More

    ಎನ್​ಸಿಪಿ ಚಿಹ್ನೆ, ಹೆಸರು ಅಜಿತ್​ ಪವಾರ್​ ಬಣದ ಪಾಲು: ಶರದ್​ ಪವಾರ್​ಗೆ ಮುಖಭಂಗ

    ನವದೆಹಲಿ: ತಾನು ಸ್ಥಾಪಿಸಿದ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕಳೆದುಕೊಳ್ಳುವ ಮೂಲಕ ಸೋದರಳಿಯ ಅಜಿತ್​ ಪವಾರ್​ ಜತೆಗಿನ ರಾಜಕೀಯ ರಣರಂಗದಲ್ಲಿ ಹಿರಿಯ ನಾಯಕ ಶರಾದ್​ ಪವಾರ್​ ಅವರಿಗೆ ಭಾರಿ ಮುಖಭಂಗವಾಗಿದೆ.

    ಶಿವಸೇನಾ ಪಕ್ಷದಲ್ಲಿ ಈ ಹಿಂದೆ ಉಂಟಾದ ಬಣ ರಾಜಕೀಯದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಬಣಕ್ಕೆ ಶಿವಸೇನಾ ಪಕ್ಷದ ಚಿಹ್ನೆ ಮತ್ತು ಹೆಸರು ದಕ್ಕಿದ ರೀತಿಯಲ್ಲೇ ನ್ಯಾಷನಲ್​ ಕಾಂಗ್ರೆಸ್​ ಪಾರ್ಟಿಯ ಚಿಹ್ನೆ ಮತ್ತು ಹೆಸರು ಅಜಿತ್​ ಪವಾರ್​ ಬಣದ ಪಾಲಾಗಿದೆ. ಅಜಿತ್​ ಪವಾರ್​ ನೇತೃತ್ವದ ಬಣವೇ ನಿಜವಾದ ಎನ್​ಸಿಪಿ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿದ್ದು, ಎನ್​ಸಿಪಿಯನ್ನು ಕಟ್ಟಿ ಬೆಳೆಸಿದ ಶರಾದ್ ಪವಾರ್​ಗೆ ಭಾರಿ ಹಿನ್ನಡೆಯಾಗಿದೆ.

    ಎರಡು ಬಣಗಳ ನಡುವೆ ಇರುವ ಸಂಖ್ಯಾಬಲ ಆಧಾರದ ಮೇಲೆ ಚುನಾವಣಾ ಆಯೋಗ ನಿರ್ಧಾರ ಮಾಡಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಜಿತ್ ಪವಾರ್ ನೇತೃತ್ವದ ಬಣವು ಎನ್‌ಸಿಪಿಯ 53 ಶಾಸಕರ ದೊಡ್ಡ ಭಾಗವನ್ನು ಹೊಂದಿದೆ. ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬಣಕ್ಕೆ ಹೆಸರನ್ನು ಆಯ್ಕೆ ಮಾಡಲು ಶರದ್ ಪವಾರ್ ಅವರನ್ನು ಆಯೋಗ ಕೇಳಿದೆ. ಫೆಬ್ರವರಿ 7 ರಂದು ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಬಣದ ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಸಂಸ್ಥೆಗೆ ತಿಳಿಸಲು ಕೇಳಲಾಗಿದೆ.

    ಕಳೆದ ವರ್ಷ ಪಕ್ಷದ ನಿಯಂತ್ರಣಕ್ಕಾಗಿ ಶರದ್​ ಪವಾರ್​ ಮತ್ತು ಅಜಿತ್​ ಪವಾರ್​ ನಡುವೆ ಕದನ ಆರಂಭವಾದಾಗಿನಿಂದ ಪಕ್ಷದ 53 ಶಾಸಕರಲ್ಲಿ 12 ಮಂದಿ ಮಾತ್ರ ಶರದ್ ಪವಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಉಳಿದ 41 ಶಾಸಕರು ಅಜಿತ್ ಪವಾರ್ ಬೆನ್ನಿಗಿದ್ದು, ಬಿಜೆಪಿ ಹಾಗೂ ಏಕನಾಥ್ ಶಿಂಧೆ ಮೈತ್ರಿಯೊಂದಿಗೆ ಕೈಜೋಡಿಸಿದ್ದಾರೆ.

    ಎನ್‌ಸಿಪಿ ಸ್ಥಾಪಿಸಿದವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹೀಗಿರುವಾಗ ಚುನಾವಣಾ ಆಯೋಗ ಮಾಡಿದ್ದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಶರದ್ ಪವಾರ್ ಬಣದ ಹಿರಿಯ ನಾಯಕ ಅನಿಲ್ ದೇಶಮುಖ್ ಹೇಳಿದ್ದಾರೆ. (ಏಜೆನ್ಸೀಸ್​)

    ಗರ್ಭಕೋಶದಲ್ಲಿದ್ದ 4.5 ಕೆಜಿ ಗಡ್ಡೆ ಹೊರತೆಗೆದ ವೈದ್ಯರು! ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

    ಆಟವಾಡುತ್ತ ಜೀವಂತ ಮೀನು ನುಂಗಿದ 11 ತಿಂಗಳ ಮಗು; ಶಸ್ತ್ರಚಿಕಿತ್ಸೆ ಮೂಲಕ ಪ್ರಾಣ ಉಳಿಸಿದ ವೈದ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts