More

    ಮಂತ್ರಿ ಬಾಯಲ್ಲಿ ಮಹಾಕಾವ್ಯ; ಭೂತದ ಬಾಯಲ್ಲಿ ಮಂತ್ರಗಳು ಹೊರಬಂದಂತೆ ಎಂದ ಕಾಂಗ್ರೆಸ್

    ಬೆಂಗಳೂರು: ಜನರಲ್ಲಿ ಕೋವಿಡ್ 19 ರೋಗದ ಆತಂಕ ನಿವಾರಿಸಲು ಮತ್ತು ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದ ಹಲವು ಪ್ರಯತ್ನಗಳ ಮಧ್ಯೆ, ಕೆಲವು ಮಂತ್ರಿಗಳು ಆಗಾಗ ರಾಮಾಯಣ ಮತ್ತು ಮಹಾಭಾರತ ಹಿಂದೂ ಮಹಾಕಾವ್ಯಗಳ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಿದ್ದಾರೆ.
    ಕೋವಿಡ್ ಸ್ಥಿತಿಗತಿ ಮಾಹಿತಿ ಹೇಳುವಾಗ ರಾಮಾಯಣವನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳು ಹೊರಬಿದ್ದ ನಂತರ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಇಂಥ ಉಲ್ಲೇಖಕ್ಕೆ ಪ್ರತಿಪಕ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಇದನ್ನೂ ಓದಿ : 20 ಸೆಕೆಂಡ್‌ನಲ್ಲಿ ಬ್ಯಾಂಕ್‌ನಿಂದ 10 ಲಕ್ಷ ಎಗರಿಸಿದ ಬಾಲಕ! ಸಿಸಿಟಿವಿಯಲ್ಲಿ ಸೆರೆ

    “ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೋವಿಡ್ ಗೆ ಸಂಬಂಧಿಸಿದ ಸ್ಥಿತಿಗತಿ ವಿವರಣೆ ನೀಡುವ ಸಂದರ್ಭದಲ್ಲಿ ಮಹಾಭಾರತ ಮತ್ತು ರಾಮಾಯಣ ಉಲ್ಲೇಖಿಸಿದ್ದಾರೆ. ಅವೆರಡೂ ನಮಗೆ ಪವಿತ್ರ ಮಹಾಕಾವ್ಯಗಳು. ಆದರೆ ಭಾರಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ, ಪಕ್ಷಕ್ಕೆ ದ್ರೋಹ ಬಗೆಯುವುದು ಮತ್ತು ಕರೊನಾ ನಿಯಂತ್ರಣದಲ್ಲಿ ವಿಫಲವಾಗಿರುವಾಗ ಪವಿತ್ರ ಪುಸ್ತಕಗಳನ್ನು ಉಲ್ಲೇಖಿಸಲು ಅವರಿಗೆ ಯಾವುದೇ ಹಕ್ಕಿಲ್ಲ ”ಎಂದು ಯುವ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದಿದ್ದಾರೆ.
    ಭ್ರಷ್ಟ ಆರೋಗ್ಯ ಸಚಿವರ ಮಾತನ್ನು ಕೇಳಿದರೆ ಭೂತದ ಬಾಯಲ್ಲಿ ಮಂತ್ರಗಳು ಹೊರಬಂದಂತೆ ಭಾಸವಾಗುತ್ತದೆ ಎಂದಿದ್ದಾರೆ.

    ಇದನ್ನೂ ಓದಿ: ಸಂಗಾತಿಯನ್ನು ಉಳಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾದ ಹೋರಿ; ಮಾಡಿದ್ದಾದರೂ ಏನು?

    ಕರ್ನಾಟಕಲ್ಲಿ 44,077 ಕರೊನಾ ಸಕ್ರಿಯ ಪ್ರಕರಣಗಳು ಕಂಡುಬಂದಿದ್ದು, ಅದರ ಪೈಕಿ ಅಂದಾಜು 21,000 ಜನರು ಬೆಂಗಳೂರಿನಲ್ಲಿಯೇ ಮಾತ್ರ ಇದ್ದಾರೆ. ಈ ಮಾರಣಾಂತಿಕ ಕಾಯಿಲೆಗೆ ರಾಜ್ಯದಲ್ಲಿ 846 ಸಾವಿಗೀಡಾಗಿದ್ದು, ಬೆಂಗಳೂರಿನಲ್ಲಿಯೇ 376 ಮಂದಿ ಸಾವನ್ನಪ್ಪಿದ ವರದಿ ವರದಿಯಾಗಿದೆ.
    ಕರೊನಾ ವೈರಸ್ ಜಗತ್ತಿಗೇ ಬಹುದೊಡ್ಡ ಸವಾಲಾಗಿದ್ದು. ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಭೀಕರ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಏಳು ದಿನಗಳ ಕಾಲ ಲಾಕ್‌ಡೌನ್‌ ಹೇರಲಾಗಿದೆ.

    ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts