More

    ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ದರ ಎಷ್ಟಿದೆ ಗೊತ್ತಾ?

    ಬೆಂಗಳೂರು: ಕರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಸರ್ಕಾರ ನಿಗದಿ ಪಡಿಸಿದ ದರಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ಶೇ.50ರಷ್ಟು ಬೆಡ್​ಗಳನ್ನು ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಎಂದೇ ಮೀಸಲಿಡಬೇಕು ಎಂದು ಸೂಚನೆ ನೀಡಿರುವ ಸರ್ಕಾರ ಕೆಲ ಷರತ್ತು ವಿಧಿಸಿದೆ. ಅಂದಹಾಗೆ ಕರೊನಾ ರೋಗಿಗಳಿಗೆ ಸರ್ಕಾರ ನಿಗದಿ ಪಡಿಸಿರುವ ಚಿಕಿತ್ಸಾ ದರದ ವಿವರ ಇಲ್ಲಿದೆ.

    ಇದನ್ನೂ ಓದಿರಿ ರೈಲ್ವೆ ಟಿಕೆಟ್ ಕಲೆಕ್ಟರ್​ ಸಾವಿನ ಬಳಿಕ ಕರೊನಾ ದೃಢ, ಅಂತಿಮ ದರ್ಶನ ಪಡೆದಿದ್ದ ಸಂಬಂಧಿಕರಿಗೀಗ ಢವಢವ!

    ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸು ಪಡೆದ ರೋಗಿಗಳಿಗೆ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ದರ ಹೀಗಿದೆ. ಜನರಲ್ ವಾರ್ಡ್​ಗೆ 5200 ರೂ., ಎಚ್​ಡಿಯು- 7000 ರೂ., ಐಸೋಲೇಷನ್ ಐಸಿಯು ವಿತ್ ಔಟ್ ವೆಂಟಿಲೇಟರ್- 8500 ರೂ., ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -10,000 ರೂ. ಶುಲ್ಕ ಇರಲಿದೆ.

    ಇನ್ನು ಆರೋಗ್ಯ ಇಲಾಖೆ ಶಿಫಾರಸು ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದವರಿಗೆ ಜನರಲ್ ವಾರ್ಡ್-10,000 ರೂ., ಎಚ್​ಡಿಯು- 12,000 ರೂ., ಐಸೋಲೇಷನ್ ಐಸಿಯು ವಿತ್ ಔಟ್ ವೆಂಟಿಲೇಟರ್- 15,000 ರೂ., ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -25,000 ರೂ. ಬಿಲ್ ಇರಲಿದೆ.

    ಹೆಲ್ತ್​ ಇನ್ಶೂರೆನ್ಸ್​ ಇರುವವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಪ್ಯಾನೆಲ್​ನಲ್ಲಿ ಸೇರಿರುವ ಆಸ್ಪತ್ರೆಗಳನ್ನ ಆಯ್ಕೆ ಮಾಡಲಾಗಿದೆ. ಬಿಪಿಎಲ್ ಮತ್ತು ಎಪಿಎಲ್ ಹಾಗೂ ವಲಸಿಗ ಕಾರ್ಮಿಕರಿಗೆ, ಪಿಡಿಎಸ್ ಕಾರ್ಡ್ ಇದ್ದರೂ ಚಿಕಿತ್ಸೆ ಕೊಡಬೇಕು.

    ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts