More

    ಸಂಸತ್ತಿನ​ ಭದ್ರತೆ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

    ನವದೆಹಲಿ: ಭಾರೀ ಭದ್ರತಾ ಲೋಪದ ನಂತರ ಬುಧವಾರ ಸಂಸತ್ತಿನಲ್ಲಿ ಬಂಧಿತರಾದ ನಾಲ್ವರನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

    ಲೋಕಸಭೆಯೊಳಗೆ ನುಗ್ಗಿ ಸಿಕ್ಕಿಬಿದ್ದಿರುವ ಸಾಗರ್ ಶರ್ಮಾ, ಡಿ. ಮನೋರಂಜನ್ ಹಾಗೂ ಸಂಸತ್ತಿನ ಹೊರಗೆ ಬಂಧಿತರಾದ ನೀಲಂ ದೇವಿ, ಅಮೋಲ್ ಶಿಂಧೆ ಅವರನ್ನು ವಿವರವಾಗಿ ಪ್ರಶ್ನಿಸಬೇಕಾಗಿದೆ ಎಂದು ತನಿಖಾಧಿಕಾರಿಗಳು ಪ್ರತಿಪಾದಿಸಿದ್ದಾರೆ.

    ಸಂಸತ್ತಿನ ಭದ್ರತೆ ಉಲ್ಲಂಘನೆ ಘಟನೆಯಲ್ಲಿ ಬುಧವಾರ ಬಂಧಿಸಲಾದವರ ಪೈಕಿ ಇಬ್ಬರು ವ್ಯಕ್ತಿಗಳು ಲೋಕಸಭೆಗೆ ಪ್ರವೇಶಿಸಿ, ತಾವು ಅಕ್ರಮವಾಗಿ ಒಳಗೆ ತಂದಿದ್ದ ಡಬ್ಬಿಗಳಿಂದ ದಟ್ಟವಾದ ಹಳದಿ ಹೊಗೆಯನ್ನು ಹರಿಯಬಿಟ್ಟಿದ್ದರು.

    ಲಖನೌದ ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ. ಮನೋರಂಜನ್ ಅವರು ಲೋಕಸಭೆಯ ಒಳಗೆ ಹೊಗೆ ಬಾಂಬ್‌ಗಳನ್ನು ಕಳ್ಳಸಾಗಣೆ ಮಾಡಿದ್ದರು. ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್​ಗೆ ಇವರು ನುಗ್ಗಿ ಹರಿಬಿಟ್ಟ ದಟ್ಟವಾದ ಹಳದಿ ಹೊಗೆಯು ಸ್ವಲ್ಪ ಸಮಯದವರೆಗೆ ಭಯವನ್ನು ಉಂಟು ಮಾಡಿತು. ಸಂಸದರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಇಬ್ಬರನ್ನು ಹಿಡಿದಿದ್ದರು.

    ಸಂದರ್ಶಕರ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗದೆ ಉಳಿದ ಇಬ್ಬರು ಸಂಸತ್ತಿನ ಹೊರಗೆ ಹೊಗೆ ಬಾಂಬ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದರು.

    ಈ ಎಲ್ಲ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

    ಈ ಘಟನೆಯು ಭಯೋತ್ಪಾದಕ ದಾಳಿಯನ್ನು ಹೋಲುತ್ತದೆ ಎಂದು ಪೊಲೀಸರು ಗುರುವಾರ ನ್ಯಾಯಾಲಯದಲ್ಲಿ ವಾದಿಸಿದ್ದು, ಇವರ ಉದ್ದೇಶವೇನೆಂದು ಪ್ರಶ್ನಿಸಿದ್ದಾರೆ. “ಈ ಘಟನೆಯ ಉದ್ದೇಶವು ಕೇವಲ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾಗಿದೆಯೇ ಅಥವಾ ಯಾವುದಾದರೂ ಪ್ರಮುಖ ಕೃತ್ಯ ನಡೆಸುವುದಾಗಿದೆಯೇ? ಈ ಸಂಪೂರ್ಣ ಘಟನೆಯಲ್ಲಿ ಯಾವುದಾದರೂ ಭಯೋತ್ಪಾದಕ ಸಂಘಟನೆಯು ಭಾಗಿಯಾಗಿದೆಯೇ? ಎಂದು ತನಿಖೆ ನಡೆಸಬೇಕು” ಎಂದು ಪೊಲೀಸರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದಾರೆ.

    ಆರೋಪಿಗಳು ತಮ್ಮ ಪಾದರಕ್ಷೆ ಮೂಲಕ ಹೊಗೆ ಡಬ್ಬಿಗಳನ್ನು ಕಳ್ಳಸಾಗಣೆ ಮಾಡಿರಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಇವರು ಲಖನೌದಿಂದ ಎರಡು ಜೋಡಿ ಶೂಗಳನ್ನು ಖರೀದಿಸಿ ಇಲ್ಲಿಗೆ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನಿಂದ ಡಬ್ಬಿಗಳನ್ನು ಖರೀದಿಸಲಾಗಿದೆ. ಆರೋಪಿಗಳು ಕೆಲವು ಕರಪತ್ರಗಳನ್ನು ಒಯ್ಯುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೋಸ ಮಾಡಲು ಡೀಪ್‌ಫೇಕ್ ಚಿತ್ರ, ವೀಡಿಯೊ ಬಳಸಿಕೊಂಡು ನಕಲಿ ಸಂದರ್ಶನ: ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಇನ್ಫೋಸಿಸ್​ ನಾರಾಯಣ ಮೂರ್ತಿ

    ಬಿಜೆಪಿ ಕಾರ್ಯಕರ್ತನ ಕೈತುಂಡರಿಸಿದ ವ್ಯಕ್ತಿ ಮನೆ ನೆಲಸಮ: ಮಧ್ಯಪ್ರದೇಶದಲ್ಲಿ ಶುರುವಾಯಿತು ಬುಲ್​ಡೋಜರ್​ ಕಲ್ಚರ್​

    ವಾರ್ಷಿಕವಾಗಿ ಶೇಕಡಾ 45ಕ್ಕೂ ಅಧಿಕ ಲಾಭ ತಂದುಕೊಟ್ಟ ಮ್ಯೂಚುವಲ್ ಫಂಡ್​ಗಳಿವು: ಶೇಕಡಾ 80 ಲಾಭ ನೀಡಿದ ಫಂಡ್​ ಯಾವುದು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts