ರಾಮದುರ್ಗ: ಪ್ರವಾಹದಿಂದ ರಾಮದುರ್ಗ ಪಟ್ಟಣ ಸೇರಿ 32 ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಪ್ರವಾಹಪೀಡಿತ ಪ್ರದೇಶದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದ್ದು, ದುರಸ್ತಿಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದ್ದಾರೆ.
70 ಲಕ್ಷ ರೂ.ವೆಚ್ಚದಲ್ಲಿ ಸ್ಥಳಾಂತರಗೊಂಡ ರಂಕಲಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ, 40 ಲಕ್ಷ ರೂ.ವೆಚ್ಚದಲ್ಲಿ 54 ಲಕ್ಷ ರೂ.ವೆಚ್ಚದಲ್ಲಿ ಗೊಣ್ಣಾಗರ ಗ್ರಾಮದಿಂದ ಕೊಳಚಿ ಕಾಲುವೆವರೆಗೆ, ತಲಾ 40 ಲಕ್ಷ ರೂ.ವೆಚ್ಚದಲ್ಲಿ ಸಂಗಳ, ಮನಿಹಾಳ ಹಾಗೂ ಸುರೇಬಾನ ಎಸ್.ಸಿ ಕಾಲನಿಯಲ್ಲಿ ಸಿ.ಸಿ ರಸ್ತೆ, 40 ಲಕ್ಷ ರೂ.ವೆಚ್ಚದಲ್ಲಿ ತಾಲೂಕಿನ ಕಿತ್ತೂರ ಗ್ರಾಮದಿಂದ ಚಿಕ್ಕನರಗುಂದ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 127 ಲಕ್ಷ ರೂ.ಅನುದಾನ ಬಿಡುಗಡೆಯಾಗುತ್ತಿದ್ದು, ಶೀಘ್ರ ಅವಶ್ಯವಿರುವೆಡೆ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದರು.
ಜಿಪಂ ಸದಸ್ಯರಾದ ಶಿವಕ್ಕ ಬೆಳವಡಿ, ಮಾರುತಿ ತುಪ್ಪದ, ತುರನೂರ ಗ್ರಾಪಂ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸುರೇಬಾನ ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಮದಕಟ್ಟಿ, ಗೊಣ್ಣಾಗರ ಗ್ರಾಮದ ಮುಖಂಡ ನಿಂಗನಗೌಡ ಪಾಟೀಲ, ಎಪಿಎಂಸಿ ನಿರ್ದೇಶಕ ದ್ಯಾವಪ್ಪ ಬೆಳವಡಿ, ಸಂಗನಗೌಡ ಪಾಟೀಲ, ಎಂ.ಎಂ. ಆತಾರ, ಮೈಲಾರ ಬಸಿಡೋಣಿ, ಶ್ರೀಶೈಲ ಮೆಳ್ಳಿಕೇರಿ, ನಿಂಗಪ್ಪ ಮೆಳ್ಳಿಕೇರಿ, ಆರ್.ಝಡ್.ಸೊಲ್ಲಾಪುರ, ರವಿಕುಮಾರ ದಳವಾಯಿ, ನಾಗರಾಜ, ಪ್ರತಾಪ ರಂಕಲಕೊಪ್ಪ ಇತರರು ಇದ್ದರು.