More

    ಕರಣ್​ ಜೋಹರ್​ ‘ಪ್ರೇಮ್​ ಕಹಾನಿ’ ಬಿಡುಗಡೆ ಮುಂದಕ್ಕೆ; ಫೆಬ್ರವರಿ ಬದಲು ಏಪ್ರಿಲ್​ನಲ್ಲಿ

    ಮುಂಬೈ: ಕರಣ್​ ಜೋಹರ್​ ಚಿತ್ರ ನಿರ್ದೇಶನಕ್ಕೆ ಮರಳಿರುವುದು, ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್ ಅಭಿನಯದಲ್ಲಿ ‘ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ’ ಎಂಬ ಚಿತ್ರ ನಿರ್ದೇಶಿಸಿರುವುದು, ಆ ಚಿತ್ರ 2023ರ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿರುವುದು ಗೊತ್ತಿರುವ ವಿಷಯವೇ. ಈಗ ಆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಫೆಬ್ರವರಿಯ ಬದಲು ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ. ಈ ಸಂಬಂಧ ಇನ್​ಸ್ಟಾಗ್ರಾಂನಲ್ಲಿ ಇಷ್ಟುದ್ಧ ಪತ್ರ ಬರೆದಿದ್ದಾರೆ ಕರಣ್​.

    ಇದನ್ನೂ ಓದಿ: ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಕಾಂತಾರ ಸಿನಿಮಾ ಮತ್ತೊಂದು ವಿವಾದದ ಸುಳಿಯಲ್ಲಿ…!

    ಏಳು ವರ್ಷಗಳ ನಂತರ ನನ್ನ ಮೊದಲ ಪ್ರೀತಿಯಾದ ನಿರ್ದೇಶನಕ್ಕೆ ಮರಳಿದ್ದೇನೆ. ಈ ಚಿತ್ರದಲ್ಲಿ ಹಲವು ಪ್ರತಿಭಾವಂತ ನಟ-ನಟಿಯರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೊಡ್ಡ ತಾರಾಗಣ, ಅದ್ಭುತ ಹಾಡುಗಳು ಮತ್ತು ಮನಮುಟ್ಟುವ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರವು 2023ರ ಏಪ್ರಿಲ್​ 28ರಂದು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ವರ್ಷದ ಕೊನೆಯ ಚಿತ್ರವಾಗಿ ಬಿಡುಗಡೆಯಾಗಲಿದೆ ಧನಂಜಯ್​ ಅಭಿನಯದ ‘ಜಮಾಲಿಗುಡ್ಡ’

    ‘ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ’ ಚಿತ್ರದಲ್ಲಿ ರಣವೀರ್​ ಮತ್ತು ಆಲಿಯಾ ಜತೆಗೆ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್​, ಶಬನಾ ಆಜ್ಮಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಮುಂಬೈ, ದೆಹಲಿ ಮುಂತಾದ ಕಡೆ ಚಿತ್ರೀಕರಣ ಮುಗಿದಿದ್ದು, ಚಿತ್ರವು ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts