More

    ಸೋಶಿಯಲ್​ ಮೀಡಿಯಾಗಳಿಗೆ ಮೂಗುದಾರ ಹಾಕಲು ಹೊಸ ಪ್ರಾಧಿಕಾರ…

    ನವದೆಹಲಿ: ಫೇಸ್​ಬುಕ್, ಟ್ವಿಟರ್ ಮತ್ತು ಇತರೆ ಸೋಷಿಯಲ್ ಮೀಡಿಯಾ (ಎಸ್​ಎಂ) ವೇದಿಕೆಗಳನ್ನು ಪ್ರಕಾಶಕರು ಎಂದು ಪರಿಗಣಿಸಬೇಕು. ಅವುಗಳನ್ನು ನಿಯಮದ ಚೌಕಟ್ಟಿನೊಳಗೆ ತರುವುದಕ್ಕಾಗಿ ಒಂದು ಹೊಸ ನಿಯಂತ್ರಣ ಪ್ರಾಧಿಕಾರವನ್ನು ರಚಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

    2019ರಲ್ಲಿ ಮಂಡಿಸಲ್ಪಟ್ಟ ಪ್ರಸ್ತಾವಿತ ಡೇಟಾ ಪ್ರೊಟೆಕ್ಷನ್ ಬಿಲ್ ಅನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಸಂಸತ್ ಒಪ್ಪಿಸಿತ್ತು. 2 ವರ್ಷಗಳ ಬಳಿ ಈ ಶಿಫಾರಸು ವರದಿ ಸಿದ್ಧವಾಗಿದೆ. ಬಳಕೆದಾರರ ಖಾಸಗಿತನದ ರಕ್ಷಣೆ, ಗೂಗಲ್, ಅಮೆಜಾನ್ ಮುಂತಾದ ಕಂಪನಿಗಳು ಸಂಗ್ರಹಿಸುವ ಮತ್ತು ದಾಸ್ತಾನಿರಿಸುವ ಡೇಟಾದ ಮೇಲೆ ಬಿಗಿ ನಿಯಂತ್ರಣ ಜಾರಿಗೊಳಿಸಬೇಕು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮಾದರಿಯಲ್ಲೇ ಸೋಷಿಯಲ್ ಮೀಡಿಯಾಗಳಿಗೂ ಒಂದು ನಿಯಂತ್ರಣ ಪ್ರಾಧಿಕಾರದ ರಚನೆಯಾಗಬೇಕು. ಈಗಿರುವ ಕಾನೂನಿಗೆ ಪೂರಕವಾಗಿ ಸ್ವಲ್ಪ ಬಿಗಿಯಾದ ಕಾನೂನು ಇವುಗಳಿಗಾಗಿಯೇ ಜಾರಿಗೊಳಿಸಬೇಕು ಎಂಬಿತ್ಯಾದಿ ಶಿಫಾರಸುಗಳನ್ನು ಸಮಿತಿ ಮಾಡಿದೆ.

    ಎರಡು ಪಿಎಸ್​ಬಿ ಖಾಸಗೀಕರಣ: ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ ನೆರವಾಗುವಂತೆ ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸಲಿದೆ. ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಇದಾಗಿದೆ. ಬ್ಯಾಂಕಿಂಗ್ ಕಂಪನೀಸ್ (ಅಕ್ವಿಸಿಷನ್ ಆಂಡ್ ಟ್ರಾನ್ಸ್​ಫರ್ ಆಫ್ ಅಂಡರ್​ಟೇಕಿಂಗ್ಸ್) ಆಕ್ಟ್ ್ಸ 1970 ಮತ್ತು 1980, ಇನ್ಸಿಡೆಂಟಲ್ ಅಮೆಂಡಮೆಂಟ್ಸ್ ಆಫ್ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ 1949 ರಲ್ಲಿ ತಿದ್ದುಪಡಿ ತರುವುದು ಈ ತಿದ್ದುಪಡಿ ಮಸೂದೆಯ ಉದ್ದೇಶ. ಈ ಮೂಲಕ ಪ್ರಸಕ್ತ ವರ್ಷದಲ್ಲಿ 1.75 ಲಕ್ಷ ಕೋಟಿ ರೂಪಾಯಿ ಹೂಡಿಕೆ ಹಿಂಪಡೆಯುವ ಗುರಿ ಸಾಧನೆಗಾಗಿ ಬ್ಯಾಂಕುಗಳ ಖಾಸಗೀಕರಣಕ್ಕೆ ಸರ್ಕಾರ ಮುಂದಾಗಿದೆ.

    ಎನ್​ಡಿಪಿಎಸ್ ಕಾಯ್ದೆಗೆ ತಿದ್ದುಪಡಿ: ಡ್ರಗ್ಸ್ ಸಂತ್ರಸ್ತರ ಶೋಷಣೆ ತಡೆಯುವುದಕ್ಕಾಗಿ ನಾರ್ಕೆಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್​ಸ್ಟಾನ್ಸಸ್ (ಅಮೆಂಡಮೆಂಟ್) ಬಿಲ್ 2021 ಅನ್ನು ಕೇಂದ್ರ ಸರ್ಕಾರ ಈ ಸಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ತೀರಾ ವೈಯಕ್ತಿಕ ಬಳಕೆಗೆ ಯಾರಾದರೂ ಅಲ್ಪ ಪ್ರಮಾಣದ ಡ್ರಗ್ಸ್ ಇರಿಸಿಕೊಂಡಿದ್ದರೆ ಅಂಥ ಪ್ರಕರಣಗಳನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶ ಸರ್ಕಾರದ್ದು. ಈ ನಡೆಯು ಮಾದಕ ವ್ಯಸನದಿಂದ ಮುಕ್ತರಾಗಲು ಪ್ರಯತ್ನಿಸುತ್ತಿರುವ ಸಂತ್ರಸ್ತರಿಗೆ ನೆರವಾಗಲಿದೆ.

    ಕಂದಾಯ ಇಲಾಖೆ, ಗೃಹ ಸಚಿವಾಲಯ, ನಾರ್ಕೆಟಿಕಸ್ ಕಂಟ್ರೋಲ್ ಬ್ಯೂರೋ, ಸೋಷಿಯಲ್ ಜಸ್ಟೀಸ್ ಮಿನಿಸ್ಟ್ರಿ ಮತ್ತು ಆರೋಗ್ಯ ಸಚಿವಾಲಯಗಳು ಪ್ರಧಾನ ಮಂತ್ರಿ ಕಚೇರಿಗೆ ಈ ಸಂಬಂಧ ಶಿಫಾರಸುಗಳನ್ನು ನ.10ರಂದು ಸಲ್ಲಿಸಿದ್ದವು. ಇದರ ಪ್ರಕಾರ, ಎನ್​ಡಪಿಎಸ್ ಆಕ್ಟ್ 1985ರ ಸೆಕ್ಷನ್​ಗಳಾದ 15,17,18,20,21 ಮತ್ತು 22ಕ್ಕೆ ಹಾಗೂ ಸೆಕ್ಷನ್ 39ಕ್ಕೆ ತಿದ್ದುಪಡಿ ಉಂಟಾಗಲಿದೆ. ಇತ್ತೀಚೆಗೆ ಬಾಲಿವುಡ್ ನಟ ಶಾರುಕ್ ಖಾತ್ರ ಪುತ್ರ ಆರ್ಯನ್ ಖಾನ್ ಇಂಥದ್ದೆ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವುದನ್ನು ಸ್ಮರಿಸಬಹುದು.

    ಏಳು ಕಿಲೋಗಿಂತ ಹೆಚ್ಚು ಚಿನ್ನಾಭರಣ! ಎಸಿಬಿ ಅಧಿಕಾರಿಗಳ ದಾಳಿ ಸಮಯದಲ್ಲಿ ಪತ್ತೆ; ಇಲ್ಲಿದೆ ಅದರ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts