ಹದಗೆಟ್ಟ ಸಜಂಕಾಡಿ ಕಾಲನಿ ರಸ್ತೆ

Sajankadi road

-ಶಶಿ ಕುತ್ಯಾಳ, ಈಶ್ವರಮಂಗಲ

ಪರಿಶಿಷ್ಟ ಜಾತಿಯ ಬಹಳಷ್ಟು ಮನೆಗಳಿರುವ ಪಡುವನ್ನೂರು ಗ್ರಾಮದ ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಲವು ವರ್ಷಗಳ ಹಿಂದೆ ಡಾಂಬರು ಅಳವಡಿಸಲಾಗಿದ್ದ ಈ ರಸ್ತೆಯ ಡಾಂಬರು ಈಗ ಸಂಪೂರ್ಣವಾಗಿ ಎದ್ದು ಮಣ್ಣಿನ ರಸ್ತೆಗಿಂತಲೂ ಕಡೆಯಾಗಿ ಸಂಚಾರವೇ ದುಸ್ತರವಾಗಿದೆ.

ಈಶ್ವರಮಂಗಲ-ಸುಳ್ಯಪದವು ಅಂತಾರಾಜ್ಯ ಸಂಪರ್ಕ ರಸ್ತೆಯ ಮಡ್ಯಾಲಮೂಲೆ ಎಂಬಲ್ಲಿಂದ ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿ ಮೂಲಕ ಕುತ್ಯಾಳ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಬಹಳಷ್ಟು ಮಂದಿಯ ಉಪಯೋಗದ ಈ ರಸ್ತೆ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಜನಸಂಚಾರಕ್ಕೂ ಅಯೋಗ್ಯ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಂತೂ ಈ ರಸ್ತೆಯ ಅವ್ಯವಸ್ಥೆ ಕೇಳುವುದೇ ಬೇಡ. ಮಳೆ ನೀರು ರಸ್ತೆ ಮಧ್ಯೆಯೇ ತೋಡಾಗಿ ಹರಿದು ಹೋಗುವುದು ಮಳೆಗಾಲದಲ್ಲಿ ಇಲ್ಲಿ ಸಾಮಾನ್ಯ.

ರಸ್ತೆ ದುಸ್ಥಿತಿ

ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಸುಮಾರು 30ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ಅಲ್ಲದೆ ಇತರ ಜಾತಿ ಮತ್ತು ಸಮುದಾಯಕ್ಕೆ ಸೇರಿದ ಹಲವು ಮನೆಗಳಿವೆ. ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿಯ ಹೃದಯ ಭಾಗದಲ್ಲಿ ಶ್ರೀ ಮಹಾಮಾಯಿ ಮಾರಿಯಪ್ಪ ಗುಡಿಯಿದ್ದು, ಇಲ್ಲಿ ಪ್ರತಿ ವರ್ಷ ಏಪ್ರಿಲ್‌ನಲ್ಲಿ ವರ್ಷಾವಧಿ ಮಹಾಪೂಜೆ ನಡೆಯುತ್ತಿದೆ. ಈ ಸಂದರ್ಭ ದೂರದ ಊರುಗಳಿಂದಲೂ ಭಕ್ತರು ಬರುತ್ತಾರೆ. ಅಲ್ಲದೆ ಪ್ರತಿ ತಿಂಗಳು ಇಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು, ಕಾಲನಿಗೆ ಹೋಗುವ ರಸ್ತೆ ದುಸ್ಥಿತಿಯಿಂದ ಜನರು ರೋಸಿ ಹೋಗುವಂತಾಗಿದೆ.

ವಾಹನ ಚಾಲನೆ ಹರಸಾಹಸ

ಮಡ್ಯಾಲಮೂಲೆಯಿಂದ ಮಾರಿಯಪ್ಪ ಗುಡಿ ತನಕದ ರಸ್ತೆಯ ಡಾಂಬರು ಸಂಪೂರ್ಣ ಎದ್ದು ಹೋಗಿದೆ. ಜಲ್ಲಿಯೂ ಎದ್ದು ಹೋಗಿ ಅಲ್ಲಲ್ಲಿ ಹರಡಿಕೊಂಡಿದೆ. ರಸ್ತೆ ಮಧ್ಯೆ ಮಣ್ಣು ಮಳೆಗಾಲದಲ್ಲಿ ಕೊಚ್ಚಿ ಹೋಗಿ ಹೊಂಡ ಬಿದ್ದಿದೆ. ಇಳಿಜಾರು ರಸ್ತೆಯಾಗಿರುವುದರಿಂದ ವಾಹನ ಚಲಾಯಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರಿಯಮ್ಮ ಗುಡಿಯಿಂದ ಸಜಂಕಾಡಿ ಅಂಗನವಾಡಿ ತನಕದ ರಸ್ತೆಯೂ ಹದಗೆಟ್ಟಿದೆ. ಕಿರಿದಾದ ರಸ್ತೆಯಲ್ಲಿ ಹೊಂಡ ಗುಂಡಿ ತಪ್ಪಿಸಿಕೊಂಡು ವಾಹನ ಚಲಾಯಿಸುವುದು ಹರಸಾಹಸವೇ ಸರಿ.

ಕುತ್ಯಾಳದಲ್ಲಿ ಮಹಾವಿಷ್ಣು ದೇವಸ್ಥಾನವಿದೆ. ಈ ಪ್ರದೇಶದಲ್ಲಿಯೂ ಬಹಳಷ್ಟು ಮನೆಗಳಿಗೆ, ಕುತ್ಯಾಳ ಹಾಗೂ ಸಜಂಕಾಡಿ ಕಾಲನಿ ಪ್ರದೇಶದಿಂದ ಸುಳ್ಯಪದವು, ಕೇರಳ ಕಡೆ ತೆರಳುವ ಮಂದಿ ಇದೇ ಕಾಲನಿ ರಸ್ತೆ ಅವಲಂಭಿಸಿದ್ದರು. ಆದರೆ ರಸ್ತೆ ಹದಗೆಟ್ಟಿರುವುದರಿಂದ ಇದೀಗ ಇಲ್ಲಿನ ಮಂದಿ ಕುತ್ಯಾಳ-ಗೋಳಿತ್ತಡಿ(ಈಶ್ವರಮಂಗಲ) ರಸ್ತೆ ಮೂಲಕ ಸುತ್ತು ಬಳಸಿ ತೆರಳುವ ಅನಿವಾರ್ಯತೆ ಎದುರಾಗಿದೆ.

ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ಪರಿಶಿಷ್ಟ ಜಾತಿಯ ಮಂದಿ ವಾಸವಿದ್ದಾರೆ. ಇದಲ್ಲದೆ ಇತರ ಜಾತಿ, ಸಮುದಾಯದ ಹಲವು ಮನೆಗಳಿವೆ. ಇಲ್ಲಿನ ಬಹುತೇಕ ಮಂದಿಯಲ್ಲಿ ದ್ವಿಚಕ್ರ ಹಾಗೂ ಇತರ ವಾಹನಗಳಿವೆ. ಹಲವು ವರ್ಷಗಳ ಹಿಂದೆ ಡಾಂಬರು ಅಳವಡಿಸಲಾದ ಸಜಂಕಾಡಿ ಕಾಲನಿ ರಸ್ತೆಗೆ ಮರು ಡಾಂಬರು ಕಾಮಗಾರಿ ನಡೆಸಿ ಅಭಿವೃದ್ಧಿ ಪಡಿಸುವ ಕೆಲಸ ಈ ತನಕ ನಡೆದಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು.
-ಶೀನಪ್ಪ ಸಜಂಕಾಡಿ, ಸ್ಥಳೀಯರು

ರಸ್ತೆ ಹದಗೆಟ್ಟು ಹಲವು ವರ್ಷಗಳಾಯಿತು. ಡಾಂಬರು ರಸ್ತೆ ಈಗ ಮಣ್ಣಿನ ರಸ್ತೆಗಿಂತಲೂ ಕೆಟ್ಟ ಸ್ಥಿತಿಯಲ್ಲಿದೆ. ಅಭಿವೃದ್ಧಿಯ ಮಾತುಗಳು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಅಭಿವೃದ್ಧಿ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇಲ್ಲಿನವರ ಸಮಸ್ಯೆಗೆ ಸ್ಪಂದನೆ ನೀಡಬೇಕು. ಆದಷ್ಟು ಶೀಘ್ರ ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಬೇಕು.
-ಬಿ.ಟಿ.ಸುಂದರ, ಸ್ಥಳೀಯರು

ಜಿಪಂ ವ್ಯವಸ್ಥೆ ಆಡಳಿತದಲ್ಲಿದ್ದ ವೇಳೆ ಸಜಂಕಾಡಿ ಕಾಲನಿ ಪಂಚಾಯಿತಿ ರಸ್ತೆ ಅಭಿವೃದ್ಧಿಗಾಗಿ 50 ಲಕ್ಷ ರೂ. ಮೊತ್ತದ ಯೋಜನೆ ರೂಪಿಸಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಅದು ಪ್ರಗತಿ ಕಂಡಿಲ್ಲ. ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಈ ಭಾಗದ ವಿಧಾನಪರಿಷತ್ ಸದಸ್ಯರಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಮಾಡಲಾಗಿದ್ದು, ರಸ್ತೆಗೆ ಸಂಪೂರ್ಣ ಕಾಂಕ್ರೀಟ್ ಕಾಮಗಾರಿ ನಡೆಸುವ ಭರವಸೆ ಸಿಕ್ಕಿದೆ.
-ರವಿರಾಜ್ ರೈ ಸಜಂಕಾಡಿ, ಸ್ಥಳೀಯ ಗ್ರಾಪಂ ಸದಸ್ಯ

Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…