More

    ಕಳೆದ ವರ್ಷಕ್ಕಿಂತ ಶೇ. 12.5 ಹೆಚ್ಚು ಲಾಭ ದಾಖಲಿಸಿದ ರಿಲಯನ್ಸ್​ ಇಂಡಸ್ಟ್ರೀಸ್​!

    ನವದೆಹಲಿ: ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರೀಸ್​ ಸಂಸ್ಥೆ 2020ರ ಅಕ್ಟೋಬರ್​ನಿಂದ ಡಿಸೆಂಬರ್​ ತಿಂಗಳವರೆಗಿನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದೆ. ಈ ಮೂರು ತಿಂಗಳಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಸುಮಾರು ಶೇ. 40ಕ್ಕಿಂತ ಹೆಚ್ಚು ಲಾಭ ಹಾಗೂ ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕಿಂತ ಶೇ. 12.5 ಹೆಚ್ಚು ಲಾಭ ಪಡೆದುಕೊಂಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: 31 ಬಾರಿ ಕೋವಿಡ್ ಪಾಸಿಟಿವ್​: ಟೆಸ್ಟ್​ ಮಾಡಿದಾಗಲೆಲ್ಲ ಬಿಡದ ಕರೊನಾ, ಮಹಿಳೆಯ ರಿಪೋರ್ಟ್​ ನೋಡಿ ವೈದ್ಯರು ಶಾಕ್​!​​

    ಮೂರು ತಿಂಗಳಲ್ಲಿ ಸಂಸ್ಥೆಗೆ 1,37,829 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕ ಆದಾಯ ಶೇ. 7.4 ಹೆಚ್ಚಳ ಕಂಡಿದೆ. ಈ ತ್ರೈಮಾಸಿಕದಲ್ಲಿ 15,015 ಕೋಟಿ ರೂಪಾಯಿ ಲಾಭ ಸಿಕ್ಕಿದೆ. ಇದು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 41.6 ಅಧಿಕವಾಗಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 12.5 ಏರಿಕೆಯಾಗಿದೆ.

    ತೈಲ ಮಾರುಕಟ್ಟೆಯಲ್ಲಿ ಸಂಸ್ಥೆಗೆ ಕಳೆದ ವರ್ಷಕ್ಕಿಂತ ಈ ವರ್ಷ ನಷ್ಟ ಉಂಟಾಗಿದೆ. ಕಳೆದ ವರ್ಷದ 3ನೇ ತ್ರೈಮಾಸಿಕ್ಕೆ ಹೋಲಿಸಿದರೆ ಈ ವರ್ಷ 3ನೇ ತ್ರೈಮಾಸಿಕದಲ್ಲಿ ತೈಲ ಮಾರುಕಟ್ಟೆಯ ಆದಾಯದಲ್ಲಿ ಸಂಸ್ಥೆಯು ಶೇ. 22 ಇಳಿಕೆ ಕಂಡಿದೆ. ತೈಲದಿಂದ 1.23 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ತಿಳಿಸಲಾಗಿದೆ. ಶೇರು ಮಾರುಕಟ್ಟೆಯಲ್ಲೂ ಸೆಪ್ಟೆಂಬರ್​ಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ.

    ಇದನ್ನೂ ಓದಿ: ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಟ್ರಂಪ್​ಗೆ ಕೈ ಕೊಟ್ಟ ಮೆಲನಿಯಾ ಟ್ರಂಪ್​?! 15 ವರ್ಷಗಳ ದಾಂಪತ್ಯ ಅಂತ್ಯ?

    ರಿಲಯನ್ಸ್​ನ ಹಲವು ಕಂಪನಿಗಳಲ್ಲಿ ಆದಾಯ ಹೆಚ್ಚಳ ಮತ್ತು ಇಳಿಕೆ ಎರಡೂ ಕಂಡುಬಂದಿದೆ. ಜಿಯೋ ಆದಾಯದಲ್ಲಿ ಚೇತರಿಕೆ ಉಂಟಾಗಿದೆ. ಸಂಸ್ಥೆ ಶೇಕಡಾ 32.88 ಷೇರನ್ನು ಹೂಡಿಕೆದಾರರಿಗೆ ಕೊಟ್ಟಿದ್ದು ಅದರಿಂದ 1.52 ಲಕ್ಷ ಕೋಟಿ ರೂಪಾಯಿ ಆದಾಯ ಪಡೆದಿದೆ.

    2020 ರ ಡಿಸೆಂಬರ್ ಅಂತ್ಯದ ವೇಳೆಗೆ ಆರ್‌ಐಎಲ್‌ನ ಬಾಕಿ ಸಾಲ 2,57,413 ಕೋಟಿ ರೂ. ಆಗಿದ್ದರೆ, ನಗದು ಮತ್ತು ನಗದು ಸಮಾನತೆಯು 2,20,524 ಕೋಟಿ ರೂ. ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts