More

    ರಸ್ತೆ ನಿಯಮಗಳ್ನು ಕಡ್ಡಾಯವಾಗಿ ಪಾಲಿಸಿ; ಪ್ರವೀಣಕುಮಾರ

    ರಾಣೆಬೆನ್ನೂರ: ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಕಾಯಿಲೆಗಳಿಂದ ಸಾಯುವವರ ಸಂಖ್ಯೆಗಳಿಗಿಂತ ಅಪಘಾತಗಳಲ್ಲಿ ಅಸುನೀಗುವವರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ತಡೆಗಟ್ಟಲು ರಸ್ತೆಯಲ್ಲಿ ಪ್ರಯಾಣಿಸುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಚಾರ ಠಾಣೆ ಪಿಎಸ್‌ಐ ಪ್ರವೀಣಕುಮಾರ ಹೇಳಿದರು.
    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಸಂಪೂರ್ಣವಾಗಿ ಏಕಾಗೃತೆ ಹಾಗೂ ಜಾಗೃತಿಯಿಂದ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕು. ಅಪಘಾತವಾದಾಗ ತಮ್ಮ ಜೀವಕಷ್ಟೇ ಕುತ್ತು ಬರುವದಲ್ಲದೆ ಸಹ ಪ್ರಯಾಣಿಕರ ಜೀವ ಹಾಗೂ ಕುಟುಂಬದ ಅವಲಂಬಿತರ ಜೀವನಕ್ಕೂ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ವಾಹನ ಚಾಲನೆ ಸಮಯದಲ್ಲಿ ಎಚ್ಚರದಿಂದಿರಬೇಕು ಎಂದರು.
    ಪ್ರಾಂಶುಪಾಲ ಡಾ. ಎಸ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
    ಸಹಾಯಕ ಪಿಎಸ್‌ಐ ಎಸ್.ಎ. ದೊಡ್ಡಮನಿ, ಎಸ್.ಬಿ. ಕಮ್ಮಾರ, ಪಿಸಿ ನೀಲನಗೌಡ ಗೌಡರ, ಹಿರಿಯ ಉಪನ್ಯಾಸಕ ಡಾ. ಎಲ್.ಎಂ. ಪೂಜಾರ, ಎನ್‌ಎಸ್‌ಎಸ್ ಅಧಿಕಾರಿ ಗಂಗಮ್ಮಾ ಎಂ., ಅರುಣಕುಮಾರ ಚಂದನ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts