More

    ಒಳ್ಳೆಯ ಮಾತಿನಲ್ಲಿ ಭಾರತ ನಮ್ಮ ಪ್ರದೇಶಗಳನ್ನು ನಮಗೆ ಒಪ್ಪಿಸಬೇಕು

    ನವದೆಹಲಿ: ಭಾರತ ಮಿತ್ರ ರಾಷ್ಟ್ರವಾಗಿದೆ. ಅದು ಅತಿಕ್ರಮಿಸಿಕೊಂಡಿರುವ ನಮ್ಮ ಜಾಗಗಳನ್ನು ಅದು ಒಳ್ಳೆಯ ಮಾತಿನಲ್ಲಿ ನಮಗೆ ಮರಳಿಸಬೇಕು ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್​ ಪೊಖ್ರೇಲ್​ ಹೇಳಿದ್ದಾರೆ.

    ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚೀನಾದ ಚಿತಾವಣೆ ಮೇರೆಗೆ ನಾವು ಇಲ್ಲದ ಗಡಿ ವಿವಾದವನ್ನು ಕೆದುಕುತ್ತಿದ್ದೇವೆ ಎಂಬ ಭಾರತೀಯ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಅವರ ಆರೋಪ ಒಂದು ರಾಜಕೀಯ ಸ್ಟಂಟ್​ ಎಂದು ಬಣ್ಣಿಸಿದರು.

    ಉತ್ತರಾಖಂಡದ ಧಾರಚುಲಾದೊಂದಿಗೆ ಸಂಪರ್ಕ ಒದಗಿಸುವ ರೀತಿಯಲ್ಲಿ ಲಿಪುಲೇಖ್​ಗೆ ಭಾರತ ರಸ್ತೆ ನಿರ್ಮಿಸಿರುವುದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತ್ತು. ಯಾವುದೋ ಬಾಹ್ಯ ಶಕ್ತಿಯ ಒತ್ತಡಕ್ಕೆ ಮಣಿದು ನೇಪಾಳ ಈ ಆರೋಪ ಮಾಡುತ್ತಿದೆ ಎಂದು ಜನರಲ್​ ನರವಾನೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.

    ಇದನ್ನೂ ಓದಿ: ಟಿ-ಶರ್ಟ್ ಮೇಲೆ ‘ರಾಬರ್ಟ್’ … ಹೇಗಿದೆ ನೋಡಿ ದರ್ಶನ್ ಹವಾ!

    ಆದರೆ, ಇದಾಗಿ ಒಂದೆರಡು ದಿನಗಳಲ್ಲಿ ನೇಪಾಳ ಲಿಪುಲೇಖ್​, ಲಿಂಪಿಯಾಧುರಾ ಮತ್ತು ಕಾಲಾಪಾನಿ ತಮಗೆ ಸೇರಿದ್ದು ಎಂಬಂತೆ ಬಿಂಬಿಸಿ ಪರಿಷ್ಕೃತ ಭೂಪಟವನ್ನು ಬಿಡುಗಡೆ ಮಾಡಿತ್ತು. ಆದರೆ ಈ ಮೂರು ಪ್ರದೇಶಗಳು ಉತ್ತರಾಖಂಡದ ಪಿತ್ತೋರ್​ಗಢ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ ಎಂದು ಭಾರತ ಪ್ರತಿಪಾದಿಸಿದೆ.

    ಈ ಮೂರು ಪ್ರದೇಶಗಳನ್ನು ಭಾರತ ಅತಿಕ್ರಮಿಸಿಕೊಂಡಿದೆ. ನೇಪಾಳದೊಂದಿಗೆ ಭಾರತ ಸ್ನೇಹ ಹಾಗೂ ಸೌಹಾರ್ದಯುತ ಸಂಬಂಧ ಹೊಂದಿದೆ. ಆದ್ದರಿಂದ ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿನ ಮಾತುಕತೆ ಮೂಲಕ ಈ ಪ್ರದೇಶಗಳನ್ನು ನಮಗೆ ಮರಳಿಸಬೇಕು ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್​ ಪೊಖ್ರೇಲ್​ ಹೇಳಿದ್ದಾರೆ.

    ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts