More

    ಖ್ಯಾತ ಪತ್ರಕರ್ತನ ಬಯೋಪಿಕ್​ಗೆ ಕಥೆ ಬರೆಯಲಿದ್ದಾರೆ ರಾಜಮೌಳಿ ತಂದೆ; ಯಾರದು?

    ಏಪ್ರಿಲ್ 8 ರಂದು ಭಾರತದ ಪ್ರಸಿದ್ಧ ಕಾದಂಬರಿಕಾರ, ಪತ್ರಕರ್ತ ‘ಮಹರ್ಷಿ’ ಬಂಕಿಮ್ ಚಂದ್ರ ಚಟರ್ಜಿಯವರ 128 ನೇ ಪುಣ್ಯತಿಥಿ. ಈ ವಿಶೇಷ ದಿನದಂದು ಖ್ಯಾತ ನಿರ್ಮಾಪಕರಾದ ರಾಮ್ ಕಮಲ್ ಮುಖರ್ಜಿ ಮತ್ತು ಝೀ ಸ್ಟುಡಿಯೋಸ್‌ನ ಮಾಜಿ ಮುಖ್ಯಸ್ಥ ಸುಜೋಯ್ ಕುಟ್ಟಿ ಅವರು ತಮ್ಮ 1770 – ಏಕ್ ಸಂಗ್ರಾಮ್‌ಸಿನಿಮಾಗಾಗಿ ಪ್ರಸಿದ್ಧ ಬರಹಗಾರ ಹಾಗೂ ನಿರ್ದೇಶಕ ರಾಜಮೌಳಿ ಅವರ ತಂದೆಯಾಗಿರುವ ಕೆ.ವಿ ವಿಜಯೇಂದ್ರ ಪ್ರಸಾದ್ ಅವರನ್ನು ಕಥೆ ಬರೆಯಲು ಆಯ್ಕೆ ಮಾಡಿಕೊಂಡಿದ್ದಾರೆ.
    ಅಂದಹಾಗೆ, ‘1770-ಏಕ್ ಸಂಗ್ರಾಮ್‌‘ ಚಿತ್ರ ಬಂಕಿಮ್ ಚಂದ್ರ ಚಟರ್ಜಿಯವರ ಬಯೋಪಿಕ್ ಆಗಿರಲಿದ್ದು, ಈ ಬಯೋಪಿಕ್​ಗೆ ಬಂಕಿಮ್ ಅವರ ಹೆಚ್ಚು ಮಾರಾಟವಾದ ರಾಷ್ಟ್ರೀಯತಾವಾದಿ ಬಂಗಾಳಿ ಕಾದಂಬರಿ ಆನಂದಮಠಕಥೆಯಾಗಲಿದೆ. ಈ ಚಿತ್ರವನ್ನು ಎಸ್‌ಎಸ್ 1 ಎಂಟರ್‌ಟೈನ್‌ಮೆಂಟ್‌ನಿಂದ ಶೈಲೇಂದ್ರ ಕುಮಾರ್, ಪಿ ಕೆ ಎಂಟರ್‌ಟೈನ್‌ಮೆಂಟ್‌ನಿಂದ ಸೂರಜ್ ಶರ್ಮಾ ನಿರ್ಮಿಸಲಿದ್ದಾರೆ. ‘1770-ಏಕ್ ಸಂಗ್ರಾಮ್‌ಚಿತ್ರ ಒಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮೂರು ಭಾಷೆಗಳಲ್ಲಿ ಅಂದರೆ ಹಿಂದಿ, ತಮಿಳು, ತೆಲುಗಿನಲ್ಲಿ ರಿಲೀಸ್ ಆಗಲಿದೆ.
    ಸಿನಿಮಾ ಬಗ್ಗೆ ಮಾತಾಡಿದ ರಾಜಮೌಳಿ ತಂದೆ ಕೆ.ವಿ ವಿಜಯೇಂದ್ರ ಪ್ರಸಾದ್ ಅವರು, ”ಆನಂದಮಠಕ್ಕೆ, ಸುಜೋಯ್ ಅವರು ನನ್ನನ್ನು ಸಂಪರ್ಕಿಸಿದಾಗ ನನಗೆ ಸ್ವಲ್ಪ ದಿಗ್ಭ್ರಮೆಯಾಯಿತು. ನಾನು ಹಲವು ವರ್ಷಗಳ ಹಿಂದೆ ಈ ಕಾದಂಬರಿಯನ್ನು ಓದಿದ್ದೆ. ಕೆಲ ಸಮಯ ಹಿಡಿದರೂ, ಈಗ ನಾನು ಈ ಕಾದಂಬರಿ ಮತ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಾಜಾ ದೃಷ್ಟಿಕೋನದಿಂದ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಆದರೆ, ಆನಂದಮಠದ ಮಾಂತ್ರಿಕತೆಯನ್ನು ಮರುಸೃಷ್ಟಿಸುವುದು ನನಗೆ ದೊಡ್ಡ ಸವಾಲಾಗಿದೆ,” ಎಂದು ಹೇಳಿದ್ದಾರೆ
    ಈ ಮೆಗಾ ಬಜೆಟ್ ಚಲನಚಿತ್ರವು ಹೈದರಾಬಾದ್, ಪಶ್ಚಿಮ ಬಂಗಾಳ ಮತ್ತು ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ. ಪ್ರಸ್ತುತ ನಿರ್ಮಾಪಕರು ಚಿತ್ರಕಥೆಯ ಮೊದಲ ಡ್ರಾಫ್ಟ್ ಅನ್ನು ಓಕೆ ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನು, ಮೇ ಅಂತ್ಯದ ವೇಳೆಗೆ ಚಿತ್ರದ ಟೀಸರ್ ಮತ್ತು ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಎನ್ನಲಾಗಿದೆ. ಆ ಮೂಲಕ, ದೊಡ್ಡ ಬಜೆಟ್ ಸಿನಿಮಾಗಳಿಗೆಲ್ಲಾ ಕೆ.ವಿ ವಿಜಯೇಂದ್ರ ಪ್ರಸಾದ್ ಅವರಿಗಿಂತ ಬೇರೆ ಒಳ್ಳೆಯ ಬರಹಗಾರರು ಇಲ್ಲವೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಸಿನಿಪ್ರಿಯರು

    ರಾಮನವಮಿಯಂದು ಮುಸ್ಲಿಂ ಯುವತಿಯಾಗಿ ಮಿಂಚಿದ ರಶ್ಮಿಕಾ; ಕಿಕ್ ಕೊಡುತ್ತೆ ಹೊಸ ಚಿತ್ರದ ಲುಕ್

    ವಾರ ಪೂರ್ತಿ ‘ಕೆಜಿಎಫ್ 2’ದೇ ಬಾಕ್ಸ್ ಆಫೀಸ್​ನಲ್ಲಿ ಹವಾ; ಕನ್ನಡ ನಟನ ಚಿತ್ರಕ್ಕೆ ಹೆದರಿ ಸೈಡ್ ಕೊಟ್ಟ ಬಾಲಿವುಡ್ ನಟ!

    ಡ್ರಗ್ಸ್ ಕೇಸ್ ಚಿಂತೆಯಿಲ್ಲದೆ ಮಕ್ಕಳ ಜತೆ ಶಾರುಖ್ ಜಾಲಿ ರೈಡ್! ಫೋಟೋಗಳು ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts