More

    ಇಲ್ಲಿ ರೆಡ್ ಲೈಟ್ ಆನ್ ಆಗುತ್ತಿದ್ದಂತೆ ವಾಹನಗಳು ಆಫ್ ಆಗುತ್ತವೆ!; ಎಲ್ಲಿ, ಯಾಕೆ?

    ನವದೆಹಲಿ: ರೆಡ್ ಲೈಟ್​ ಎಂದರೆ ಸ್ಟಾಪ್ ಎಂಬುದರ ಸಂಕೇತ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಅದಾಗ್ಯೂ ರೆಡ್​ ಲೈಟ್​ ಎಂದರೆ ಇನ್ನೂ ಕೆಲವು ಅರ್ಥಗಳೂ ಇವೆ. ಇಲ್ಲೊಂದು ಕಡೆ ಸಮಸ್ಯೆಯೊಂದಕ್ಕೆ ಪರಿಹಾರ ರೂಪದಲ್ಲೂ ರೆಡ್ ಲೈಟ್​ ಬಳಸಲಾಗುತ್ತಿದೆ. ಅಂದರೆ ಇಲ್ಲಿ ರೆಡ್ ಲೈಟ್ ಆನ್ ಆಗುತ್ತಿದ್ದಂತೆ ವಾಹನಗಳು ಆಫ್ ಆಗುತ್ತವೆ!

    ಹೌದು.. ರಾಷ್ಟ್ರ ರಾಜಧಾನಿಯಲ್ಲೇ ಇಂಥದ್ದೊಂದು ಬೆಳವಣಿಗೆ ಮರುಕಳಿಸಿದೆ. ರೆಡ್​ ಲೈಟ್​ ಮೂಲಕವೇ ಇಲ್ಲಿನ ಪ್ರಮುಖ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮತ್ತೊಮ್ಮೆ ಮಾಡಲಾಗುತ್ತಿದೆ. ದೆಹಲಿಯನ್ನು ಕಾಡುತ್ತಿರುವ ವಾಯುಮಾಲಿನ್ಯದ ಸಮಸ್ಯೆಗೆ ಈಗ ರೆಡ್​​ ಲೈಟ್ ಪರಿಹಾರೋಪಾದಿಯಲ್ಲಿ ಬಳಕೆ ಆಗುತ್ತಿದೆ.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ದೆಹಲಿಯ ಟ್ರಾಫಿಕ್ ಸಿಗ್ನಲ್​ಗಳಲ್ಲಿ ರೆಡ್ ಲೈಟ್ ಆನ್ ಆಗುತ್ತಿದ್ದಂತೆ ಅಲ್ಲಿ ನಿಂತ ವಾಹನಗಳ ಇಗ್ನಿಷನ್ ಆಫ್ ಮಾಡುವ ಅಭಿಯಾನವನ್ನು ಮತ್ತೆ ಹಮ್ಮಿಕೊಳ್ಳಲಾಗಿದ್ದು, ಇಂದು ಇದಕ್ಕೆ ಮರು ಚಾಲನೆ ನೀಡಲಾಯಿತು. ರಾಜ್ಯ ಪರಿಸರ ಸಚಿವ ಗೋಪಾಲ್ ರೈ ಈ ಅಭಿಯಾನ ಉದ್ಘಾಟಿಸಿದರು.
    ವಾಹನಗಳ ಹೊಗೆಯುಗುಳುವಿಕೆ ತಗ್ಗಿಸುವ ಮೂಲಕ ಮಾಲಿನ್ಯದಲ್ಲಿ ಇಳಿಕೆ ಕಂಡುಬಂದಿರುವುದರಿಂದ ‘ರೆಡ್ ಲೈಟ್ ಆನ್​, ಗಾಡಿ ಆಫ್​’ ಅಭಿಯಾನಕ್ಕೆ ಪುನಃ ಚಾಲನೆ ನೀಡಲಾಗುತ್ತಿದೆ ಎಂದು ನಿನ್ನೆ ಈ ಅಭಿಯಾನ ಕುರಿತು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಸಚಿವ ಗೋಪಾಲ್ ರೈ ಹೇಳಿದ್ದರು.

    ಇದನ್ನೂ ಓದಿ: ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ದೆಹಲಿಯಲ್ಲಿ ರೆಡ್ ಲೈಟ್ ಆನ್​ ಗಾಡಿ ಆಫ್ ಅಭಿಯಾನವನ್ನು 2020ರ ಅ. 16ರಂದು ಮೊದಲ ಬಾರಿಗೆ ಕೈಗೊಳ್ಳಲಾಗಿತ್ತು. ಟ್ರಾಫಿಕ್ ಸಿಗ್ನಲ್​ಗಳಲ್ಲಿ ವಾಹನಗಳ ಇಂಜಿನ್ ಆನ್​ ಇರುವುದರಿಂದ ವಾಯುಮಾಲಿನ್ಯದಲ್ಲಿ ಸುಮಾರು ಶೇ. 9ರಷ್ಟು ಏರಿಕೆ ಆಗುತ್ತದೆ ಸೆಂಟ್ರಲ್ ರೋಡ್ ರಿಸರ್ಚ್ ಇನ್​ಸ್ಟಿಟ್ಯೂಟ್​ 2019ರಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಕಂಡುಬಂದಿತ್ತು.

    ಮಧುಮೇಹಿಗಳ ಗಾಯಗಳಿಗಾಗಿ ಹೊಸ ಔಷಧ ಕಂಡುಹಿಡಿದ ವಿಜ್ಞಾನಿಗಳು; ಈ ಜೆಲ್​ಗಿದೆ 3 ಪಟ್ಟು ಬೇಗ ಗುಣವಾಗಿಸುವ ಶಕ್ತಿ

    ಆ ವಿಷಯವಾಗಿ ಭಾರತದಲ್ಲಿ ಯಾವತ್ತೂ ಯುದ್ಧವಾಗಿಲ್ಲ: ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts