More

    ವರ್ಮಾಗೆ ಶಾಕ್​ … ಸದ್ಯಕ್ಕೆ ‘ಮರ್ಡರ್​’ ಬಿಡುಗಡೆ ಮಾಡುವಂತಿಲ್ಲ!

    ಯಾವಾಗ ‘ಕ್ಲೈಮ್ಯಾಕ್ಸ್​’, ‘ನಗ್ನಂ’ ಮತ್ತು ‘ಪವರ್​ ಸ್ಟಾರ್​’ ಚಿತ್ರಗಳಿಗೆ ಆಪ್​ಗಳಲ್ಲಿ ಯಶಸ್ಸು ಸಿಕ್ಕಿತೋ, ಇದರಿಂದ ಉತ್ಸುಕರಾಗಿ ರಾಮ್​ಗೋಪಾಲ್​ ವರ್ಮಾ ತಮ್ಮ ಹೊಸ ಚಿತ್ರ ‘ಮರ್ಡರ್​’ ಬಿಡುಗಡೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ನ್ಯಾಯಾಲಯ ಮಾತ್ರ ಚಿತ್ರವನ್ನು ಸದ್ಯಕ್ಕೆ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿದೆ.

    ಇದನ್ನೂ ಓದಿ: ಲೈಫೇ ಮಿರಾಕಲ್​ ಅಂದಿದ್ದ ಪೃಥ್ವಿ ಈಗ ‘ಲೈಫ್​ ಈಸ್​ ಬ್ಯೂಟಿಫುಲ್​’ ಅಂತಿರೋದೇಕೆ?

    ‘ಮರ್ಡರ್​’ ಒಂದು ನೈಜ ಘಟನೆಯನ್ನಾಧರಿಸಿದ ಸಿನಿಮಾ. ಕೆಲವು ವರ್ಷಗಳ ಹಿಂದೆ, ಆಂಧ್ರದ ಅಮೃತಾ ಮತ್ತು ಪ್ರಣಯ್​ ಕೆಲವು ವರ್ಷಗಳ ಹಿಂದೆ ಮನೆಯವರ ಆಸೆಯ ವಿರುದ್ಧವಾಗಿ ಮದುವೆಯಾಗಿದ್ದರು. ಇಬ್ಬರೂ ಬೇರೆಬೇರೆ ಜಾತಿಯವರದ್ದಾರಿಂದ, ಎರಡೂ ಕುಟುಂಬದವರು ಈ ಮದುವೆಗೆ ಒಪ್ಪಿರಲಿಲ್ಲ. ಈ ಮಧ್ಯೆ, ಅಮೃತಾ ಮನೆಯವರು ಎರಡು ವರ್ಷಗಳ ಹಿಂದೆ ಪ್ರಣಯ್​ನನ್ನು ಕೊಂದಿದ್ದರು. ಈ ವರ್ಷ ಅಮೃತಾ ಅವರ ತಂದೆ ಮಾರುತಿ ರಾವ್​ ಸಹ ನಿಧನರಾಗಿದ್ದರು.

    ಈ ಘಟನೆಯನ್ನೇ ಬೇಸ್​ ಮಾಡಿ, ವರ್ಮಾ ಮರ್ಡರ್​ ಚಿತ್ರವನ್ನು ಮಾಡಿದ್ದಾರೆ. ಆದರೆ, ತಮ್ಮ ಅನುಮತಿಯನ್ನೇ ಪಡೆಯದೇ ತಮ್ಮ ಜೀವನವನ್ನಾಧರಿಸಿ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಅಮೃತಾ, ನಲಗೊಂಡಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ಮಾತನಾಡಿದ್ದ ಅಮೃತಾ, ‘ಕಳೆದ ಕೆಲವು ವರ್ಷಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ನನ್ನ ಗಂಡನ ಮರ್ಡರ್​ ಆಗಿದೆ. ನನ್ನ ತಂದೆ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುಃಖದಲ್ಲಿರುವಾಗ ವರ್ಮಾ, ನಮ್ಮ ಜೀವನದಲ್ಲಾದ ಘಟನೆ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಅವರಿಗೆ ಅನುಮತಿ ಕೊಟ್ಟಿದ್ದು ಯಾರು? ಹಾಗಾಗಿ ಅವರ ವಿರುದ್ಧ ದಾವೆ ಹೂಡಿದ್ದೇನೆ’ ಎಂದು ಅಮೃತಾ ಈ ಹಿಂದೆ ಹೇಳಿದ್ದರು.

    ಇದನ್ನೂ ಓದಿ: ‘ಆಡಿಸಿದಾತ’ನ ಕೈಚಳಕದಲಿ ಮೂಡಿ ಬಂತು ಟೀಸರ್​ …

    ಈ ವಿಷಯವಾಗಿ ನ್ಯಾಯಾಲಯವು ವರ್ಮಾ ಮತ್ತು ತಂಡದವರಿಗೆ ಹಾಜರಾಗುವಂತೆ ಸಮನ್ಸ್​ ನೀಡಿದೆ. ಅದರಂತೆ ಇಂದು ವಿಚಾರಣೆ ನಡೆದಿದ್ದು, ಪೂರ್ತಿ ವಿಚಾರಣೆಯಾಗುವವರೆಗೂ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಚಿತ್ರವನ್ನು ತಕ್ಷಣ ಬಿಡುಗಡೆ ಮಾಡಿ ಒಂದಿಷ್ಟು ದುಡ್ಡು ಮಾಡಿಕೊಳ್ಳಬೇಕು ಎಂದು ಕಾದಿದ್ದ ಆರ್​ಜಿವಿ ಕನಸಿಗೆ ಇದೀಗ ತಣ್ಣೀರೆರಚಿದಂತಾಗಿದೆ.

    ನ್ಯಾಯಾಲಯವು ಈ ವಿಚಾರವಾಗಿ ಪೂರ್ತಿ ವಿಚಾರಣೆ ಮುಗಿಸಿದ ನಂತರ, ಚಿತ್ರ ಬಿಡುಗಡೆ ಮಾಡಬೇಕೋ, ಬೇಡವೋ ಎಂದು ತೀರ್ಪು ನೀಡಲಿದೆ. ಅಲ್ಲಿಯವರೆಗೂ ವಮಾರ್ ಸುಮ್ಮನೆ ಕಾಯದೇ ಬೇರೆ ವಿಧಿಯಿಲ್ಲ.

    ನನ್ನ ಮಕ್ಕಳು ಕಲಾವಿದರಾಗಬೇಕೆಂದರೆ ಅದು ತಪ್ಪಾ? ಬಿಪಾಶಾ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts