More

    ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

    ಬೆಂಗಳೂರು: ಮಾರಕ ಕರೊನಾ ವೈರಸ್​ ಸಂಹಾರಕ್ಕೆ ನಂಜನಗೂಡಿನ ಜುಬಿಲೆಂಟ್​ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಲಸಿಕೆ ಬಳಸಿಕೊಳ್ಳಲು ಕೇಂದ್ರೀಯ ಔಷಧ ಮಾನದಂಡ ಹಾಗೂ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಅನುಮತಿ ನೀಡಿದೆ.

    ಪರವಾನಗಿ ನೀಡುವ ಸಮಯದಲ್ಲಿ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ಲಸಿಕೆಯನ್ನು 10 ದಿನಗಳ ಕಾಲ ವಿಸ್ತರಿತ ಬಳಕೆಗೆ ಸಿಡಿಎಸ್​ಸಿಒ ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಔಷಧ ನಿಯಂತ್ರಣಕ್ಕೆ ದೇಶದಲ್ಲಿ ಅತ್ಯುಚ್ಛ ಸಂಸ್ಥೆಯಾಗಿರುವ ಸಿಡಿಎಸ್​ಸಿಒ ಆ್ಯಂಟಿವೈರಲ್​ ಲಸಿಕೆ ‘ರೆಮ್​ಡೆಸಿವಿರ್​’ಅನ್ನು ಶಂಕಿತ ಹಾಗೂ ಸೋಂಕು ದೃಢಪಟ್ಟು ಗಂಭೀರ ಸ್ಥಿತಿಯಲ್ಲಿರುವ ಮಕ್ಕಳು ಹಾಗೂ ವಯಸ್ಕ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂದು ತಿಳಿಸಿದೆ.

    ಇದನ್ನೂ ಓದಿ; ಜುಬಿಲೆಂಟ್​ಗೆ  ಅನುಮತಿ ನೀಡಿದ ಗಿಲಿಯಾಡ್​ ಸೈನ್ಸ್​

    ಈ ಮೊದಲು ಈ ಲಸಿಕೆಯನ್ನು ಗರಿಷ್ಠ ಐದು ದಿನಗಳ ಬಳಕೆಗೆ ಭಾರತದ ಔಷಧ ಮಹಾನಿಯಂತ್ರಣಾಧಿಕಾರಿ ಸಂಸ್ಥೆಯ ಡಾ.ವಿ.ಜಿ. ಸೋಮಾನಿ ಅನುಮತಿ ನೀಡಿದ್ದರು. ಇದೀಗ ಹತ್ತು ದಿನಗಳ ಬಳಕೆಗೆ ವಿಸ್ತರಿಸಲಾಗಿದೆ.
    ರೆಮ್​ಡಿಸಿವಿರ್​ ಔಷಧವನ್ನು ಅಮೆರಿಕದ ಗಿಲಿಯಾಡ್​ ಸಂಸ್ಥೆ ಸಂಶೋಧಿಸಿದೆ. ಇದರ ಹಿಂದೆಯೂ ರೋಚಕ ಕತೆಯಿದೆ. ಯಾವ ಉದ್ದೇಶಕ್ಕಾಗಿ ಇದನ್ನು ಸಂಶೋಧಿಸಲಾಗಿತ್ತೋ ಅದರಲ್ಲಿ ಇದು ಯಶಸ್ವಿಯಾಗಿರಲಿಲ್ಲ. ಬದಲಾಗಿ ಕರೊನಾಗೆ ಪರಿಣಾಮಕಾರಿ ಎನಿಸಿದೆ.

    ಇದನ್ನೂ ಓದಿ; ರೆಮ್​ಡೆಸಿವಿರ್​ ಸಂಶೋಧನೆ ಹಿಂದಿನ ರೋಚಕ ಕತೆ

    ಸದ್ಯ ಈ ಔಷಧವನ್ನು ಭಾರತವೂ ಸೇರಿ 123 ದೇಶಗಳಲ್ಲಿ ಉತ್ಪಾದಿಸಿ ಮಾರಾಟ ಮಾಡಲು ನಂಜನಗೂಡಿನ ಜುಬಿಲೆಂಟ್​ ಸಂಸ್ಥೆ ಅನುಮತಿ ಪಡೆದಿದೆ. ಈಗಾಗಲೇ ಈ ಲಸಿಕೆಯ ಉತ್ಪಾದನೆಗೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಬೇರೆ ಬೇರೆ ದೇಶಗಳಲ್ಲಿ ರೆಮ್​ಡೆಸಿವಿರ್​ ಬಳಕೆಗೆ ಶಿಫಾರಸು ಮಾಡಲಾಗಿತ್ತದರೂ, ಭಾರತ ಇನ್ನೂ ಅವಕಾಶ ನೀಡಿರಲಿಲ್ಲ. ಇದೀಗ ಭಾರತವೂ ಈ ಲಸಿಕೆ ಬಳಕೆಗೆ ಮುಂದಾಗಿದೆ. ಕರೊನಾ ರೋಗಿ ಚೇತರಿಸಿಕೊಳ್ಳುವ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುವಲ್ಲಿ ಈ ಔಷಧ ಪರಿಣಾಮಕಾರಿ ಎಂದು ಚೀನಾ, ಜಪಾನ್​, ಅಮೆರಿಕ ಸೇರಿ ಹಲವು ದೇಶಗಳಲ್ಲಿ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.

    ಕರೊನಾಗೆ ಲಸಿಕೆ ಸಜ್ಜಾದರೆ, ಮುಂದೊದಗುವ ಪರಿಸ್ಥಿತಿ ಭಾರಿ ಭೀಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts