More

    VIDEO | ರಾಯಲ್ಸ್ ಗೆಲುವಿನ ಬಳಿಕ ರಿಯಾನ್ ಪರಾಗ್ ಮಾಡಿದ ನೃತ್ಯದ ಹೆಸರೇನು ಗೊತ್ತೇ?

    ದುಬೈ: ಭಾನುವಾರದ ರೋಚಕ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಜೋಡಿ ಅಮೋಘ ಆಟವಾಡುವ ಮೂಲಕ ಸನ್‌ರೈಸರ್ಸ್‌ ತಂಡದಿಂದ ಗೆಲುವು ಕಸಿದುಕೊಂಡಿತು. ಅದರ ಬೆನ್ನಲ್ಲೇ ಯುವ ಆಟಗಾರ ರಿಯಾನ್ ಪರಾಗ್ ಮಾಡಿದ ವಿಶೇಷ ನೃತ್ಯ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ಅವರು ಪ್ರದರ್ಶಿಸಿದ ನೃತ್ಯದ ವಿಡಿಯೋ ಕೂಡ ವೈರಲ್ ಆಗಿದೆ.

    18 ವರ್ಷದ ಆಲ್ರೌಂಡರ್ ರಿಯಾನ್ ಪರಾಗ್ ಅಸ್ಸಾಂನವರಾಗಿದ್ದಾರೆ. ಆ ರಾಜ್ಯದ ಜನಪ್ರಿಯ ‘ಬಿಹು’ ನೃತ್ಯ ಪ್ರಕಾರವನ್ನು ಪ್ರದರ್ಶಿಸುವ ಮೂಲಕ ಮೈದಾನದಲ್ಲಿ ಸನ್‌ರೈಸರ್ಸ್‌ ವಿರುದ್ಧದ ಪಂದ್ಯದ ಗೆಲುವನ್ನು ಸಂಭ್ರಮಿಸಿದರು. 26 ಎಸೆತಗಳಲ್ಲಿ 42 ರನ್ ಬಾರಿಸಿದ ಪರಾಗ್, ತೆವಾಟಿಯಾ ಜತೆಗೆ 47 ಎಸೆತಗಳಲ್ಲಿ 85 ರನ್ ಸೇರಿಸುವ ಮೂಲಕ ಗೆಲುವು ತಂದಿದ್ದರು. ಖಲೀಲ್ ಅಹ್ಮದ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಪರಾಗ್ ಗೆಲುವು ತಂದಿದ್ದರು.

    ಪಂದ್ಯದ ಬಳಿಕ ರಿಯಾನ್ ಪರಾಗ್, ಅಸ್ಸಾಂನ ಸಾಂಪ್ರದಾಯಿಕ ನೃತ್ಯ ಪ್ರಕಾರವನ್ನು ಸಹ-ಆಟಗಾರ ರಾಹುಲ್ ತೆವಾಟಿಯಾಗೂ ಕಲಿಸಿದ್ದು ವಿಶೇಷವಾಗಿತ್ತು. 2019ರ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ವಿಕೆಟ್ ಕಬಳಿಸಿದಾಗಲೂ ರಿಯಾನ್ ಪರಾಗ್ ಇಂಥದ್ದೇ ನೃತ್ಯ ಪ್ರದರ್ಶಿಸುವ ಮೂಲಕ ಗಮನಸೆಳೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts