More

    ನೊಂದ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ? ನಾವು ಬೇಲ್​ ಪಡೆಯಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

    ಬೆಂಗಳೂರು: ‘ನಮ್ಮ ಅಭ್ಯರ್ಥಿ ವಿರುದ್ಧ ಎಫ್ಐಆರ್ ದಾಖಲಿಸಿದಾಕ್ಷಣ ನಾವು ಹೆದರುತ್ತೇವೆ ಎಂದು ಕೊಂಡಿದ್ದರೆ ಅದು ನಿಮ್ಮ ಭ್ರಮೆ. ಕುಸುಮಾ ಇನ್ನೂ ಕಣ್ಣು ಬಿಟ್ಟಿಲ್ಲ. ಈಗಾಗಲೇ ಅವರ ಮೇಲೆ ಕೇಸ್ ಹಾಕಿಸಿದ್ದಾರೆ. ಇದಕ್ಕಿಂತಲೂ ಸಣ್ಣ ಮತ್ತು ನೀಚರಾಜಕಾರಣ ಯಾವುದಿದೆ… ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಆರ್​ಆರ್​ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಕಾರು ಚಾಲಕನ ವಿರುದ್ಧ ಬುಧವಾರ ಎಫ್​ಐಆರ್​ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದ ಡಿ.ಕೆ. ಶಿವಕುಮಾರ್, ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಹೆದರುವ ಪ್ರಶ್ನೆಯೇ ಇಲ್ಲ ಎಂದರು.

    ನೊಂದ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ? ನಾವು ಬೇಲ್​ ಪಡೆಯಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ನೀಚರಾಜಕಾರಣವನ್ನು ನಾನೆಂದೂ ನೋಡಿಲ್ಲ. ಕಾನೂನು ಗೊತ್ತಿರುವ ಅಭ್ಯರ್ಥಿ ಕುಸುಮಾ. ನೊಂದಿರುವ ಹೆಣ್ಣು ಮಗಳು ಅಂತ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ನಿನ್ನೆ(ಬುಧವಾರ) ನಾಮಪತ್ರ ಸಲ್ಲಿಸಲು ಸಮಯ ಕೇಳಿದ್ದಾರೆ. ಕುಸುಮಾ, ನಾನು, ಸಿದ್ದರಾಮಯ್ಯ ಒಂದೊಂದು ದಿಕ್ಕಿನಿಂದ ಬಂದು ನಾಮಪತ್ರ ಸಲ್ಲಿಸಿದ್ದೇವೆ. ರಾಜಕೀಯದಲ್ಲಿ ಕುಸುಮಾ ಇನ್ನೂ ಕಣ್ಣು ಬಿಟ್ಟಿಲ್ಲ. ಆಗಲೇ ಅವರ ಮೇಲೆ ಕೇಸ್ ಹಾಕಿಸಿದ್ದಾರೆ. ಚುನಾವಣಾಧಿಕಾರಿ ಕಚೇರಿಯ ನೂರು ಮೀಟರ್ ಒಳಗಡೆ ಶಾಸಕರು ಮತ್ತು ಸಚಿವರು ಕೂಡ ಬಂದಿದ್ದರು. ಅವರ ಮೇಲೆ ಏಕೆ ಕೇಸ್ ಹಾಕಲಿಲ್ಲ? ಎಂದು ಡಿಕೆಶಿ ಪ್ರಶ್ನಿಸಿದರು.

    ಸಿದ್ದರಾಮಯ್ಯ ಮೇಲೆ ಕೇಸ್ ಹಾಕಲಿ. ಆದ್ರೆ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ ಎಂದು ಕಿಡಿಕಾರಿದರು. ಇದೆಲ್ಲವೂ ಸರ್ಕಾರದ ಕುಮ್ಮಕ್ಕು ಎಂದು ಗಂಭೀರ ಆರೋಪ ಮಾಡಿದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಹೆಣ್ಣು ಮಗಳ ಮೇಲಿನ ಶೋಷಣೆಯನ್ನು ಎದುರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು. ನಮ್ಮ ಕಾರ್ಯಕರ್ತರನ್ನ ಬೆದರಿಸುವ ಕೆಲಸ ಆಗ್ತಿದೆ ಎಂದು ಆರೋಪ ಮಾಡಿದರು.

    12 ಕೋಟಿ ಸಂಪತ್ತಿನ ಒಡತಿ ಕುಸುಮಾ, ಅಫಿಡವಿಟ್​ನಲ್ಲಿ ಪತಿಯ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ!

    ಚುನಾವಣೆಗೂ ಮುನ್ನವೇ ಮುನಿರತ್ನಗೆ ಜ್ಯೋತಿಷಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts