More

    ಪರಿಹಾರ ವಿತರಣೆಗೆ ಸುಗ್ರೀವಾಜ್ಞೆ ಹೊರಡಿಸಿ: ಕಾರಂತ ಬಡಾವಣೆ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿಗೆ ಮನವಿ

    ಬೆಂಗಳೂರು: ಬಿಡಿಎ ಉದ್ದೇಶಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರು ಸೇರಿದಂತೆ ಸಂತ್ರಸ್ತ ಕುಟುಂಬಗಳಿಗೆ ಭೂ ಪರಿಹಾರ ವಿತರಿಸಲು ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸುವಂತೆ ಕಾರಂತ ಬಡಾವಣೆ ಹೋರಾಟ ಸಮಿತಿ ಹಾಗೂ ಇಎಸ್‌ಜಿ ವೇದಿಕೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

    ಇದನ್ನೂ ಓದಿ: ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಬಡಾವಣೆ ನಿರ್ಮಿಸುವ ಭರದಲ್ಲಿ ರೈತರಿಗೆ ಸಿಗಬೇಕಿರುವ ಪರಿಹಾರವನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ಬದಲಾಗಿ ಭವಿಷ್ಯದಲ್ಲಿ ಅಭಿವೃದ್ಧಿ ಪಡಿಸುವ ನಿವೇಶನಗಳನ್ನು ಪರಿಹಾರ ರೂಪದಲ್ಲಿ ನೀಡಲಾಗುತ್ತದೆ ಎಂಬ ಒಕ್ಕಣೆಯುಳ್ಳ ಇಂಡೆಂಟ್ ಪತ್ರವನ್ನಷ್ಟೇ ನೀಡಲಾಗುತ್ತಿದೆ. ಇದರಿಂದ ಸಂತ್ರಸ್ತರಿಗೆ ಭಾರಿ ಅನ್ಯಾಯವಾಗಿದ್ದು, ಬಿಡಿಎ ಧೋರಣೆ ಖಂಡಿಸಿ ಕೈಗೊಂಡಿದ್ದ ಆನ್‌ಲೈನ್ ಸಹಿ ಅಭಿಯಾನದಲ್ಲಿ 8 ಸಾವಿರ ಮಂದಿ ರುಜು ಮಾಡಿರುವ ಅಹವಾಲನ್ನು ಸಿಎಂ ಕಾರ್ಯಾಲಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಎಂ.ರಮೇಶ್ ತಿಳಿಸಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?

    2013ರ ಪುನರ್ವಸತಿ ಒಳಗೊಂಡಿರುವ ಭೂ ಪರಿಹಾರ ಕಾಯ್ದೆ (ಎಲ್‌ಎಆರ್‌ಆರ್) ಅನ್ವಯ ರೈತರಿಗೆ ಪರಿಹಾರ ವಿತರಿಸಬೇಕು. ನ್ಯಾ. ಚಂದ್ರಶೇಖರ್ ಸಮಿತಿಯ ಒಪ್ಪಿಗೆ ಇಲ್ಲದೆ ಬಡಾವಣೆ ನಿರ್ಮಾಣವನ್ನು ಬಿಡಿಎ ಕೈಗೊಳ್ಳಬಾರದು. ಮಹಾನದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನನ್ವಯ ಭೂ ಪರಿಹಾರವನ್ನು ಲೇಔಟ್‌ನ ಎಲ್ಲ 17 ಹಳ್ಳಿಗಲ್ಲಿರುವ ಸಂತ್ರಸ್ತರಿಗೆ ವಿತರಿಸಬೇಕು ಎಂಬ ಮೂರಂಶದ ಮನವಿಪತ್ರಕ್ಕೆ ಸಿಎಂ ಒಪ್ಪಿಗೆ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts