More

    ಯಶ್ ಮುಂದಿನ ಚಿತ್ರದ ಪಾತ್ರ ರಿವೀಲ್; ನರ್ತನ್​ ನಿರ್ದೇಶನದ ಚಿತ್ರದಲ್ಲಿ ನೇವಿ ಆಫೀಸರ್…

    ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುತೇಕ ಎಲ್ಲ ಸ್ಟಾರ್ ನಟರ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ಗೊತ್ತಿದೆ. ಸದ್ಯ ನಟಿಸುತ್ತಿರುವ ಮತ್ತು ಮುಂದೆ ನಟಿಸಬೇಕಿರುವ ಚಿತ್ರಗಳನ್ನೂ ಕೆಲವರು ಘೋಷಿಸಿ ಕೊಂಡಿದ್ದಾರೆ. ಆದರೆ, ನಟ ಯಶ್ ಅವರನ್ನು ಬಿಟ್ಟು!

    ಹೌದು, ‘ಕೆಜಿಎಫ್ ಚಾಪ್ಟರ್ 2’ ಮುಗಿದ ಮೇಲೆ ಯಶ್ ಮುಂದಿನ ಚಿತ್ರ ಯಾವುದು? ಈಗಲೂ ಆ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವೇ. ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆಯಾದರೂ, ಅದಿನ್ನೂ ಅಧಿಕೃತವಾಗಿಲ್ಲ. ಬೇರೆ ಭಾಷೆಯ ನಿರ್ದೇಶಕರ ಹೆಸರು ತಳುಕು ಹಾಕಿಕೊಂಡರೂ ಆ ಬಗ್ಗೆಯೂ ಯಶ್ ತುಟಿ ಬಿಚ್ಚಿಲ್ಲ.

    ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್​ ನಟಿಸಲಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದೀಗ ಹೊಸ ಸುದ್ದಿ ಏನೆಂದರೆ, ಆ ಚಿತ್ರದಲ್ಲಿ ಯಶ್ ನೇವಿ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲಿ ಯಶ್​ ನಿಭಾಯಿಸಲಿರುವ ಪಾತ್ರದ ಬಗ್ಗೆ ಅಭಿಮಾನಿಗಳು ತುಂಬ ಕ್ಯೂರಿಯಸ್ ಆಗಿದ್ದಾರೆ. ಫ್ಯಾನ್​ ಮೇಡ್​ ಲುಕ್​ ಮೂಲಕವೂ ಚಿತ್ರ ಸಖತ್ ಕುತೂಹಲ ಮೂಡಿಸುತ್ತಿದೆ.

    ಇನ್ನು ಟಾಲಿವುಡ್​ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಯಶ್​ಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. ಈ ಬಗ್ಗೆ ಗಾಸಿಪ್ ಹರಿದಾಡಿದ್ದರೂ, ಅಧಿಕೃತವಾಗಿಲ್ಲ. ಸದ್ಯ ಯಶ್ ‘ಕೆಜಿಎಫ್’ ಬಿಡುಗಡೆ ಕಡೆಗೆ ಗಮನ ಹರಿಸಿದ್ದಾರೆ. ಇತ್ತ ವಿಜಯ್ ದೇವರಕೊಂಡ ಅವರೊಂದಿಗೆ ‘ಲೈಗರ್’ ಚಿತ್ರದಲ್ಲಿ ಜಗನ್ನಾಥ್ ತೊಡಗಿಸಿಕೊಂಡಿದ್ದಾರೆ. ನರ್ತನ್​ ಮುಂದಿನ ಪ್ರಾಜೆಕ್ಟ್​ನ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts