More

    ನೋಂದಣಿ ಮತ್ತು ಮುದ್ರಾಂಕ ಇಲಾಖೆ ಎಡವಟ್ಟು: ಕೃಷಿ ಸಾಲದ ಘೋಷಣಾ ಪ್ರಮಾಣ ಪತ್ರ ಆನ್‌ಲೈನ್ ಫೈಲಿಂಗ್ ರದ್ದು

    ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಹೊಸ ಯೋಜನೆಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಜಾರಿಗೆ ತರುವ ಬದಲು ಬೇಕಾಬಿಟ್ಟಿ ಸುತ್ತೋಲೆ ಹೊರಡಿಸಿ ಕೊನೆಗೆ ತಾಂತ್ರಿಕ ಸಮಸ್ಯೆ ಮತ್ತು ಸಾರ್ವಜನಿಕರ ಆಕ್ರೋಶ ಕಾರಣ ಕೊಟ್ಟು ಆದೇಶ, ಸುತ್ತೋಲೆಗಳನ್ನು ಹಿಂಪಡೆಯುತ್ತಿದೆ.

    ಇತ್ತೀಚೆಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ವೇಳೆ ಒಟಿಪಿ ಸೇವೆಯನ್ನು ರದ್ದುಮಾಡಿತ್ತು. ಇದೀಗ ಕೃಷಿ ಸಾಲ ಪಡೆಯಲು ರೈತರು ಬ್ಯಾಂಕ್‌ನಿಂದ ನೀಡುವ ಘೋಷಣಾ ಪ್ರಮಾಣ ಪತ್ರದ ಆನ್‌ಲೈನ್ ಸೇವೆಯನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

    ಕೃಷಿ ಸಾಲ ಪಡೆಯಲು ರೈತರು ಬ್ಯಾಂಕಿನಿಂದ ೋಷಣಾ ಪ್ರಮಾಣ ಪತ್ರವನ್ನು (ನಮೂನೆ-3) ಉಪ ನೋಂದಣಾಧಿಕಾರಿಗಳ ಕಚೇರಿಗೆ ಖುದ್ದು ಸಲ್ಲಿಸಿ ನೋಂದಣಿ ಮಾಡಿಸಬೇಕಿತ್ತು. ಈ ಸೇವೆ ಸರಳಗೊಳಿಸುವ ಬರದಲ್ಲಿ ಪೂರ್ವ ಸಿದ್ದತೆ ಇಲ್ಲದೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ತಂತ್ರಾಂಶ ಮತ್ತು ರೈತರ ಸಾಲ ಪ್ರಕ್ರಿಯೆ ನಡೆಯುವ ್ರೂಟ್ಸ್ ತಂತ್ರಾಂಶ ಸಂಯೋಜನೆಗೊಳಿಸಿತು. ಆನಂತರ ನವೆಂಬರ್ 1 ರಿಂದ ಸಹಕಾರ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಿದ ಬಳಿಕ ಡಿಜಿಟಲ್ ಸಹಿವುಳ್ಳ ಘೋಷಣಾ ಪತ್ರ (ಫಾರಂ-3) ಅನ್ನು ್ರೂಟ್ಸ್ ತಂತ್ರಾಂಶದ ಮೂಲಕ ಉಪನೋಂದಣಿ ಕಚೇರಿಯ ಕಾವೇರಿ ತಂತ್ರಾಂಶಕ್ಕೆ ಫೈಲಿಂಗ್ ಮಾಡಬೇಕೆಂದು ಸುತ್ತೋಲೆ ಹೊರಡಿಸಿತ್ತು.

    ಇದನ್ನು ಪಡೆದು ಸಬ್ ರಿಜಿಸ್ಟ್ರಾರ್‌ಗಳು ನೋಂದಣಿ ಮಾಡಿ ಪಹಣಿಯಲ್ಲಿ ಸಾಲ ಇರುವುದಾಗಿ ನಮೂದು ಮಾಡಬೇಕಿತ್ತು. ಆದರೆ, ಸಹಕಾರ ಬ್ಯಾಂಕ್‌ಗಳಿಂದ ಘೋಷಣಾ ಪತ್ರ ಕಾವೇರಿಗೆ ಬರುತ್ತಿಲ್ಲ. ಜತೆಗೆ ತಾಂತ್ರಿಕ ಸಮಸ್ಯೆ ಎದುರಾಗಿ ಗೊಂದಲ ಉಂಟಾಗಿದೆ. ಕೊನೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಘೋಷಣಾ ಪ್ರಮಾಣ ಪತ್ರ ಈ ಫೈಲಿಂಗ್ ಸೇವೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇನ್ನೂ ಮುಂದೆ ಕೃಷಿ ಸಾಲ ಪಡೆಯುವ ರೈತರು ಖುದ್ದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಘೋಷಣಾ ಪ್ರಮಾಣ ಪತ್ರ ಸಲ್ಲಿಸಿ ನೋಂದಣಿ ಮಾಡಿಸಬೇಕೆಂದು ಸೂಚಿಸಿದ್ದಾರೆ. ಈ ಮೂಲಕ ಹಳೇ ಪದ್ದತಿಯೇ ಜಾರಿಗೆ ಬಂದಿದೆ.

    ಸೇವೆ ವಿಲ ಎಲ್ಲಿ :
    ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಿರಿಯ ಅಧಿಕಾರಿಗಳು ತಳಮಟ್ಟದ ಅಧಿಕಾರಿಗಳ ಜತೆ ಹಾಗೂ ಇತರ ಇಲಾಖೆಗಳೊಂದಿಗೆ ಚರ್ಚೆ ನಡೆಸದೆ ಏಕಾಏಕಿ ಸುತ್ತೋಲೆ ಹೊರಡಿಸುತ್ತಿದೆ. ಇತ್ತೀಚೆಗಷ್ಟೇ ಸಹಕಾರ ಬ್ಯಾಂಕ್‌ಗಳು ಕಂಪ್ಯೂಟರ್ ಸೇವೆ ಆರಂಭಿಸಿವೆ. ಅಲ್ಲಿನ ಸಿಬ್ಬಂದಿಯೂ ತಾಂತ್ರಿಕವಾಗಿ ನಿಪುಣತೆ ಇರುವುದಿಲ್ಲ. ಮೊದಲು ತರಬೇತಿ ಕೊಟ್ಟು ಆನಂತರ ಜಾರಿಗೆ ತರಬೇಕಿತ್ತು. ಗ್ರಾಮೀಣಾ ಭಾಗದ ಸಹಕಾರ ಬ್ಯಾಂಕ್‌ಗಳಲ್ಲಿ ಮೂಲಸೌಕರ್ಯದ ಬಗ್ಗೆ ಮಾಹಿತಿ ಪಡೆಯದೆ ಇರುವುದು ಎಡವಟ್ಟಿಗೆ ಕಾರಣವಾಗಿದೆ.

    ರೈತರ ಸೇವೆಗೆ ವ್ಯವಸ್ಥೆ ಕಲ್ಪಿಸಿ :
    ಆನ್‌ಲೈನ್ ಸೇವೆಗಾಗಿ ನೂರಾರು ಕೋಟಿ ವೆಚ್ಚ ಮಾಡುವ ಬದಲು. ಗ್ರಾಮೀಣಾ ಭಾಗದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ರೈತರ ಸೇವೆಗಾಗಿಯೇ ಪ್ರತ್ಯೇಕ ಆಪರೇಟರ್ ಮತ್ತು ಕಂಪ್ಯೂಟರ್ ಸೇವೆ ಒದಗಿಸಿದರೆ ಅನುಕೂಲವಾಗಲಿದೆ.

    ಸೋಶಿಯಲ್​ ಮೀಡಿಯಾಗಳಿಗೆ ಮೂಗುದಾರ ಹಾಕಲು ಹೊಸ ಪ್ರಾಧಿಕಾರ…

    ‘ಅಪ್ಪು’ ಕನಸನ್ನು ನನಸು ಮಾಡಲು ಹೊರಟ ಪತ್ನಿ ಅಶ್ವಿನಿ: ಪಿಆರ್‌ಕೆಯಿಂದ ಮಹತ್ವದ ಘೋಷಣೆ!

    ಬಿಟ್​ಕಾಯಿನ್ ನಿಷೇಧ ಇಲ್ಲ, ಕ್ರಿಪ್ಟೋ ಟ್ಯಾಕ್ಸ್ ಖಚಿತ; ವಹಿವಾಟುಗಳಿಗೆ ಸರ್ಕಾರದ ನಿಯಮಗಳ ಲಗಾಮು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts