ಕದ್ರಿ ಕೆರೆಯ ಪ್ರಾಂಗಣದಲ್ಲಿ ಪರ್ಜನ್ಯ ಜಪ

mng-6may-kadri japa
Published on



ಮಂಗಳೂರು : ಅಖಿಲ ಬ್ರಾಹ್ಮಣ ಒಕ್ಕೂಟದ ವತಿಯಿಂದ ನಗರದ ಕದ್ರಿ ಮಂಜುನಾಥ ದೇವಳದ ಕೆರೆಯ ಪ್ರಾಂಗಣದಲ್ಲಿ ಸೋಮವಾರ ವರುಣ ದೇವರ ಪ್ರೀತ್ಯರ್ಥ ಪರ್ಜನ್ಯ ಜಪ , ರುದ್ರ ಪಾರಾಯಣ ಜರಗಿತು. ಕದ್ರಿ ವಿಠಲದಾಸ ತಂತ್ರಿಗಳ ಮಾರ್ಗದರ್ಶನದಲ್ಲಿ, ಕದ್ರಿಯ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ ಮತ್ತು ರಾಮಹೊಳ್ಳರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ವಿಪ್ರಬಳಗದ ರಾಮಕೃಷ್ಣ ರಾವ್, ಸುಧಾಕರ ರಾವ್ ಪೇಜಾವರ, ಕದ್ರಿ ಗಣೇಶ್ ಹೆಬ್ಬಾರ್, ಉದಯ ಕುಮಾರ್, ಶಶಿಪ್ರಭಾ ಐತಾಳ್, ಕದ್ರಿ ವಾಸುದೇವ ಭಟ್, ಡಾ. ಎಸ್. ಎನ್. ಶರ್ಮ , ಗಿರೀಶ್ಚಂದ್ರ ಎ.ಟಿ., ವಿಶ್ವಪತಿ ಮೊಳೆಯಾರ, ಕೇಶವ ನಂದೋಡಿ, ಶಿವರಾಮ ರಾವ್, ಶ್ರೀಕಾಂತ್ ರಾವ್ ಮುಂತಾದವರು
ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net