More

    ಕೃಷಿ ಕಾನೂನು ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿದವರೇ ಪ್ರತಿಭಟನೆಯನ್ನೂ ನಡೆಸ್ತಿರೋದು !

    ನವದೆಹಲಿ: ಹೊಸ ಕೃಷಿ ಕಾನೂನು ವಿರೋಧಿಸಿ ಇಂದು ಭಾರತ ಬಂದ್ ನಡೆಯುತ್ತಿದೆ. ವಿಪರ್ಯಾಸ ಎಂದರೆ ತನ್ನ ಅವಧಿಯ ಸಮಿತಿ ನೀಡಿದ ಶಿಫಾರಸುಗಳ ವಿರುದ್ಧವೇ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸುತ್ತಿದೆ, ಭಾರತ ಬಂದ್​ಗೆ ಬೆಂಬಲ ನೀಡಿದೆ!

    2013ರಲ್ಲೂ ಒಂದು ಸಮಿತಿ!

    ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಇನ್ನೊಂದು ಕೃಷಿ ಉತ್ಪನ್ನ ಕ್ರಿಯಾ ಸಮಿತಿ ರಚನೆಯಾಗಿತ್ತು. ಅದರಲ್ಲಿ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರಗಳ ಮುಖ್ಯಮಂತ್ರಿಗಳು ಸದಸ್ಯರಾಗಿದ್ದರು.ಈ ಸಮಿತಿಯೂ ಕೃಷಿ ಕಾನೂನು ಸುಧಾರಣೆಯನ್ನು ಬೆಂಬಲಿಸಿತ್ತು.ಈಗ ಇದೇ ಕಾಂಗ್ರೆಸ್ ಸಮಿತಿಯವರು ಅವರೇ ತಯಾರಿಸಿದ ಕೃಷಿ ಕಾನೂನು ಸುಧಾರಣಾ ಅಂಶಗಳನ್ನು ವಿರೋಧಿಸುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ.

    ಹೀಗೆಂದು ಸರ್ಕಾರದ ಮೂಲಗಳು ಹೇಳಿದ್ದು, ಇದಕ್ಕೆ ಸಂಬಂಧಿಸಿದ ಒಂದಿಷ್ಟು ಮಾಹಿತಿಯನ್ನೂ ಬಹಿರಂಗಪಡಿಸಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2010ರಲ್ಲಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಸಮಿತಿ ನೀಡಿರುವ ಸುಧಾರಣಾ ಅಂಶಗಳನ್ನೇ ಹೊಸ ಕೃಷಿ ಕಾನೂನಿನಲ್ಲಿ ಅಳವಡಿಸಲಾಗಿದೆ. ಇದನ್ನು ಕಾಂಗ್ರೆಸ್, ಎನ್​ಸಿಪಿ ಮತ್ತು ಇತರೆ ರಾಜಕೀಯ ಪಕ್ಷಗಳು ಬೆಂಬಲಿಸಿದ್ದವು. ಈಗ ಅದೇ ಹೊಸ ಕೃಷಿ ಕಾನೂನಗಳನ್ನು ಹಿಂಪಡೆಯುವಂತೆ ಬೇಡಿಕೆ ಇಟ್ಟಿವೆ ಈ ಪಕ್ಷಗಳು!!! ಕೇಂದ್ರ ಸಚಿವ ರವಿಶಂಕರ್ ಪ್ರಸಾದ್​ ಅವರು ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್​ ಮತ್ತು ಎನ್​ಸಿಪಿಗಳ ಇಂತಹ ದ್ವಿಮುಖ ನೀತಿಯನ್ನು ಖಂಡಿಸಿದ್ದಾರೆ.

    ಇದನ್ನೂ ಓದಿ: 

    ಸರ್ಕಾರಿ ಮೂಲಗಳ ಪ್ರಕಾರ, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಸಮಿತಿ 2010ರ ಡಿಸೆಂಬರ್ ತಿಂಗಳಲ್ಲಿ ಈ ವರದಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಆಗ ಹೂಡಾ ಅವರು ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಸಮಿತಿ ನೀಡಿದ ಶಿಫಾರಸುಗಳು ಹೀಗಿವೆ.
    * ಕೃಷಿ ಉತ್ಪನ್ನಗಳನ್ನು ಎಲ್ಲ ಬಗೆಯ ನಿರ್ಬಂಧಗಳಿಂದ ಮುಕ್ತಗೊಳಿಸಬೇಕು. ಅದ ಸಾರಣೆ, ಮಾರಾಟ, ದಾಸ್ತಾನು, ಹಣಕಾಸು, ರಫ್ತು ಇತ್ಯಾದಿ ಬಗೆಯ ನಿರ್ಬಂಧಗಳು ಇರಕೂಡದು. ಎಪಿಎಂಸಿ ಅಥವಾ ಕಾರ್ಪೊರೇಟ್ ಪರವಾನಗಿ ಮುಂತಾದ ಏಕಸ್ವಾಮ್ಯ ಇರಬಾರದು. ಮಾರುಕಟ್ಟೆ ಮೇಲೆ ನಿರ್ಬಂಧ ಇರಬೇಕು.

    ಇದನ್ನೂ ಓದಿ: ಭಾರತ ಬಂದ್ ಗೆ ಗಣಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

    * ಕೃಷಿಕರು/ರೈತರು ತಾವು ಬೆಳೆದ ಉತ್ಪನ್ನಗಳನ್ನು ಮುಕ್ತವಾಗಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡಬೇಕು. ಅಂತಹ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತೇಜಿಸಬೇಕು.
    * ಅಗತ್ಯ ವಸ್ತುಗಳ ಕಾಯ್ದೆಯನ್ನು ಕೇವಲ ತುರ್ತುಪರಿಸ್ಥಿತಿಯ ಸಂದರ್ಭದಲ್ಲಷ್ಟೇ ಬಳಸಬೇಕು. ಅದನ್ನು ಆಯಾ ರಾಜ್ಯ ಸರ್ಕಾಗಳ ತೀರ್ಮಾನ, ವಿವೇಚನೆಗೆ ಬಿಡಬೇಕು.

    ಇದನ್ನೂ ಓದಿ: ಕಾವೇರಿದ ಭಾರತ್​ ಬಂದ್​: ಬಸ್​ ನಿಲ್ದಾಣ, ಅಂಗಡಿ-ಮುಂಗಟ್ಟು ಬಂದ್​ ಮಾಡಿಸಿ ರೈತರ ಪ್ರತಿಭಟನೆ

    * 2003ರ ಮಾದರಿ ಕೃಷಿ ಮಾರುಕಟ್ಟೆ ಕಾನೂನನ್ನು ಎಲ್ಲ ರಾಜ್ಯಗಳು ಅನ್ವಯಿಸಿಕೊಂಡು, ಪರ್ಯಾಯ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು. ಕೃಷಿಕರಿಗೆ ಸ್ಪರ್ಧಾತ್ಮಕ ಮತ್ತು ಮುಕ್ತ ಮಾರುಕಟ್ಟೆ ಒದಗಿಸುವ ಸಲುವಾಗಿ ಈ ಕಾನೂನಿನ ಆಚೆಗೂ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬಹುದು.(ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಡಿಟಿಎಚ್​ ಸೇವೆಗಳನ್ನು ನಿಯಮದ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್​ ಪ್ರಕಟಿಸಿದೆ ಟ್ರಾಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts