More

    ಮೆಲ್ಬೋರ್ನ್​ನಲ್ಲಿ ಒಂದು ಬಟರ್​​ ಚಿಕನ್​ ತಿಂದಿದ್ದಕ್ಕೆ 1.23 ಲಕ್ಷ ರೂ. ಜುಲ್ಮಾನೆ!

    ನವದೆಹಲಿ: ಸಪ್ತಸಾಗರದಾಚೆಗಿನ ಆಸ್ಟ್ರೇಲಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ನೆಚ್ಚಿನ ಬಟರ್​ ಚಿಕನ್​ ತಿನ್ನಲು 32 ಕಿ.ಮೀ. ದೂರ ಹೋಗಿದ್ದಲ್ಲದೆ, 1.23 ಲಕ್ಷ ರೂ. ದಂಡವನ್ನೂ ಪಾವತಿಸಿದ್ದಾನೆ.

    ಆಸ್ಟ್ರೇಲಿಯಾದಲ್ಲಿ ಕೋವಿಡ್​ ಪಿಡುಗು ಜೋರಾಗಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ವಾಹನಗಳಲ್ಲಿ ಸಂಚರಿಸಲು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇದರ ಹೊರತಾಗಿಯೂ ಮೆಲ್ಬೋರ್ನ್​ನ ನಿವಾಸಿ ತನ್ನ ಮನೆಯಿಂದ 32 ಕಿ.ಮೀ. ದೂರದಲ್ಲಿರುವ ತನ್ನ ಅಚ್ಚುಮೆಚ್ಚಿನ ಹೋಟೆಲ್​ನಲ್ಲಿ ಬಟರ್​ಚಿಕನ್​ ತಿನ್ನಲು ನಿರ್ಧರಿಸಿದ.

    ಇದನ್ನೂ ಓದಿ: ಮಳೆಯಿಂದ ನೀರು ತುಂಬಿದ್ದ ಕೆಳಸೇತುವೆಯಲ್ಲಿ ತೇಲಿದ ಶವ

    ಅದರಂತೆ ಆತ ತನ್ನ ಕಾರಿನಲ್ಲಿ ಮೆಲ್ಬೋರ್ನ್​ನ ವೆರ್ರಿಬೀ ಬಡಾವಣೆಯಿಂದ ಸಿಬಿಡಿಗೆ ತೆರಳಿದ್ದ. ಅಲ್ಲಿ ಬಟರ್​ ಚಿನ್​ ತಿಂದು ಸಮಾಧಾನವಾದ ಬಳಿಕ ಮನೆಗೆ ಹಿಂದಿರುಗುವಾಗ ಪೊಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆತನಿಗೆ 1.23 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

    ಈ ವ್ಯಕ್ತಿ ಮಾತ್ರವಲ್ಲ. ಇವರೊಂದಿಗೆ ಇನ್ನೂ 74 ಮಂದಿಗೆ ಲಕ್ಷಾಂತರ ರೂಪಾಯಿ ದುಂಡ ವಿಧಿಸಲಾಗಿದೆ ಎಂದು ಮೆಲ್ಬೋರ್ನ್​ ಪೊಲೀಸರು ತಿಳಿಸಿದ್ದಾರೆ. ಜನರು ಲಾಕ್​ಡೌನ್​ನಿಂದ ಬೇಸರಗೊಂಡಿದ್ದಾರೆ. ಇದರಿಂದ ಪಾರಾಗಲು ತಮ್ಮ ಸ್ನೇಹಿತರ ಮನೆಯಲ್ಲಿ ಸೇರಿಕೊಂಡು ಮದ್ಯಪಾನ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಕರೊನಾ ವೈರಾಣು ಸೋಂಕು ಪಸರಣದ ಸರಪಳಿ ತುಂಡರಿಸಲು ಲಾಕ್​ಡೌನ್​ ನಿಯಮ ಅನುಸರಿಸುವುದು ಮುಖ್ಯವಾದ್ದರಿಂದ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್​​ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts