More

    ಮುಂದಿನ ಜೂನ್ ವೇಳೆಗೆ ಮನೆ ಮನೆಗೆ ಭದ್ರಾ ನೀರು ಪೂರೈಕೆ

    ತರೀಕೆರೆ: ಭದ್ರಾ ಜಲಾಶಯದಿಂದ ಹೊಸದುರ್ಗ, ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ಮನೆ ಮನೆಗೆ ಶುದ್ಧೀಕರಿಸಿದ ನೀರು ಪೂರೈಸುವ ಯೋಜನೆಗೆ 249 ಕೋಟಿ ರೂ. ಮಂಜೂರಾಗಿದ್ದು, ಮುಂದಿನ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆಯಾಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು. ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ತರೀಕೆರೆ, ಅಜ್ಜಂಪುರ ಹಾಗೂ ಹೊಸದುರ್ಗ ತಾಲೂಕಿನ ಮನೆ, ಮನೆಗೆ ಶುದ್ಧ ನೀರು ಪೂರೈಸುವ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಹೊಸದುರ್ಗದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಗ್ರೀನ್‌ಸಿಗ್ನಲ್ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಕಡೂರು ಮತ್ತು ಚಿಕ್ಕಮಗಳೂರಿನ ಕೆಲವು ಗ್ರಾಮವನ್ನು ಈ ಯೋಜನೆಗೆ ಸೇರ್ಪಡೆಗೊಳಿಸಿ ಕಾಮಗಾರಿ ಆರಂಭ ವಿಳಂಬಗೊಳಿಸಿತ್ತು. ಇದೀಗ ಬಹುಪಯುಕ್ತ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿದ್ದು, ಹೊಸದುರ್ಗ ತಾಲೂಕಿನ 346 ಗ್ರಾಮಗಳು ಹಾಗೂ ತರೀಕೆರೆ-ಅಜ್ಜಂಪುರ ತಾಲೂಕಿನ 172 ಗ್ರಾಮಗಳ ಮನೆ, ಮನೆಗೆ ಭದ್ರಾ ಜಲಾಶಯದಿಂದ ಶುದ್ಧೀಕರಿಸಿದ ನೀರು ನೇರವಾಗಿ ಪೂರೈಕೆಯಾಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts