More

    ಇಂಟರ್’ನ್ಯಾಷನಲ್ ಸ್ಟಾರ್ ಆದ ನಟ Yash, ಎಲ್ಲೆಲ್ಲೂ KGF-2 ಹವಾ!

    KGF ಚಿತ್ರದ ಹವಾ ಕರ್ನಾಟಕದಲ್ಲೇ ಅಲ್ಲ, ಬದಲಿಗೆ ಇಡೀ ದೇಶದಲ್ಲಿ ಕಡಿಮೆ ಆಗಿಲ್ಲ. ಈ ಮಧ್ಯೆ KGF Chapter-2 ಸಿನಿಮಾದ ರಿಲೀಸ್ ಡೇಟ್ ಫಿಕ್ಸಾ ಆಗಿತ್ತು. ಇನ್ನು, KGF-2 ಚಿತ್ರಕ್ಕೆ ಟಕ್ಕರ್ ಕೊಡೋಕೆ ಸೌತ್ ಸಿನಿ ಸ್ಟಾರ್​ಗಳ ಚಿತ್ರಗಳು ಕ್ಯೂ ನಿಂತಿವೆ. ನ್ಯಾಷನಲ್ ಸ್ಟಾರ್ ಆಯಿತು, ಇದೀಗ ಇಂಟರ್​ನ್ಯಾಷನಲ್ ಸ್ಟಾರ್ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದಾರೆ ಯಶ್. ಅದು, ಹೇಗೆ ಅಂತೀರಾ?. ಟ್ರೆಂಡಿಂಗ್ ಅನ್ನುವ ವಿಚಾರ ಬಂದರೆ, ಅದರಲ್ಲಿಯೂ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು KGF-2 ಚಿತ್ರ.
    ಸೋಶಿಯಲ್ ಮೀಡಿಯಾದಲ್ಲಂತೂ ರಾಕಿ ಭಾಯ್​ನ ಹವಾ ಜೋರಾಗಿಯೇ ಇದೆ. ಟ್ವಿಟರ್​ನಲ್ಲಿ ನಂಬರ್.1 ಸ್ಥಾನದಲ್ಲಿದ್ದರೆ ಇತ್ತ ಭೋಜ್​ಪುರಿ ಭಾಷೆಯಲ್ಲಿ ಯುಟ್ಯೂಬ್​ನಲ್ಲಿ ರಿಲೀಸ್ ಆಗಿರುವ ಈ ಚಿತ್ರ 450 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಮತ್ತೊಂದೆಡೆ, ಗೂಗಲ್​ನಲ್ಲಿ ಇಂಟರ್​ನ್ಯಾಷನಲ್ ಸ್ಟಾರ್ ಅಂತ ಸರ್ಚ್ ಮಾಡಿದರೆ, ಮೊದಲು ಕಾಣಿಸುವುದು ರಾಕಿಂಗ್ ಸ್ಟಾರ್ ಯಶ್ ಅವರ ವಿಕಿಪೀಡಿಯಾ ಪ್ರೋಫೈಲ್. ಹಾಗಾಗಿ, ಯಶ್ ಇದೀಗ ಇಂಟರ್​ನ್ಯಾಷನಲ್ ಸ್ಟಾರ್ ಆಗಿರುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ.
    KGF-2 ರಿಲೀಸ್ ಡೇಟ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಇದೇ ಸಮಯದಲ್ಲಿ ಬೇರೆ ಸ್ಟಾರ್​ಗಳು ಅಂದರೆ ಮೆಗಾ ಸ್ಟಾರ್ ಚಿರಂಜೀವಿ ಅವರ ಆಚಾರ್ಯ, RRR, ಬೀಸ್ಟ್, ಲಾಲ್ ಸಿಂಗ್ ಚಡ್ಡಾ ಚಿತ್ರಗಳು KGF-2 ರಿಲೀಸ್ ಆಗುವ ಆಸು ಪಾಸಿನಲ್ಲೇ ಬಿಡುಗಡೆಯಾಗುತ್ತಿವೆ. ಆದರೂ, ಯಾವುದೇ, ಸಿನಿಮಾ ಬಂದರೆ ನಮಗೆ ಏನು? ಎನ್ನುತ್ತಿದೆ ರಾಕಿ ಭಾಯ್ ಟೀಂ. ಒಟ್ಟಿನಲ್ಲಿ, ಅಖಾಡದಲ್ಲಿ ಇದ್ದೇ ಇರುತ್ತೀವಿ ಎನ್ನುತ್ತಿದೆ ರಾಕಿ ಭಾಯ್ ಅಂಡ್ ಟೀಂ ಸಿದ್ದವಾಗಿದೆ.
    ಇನ್ನು, ಇತ್ತೀಚೆಗೆ ರಾಕಿ ಭಾಯ್ ಅಂಟ್ ಟೀಂ ಶೂಟಿಂಗ್ ಮುಗಿಸಿದ ನಂತರ ಬಿಡುವು ಮಾಡಿಕೊಂಡು ಆನೆ ಗುಡ್ಡ ದೇವಸ್ಥಾನ, ಕೊಲ್ಲೂರು ಮೂಕಾಂಭಿಕ ದೇವಸ್ಥಾನಗಳನ್ನು ಭೇಟಿ ಕೊಡುವುದರ ಜೊತೆಗೆ, ತಾಕಿ ಭಾಯ್ ಬ್ಯಾಟ್ ಹಿಡಿದು ಅಖಾಡಕ್ಕೂ ಕೂಡ ಇಳಿದಿದ್ದರು. ಒಟ್ಟಿನಲ್ಲಿ, KGF ಚಿತ್ರದ ಮೂಲಕ ಇಂಟರ್​ನ್ಯಾಷನಲ್ ಸ್ಟಾರ್ ಆದ ರಾಕಿ ಭಾಯ್ ಅವರ ಪ್ರಸಿದ್ಧಿ ಎಲ್ಲಿಯ ವೆರೆಗೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ

    ಮೈ ತುಂಬಾ ಇರುವ ಮಾಜಿ ಪತಿಯ ಗುರುತುಗಳನ್ನು ಅಳಿಸಿ ಹಾಕಲಿದ್ದಾರೆ ಸಮಂತಾ?

    ಯುಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಕನ್ನಡದ ‘ಲವ್ ಮಾಕ್ಟೆಲ್ 2’ ಟ್ರೈಲರ್​ನದ್ದೆ ಹವಾ…

    ‘ರಾಧೆ ಶ್ಯಾಮ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ! ಅಪ್ಪು ಅವರ ‘ಜೇಮ್ಸ್’ಗೆ ದಾರಿ ಕೊಟ್ಟ ಡಾರ್ಲಿಂಗ್ ಪ್ರಭಾಸ್…

    ಹಾಟ್ ಫೋಟೋಶೂಟ್ ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಮಾಳವಿಕಾ! ನೆಟ್ಟಿಗರು ಫಿದಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts