ್ವ್​ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಕೆ ಪ್ರವೃತ್ತಿ ಗೋಚರಿಸಿ, ಸೂಚ್ಯಂಕಗಳು ಶೇಕಡಾ 1 ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದವು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 929.60 ಅಂಕ ಅಥವಾ ಶೇಕಡಾ 1.34 ಜಿಗಿದು 70,514.20 ಕ್ಕೆ ಸ್ಥಿರವಾಯಿತು, ಇದು ಸಾರ್ವಕಾಲಿಕ ಮುಕ್ತಾಯದ ಗರಿಷ್ಠ ಮಟ್ಟವಾಗಿದೆ. ದಿನದ ವಹಿವಾಟಿನ ಸಂದರ್ಭದಲ್ಲಿ ಇದು 1,018.29 ಅಂಕ ಹೆಚ್ಚಳವಾಗಿ ಸಾರ್ವಕಾಲಿಕ ಇಂಟ್ರಾ-ಡೇ ಗರಿಷ್ಠ 70,602.89 ತಲುಪಿತ್ತು.

    ನಿಫ್ಟಿ ಸೂಚ್ಯಂಕವು 256.35 ಅಂಕ ಅಥವಾ ಶೇಕಡಾ 1.23 ಹೆಚ್ಚಳ ಕಂಡು 21,182.70ರ ದಾಖಲೆಯ ಮುಕ್ತಾಯಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಇದು 284.55 ಅಂಕಗಳ ಹೆಚ್ಚಳ ಕಂಡು 21,210.90 ಕ್ಕೆ ಜಿಗಿದಿತ್ತು. ಇದು ಇಂಟ್ರಾ-ಡೇ ಗರಿಷ್ಠ ಮಟ್ಟವಾಗಿತ್ತು.

    ಟೆಕ್ ಮಹೀಂದ್ರಾ, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರ ಪ್ರಮುಖವಾಗಿ ಲಾಭ ಗಳಿಸಿದವು. ಪವರ್ ಗ್ರಿಡ್, ನೆಸ್ಲೆ, ಜೆಎಸ್‌ಡಬ್ಲ್ಯೂ ಸ್ಟೀಲ್, ಮಾರುತಿ, ಟೈಟಾನ್ ಮತ್ತು ಟಾಟಾ ಮೋಟಾರ್ಸ್ ಕುಸಿತ ಕಂಡವು.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಬುಧವಾರ 33.57 ಅಂಕ ಏರಿ 69,584.60 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 19.95 ಅಂಕ ಏರಿಕೆ ಕಂಡು 20,926.35 ಕ್ಕೆ ನೆಲೆಗೊಂಡಿತ್ತು.

    ಮೋಸ ಮಾಡಲು ಡೀಪ್‌ಫೇಕ್ ಚಿತ್ರ, ವೀಡಿಯೊ ಬಳಸಿಕೊಂಡು ನಕಲಿ ಸಂದರ್ಶನ: ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಇನ್ಫೋಸಿಸ್​ ನಾರಾಯಣ ಮೂರ್ತಿ

    ಸಂಸತ್ತಿನ​ ಭದ್ರತೆ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

    2023ರಲ್ಲಿ ಈತ ಸ್ವಿಗ್ಗಿ ಆರ್ಡರ್​ಗೆ ಖರ್ಚು ಮಾಡಿದ್ದು 42.3 ಲಕ್ಷ; ಭಾರತೀಯರ ನೆಚ್ಚಿನ ಖಾದ್ಯ ಯಾವುದು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts