More

    ಫೆಬ್ರವರಿ 16ರಂದು ಭಾರತ್​ ಬಂದ್​ಗೆ ಕರೆ ನೀಡಿದ ರೈತ ಸಂಘಟನೆಗಳು; ಕಾರಣ ಹೀಗಿದೆ

    ನವದೆಹಲಿ: ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳ ಒಕ್ಕೂಟವು ಫೆಬ್ರವರಿ 16ರಂದು ಭಾರತ್​ ಬಂದ್​ಗೆ ಕರೆ ನೀಡಲು ನಿರ್ಧರಿಸಿವೆ ಎಂದು ಭಾರತ ರಾಷ್ಟ್ರೀಯ ಕಿಸಾನ್​ ಯೂನಿಯನ್​ನ (BKU) ವಕ್ತಾರ ರಾಕೇಶ್​ ಟಿಕಾಯತ್​ ತಿಳಿಸಿದ್ದಾರೆ.

    ಉತ್ತರಪ್ರದೇಶದ ನೋಯ್ಡಾದಲ್ಲಿ ಈ ಕುರಿತು ಮಾತನಾಡಿದ ಟಿಕಾಯತ್​, ಭಾರತ್​ ಬಂದ್​ಗೆ ರೈತ ಸಂಘಟನೆಗಳು, ವ್ಯಾಪಾರಿಗಳು ಮತ್ತು ಸಾರಿಗೆ ಸಂಸ್ಥೆಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಭಾರತ ಜೋಡೋ ನ್ಯಾಯ ಯಾತ್ರೆ ಬಿಜೆಪಿಯ ಸರ್ವಾಧಿಕಾರಿ ಸಾಮ್ರಾಜ್ಯದೊಳಗೆ ತಲ್ಲಣ ಸೃಷ್ಟಿಸಿದೆ: ಸಿಎಂ ಸಿದ್ದರಾಮಯ್ಯ

    ರೈತರ ಬಹುದಿನದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾವು ಫೆಬ್ರವರಿ 16ರಂದು ಭಾರತ್​ ಬಂದ್​ಗೆ ಕರೆ ನೀಡಿದ್ದೇವೆ. ಆ ದಿನ ರೈತರು ಸಹ ಹೊಲಗಳಿಗೆ ತೆರಳದೆ ಬಂದ್ ಆಚರಿಸಿದರೆ ದೇಶಕ್ಕೆ ದೊಡ್ಡ ಸಂದೇಶ ರವಾನೆ ಮಾಡಿದಂತಾಗುತ್ತದೆ. ವ್ಯಾಪಾರಿಗಳು ಸಹ ಆ ದಿನ ವ್ಯಾಪಾರ ಸ್ಥಗಿತಗೊಳಿಸಬೇಕು ಮತ್ತು ಗ್ರಾಹಕರು ಖರೀದಿ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

    ರೈತರು ಬೆಳೆದಿರುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ನಿರುದ್ಯೋಗ, ಅಗ್ನಿವೀರ್ ಯೋಜನೆಗೆ ವಿರೋಧ ಮತ್ತು ನಿವೃತ್ತರಾದವರಿಗೆ ಪಿಂಚಣಿ ಸಿಗದಿರುವುದು ಸಹ ದೊಡ್ಡ ಸಮಸ್ಯೆಯಾಗಿದ್ದು ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಬಂದ್​ಗೆ ಕರೆ ನೀಡಲಾಗಿದೆ. ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ರಾಷ್ಟ್ರೀಯ ಕಿಸಾನ್​ ಯೂನಿಯನ್​ನ (BKU) ವಕ್ತಾರ ರಾಕೇಶ್​ ಟಿಕಾಯತ್​ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts