More

    ಮಹಿಳೆಯರಿಗೆ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿ ನಡೆಸಲು ಬಿಸಿಸಿಐ ಐತಿಹಾಸಿಕ ನಿರ್ಧಾರ!

    ಬೆಂಗಳೂರು: ದೇಶಿಯ ಕ್ರಿಕೆಟ್ ಮೇಲೆ ಹೆಚ್ಚಿನ ಗಮನಹರಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರೆಡ್‌ ಬಾಲ್‌ ಕ್ರಿಕೆಟ್‌ ಪಂದ್ಯವನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಮಾರ್ಚ್ 28ರಿಂದ ಸೀನಿಯರ್ ಇಂಟರ್ ಜೋನಲ್ ಮಲ್ಟಿ-ಡೇ ಟ್ರೋಫಿಯನ್ನು ನಡೆಸಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ:ಸಿಎಂ ಸ್ಟಾಲಿನ್​ಗೆ ಚೀನಾ ಭಾಷೆಯಲ್ಲಿ ಶುಭ ಕೋರಿ ಬಿಜೆಪಿ ಲೇವಡಿ!

    ಬರೋಬ್ಬರಿ ಆರು ವರ್ಷಗಳ ನಂತರ ಮಹಿಳೆಯರ ರೆಡ್ ಬಾಲ್ ಕ್ರಿಕೆಟ್ ಪಂದ್ಯಗಳು ಭಾರತದ ದೇಶೀಯ ಕ್ರಿಕೆಟ್‌ ಪಂದ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ.
    ಸೀನಿಯರ್ ಮಹಿಳೆಯರ ಅಂತರ ವಲಯ ಪಂದ್ಯಾವಳಿ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪುಣೆ ಮೈದಾನದಲ್ಲಿ ಆರಂಭವಾಗಲಿದೆ. ಪ್ರತಿ ಪಂದ್ಯವೂ ಮೂರು ದಿನಗಳ ಕಾಲ ನಡೆಯಲಿದೆ. 2018ರಲ್ಲಿ ಕೊನೆಯ ಬಾರಿಗೆ ಬಿಸಿಸಿಐ ಎರಡು ದಿನಗಳ ಪಂದ್ಯವನ್ನು ಆಯೋಜಿಸಿತ್ತು.

    ಟೀಂ ಇಂಡಿಯಾ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿತ್ತು. ಈ ಹಿಂದೆ 2021ರಲ್ಲಿಯೂ ಆ ದೇಶಗಳಿಗೆ ಪ್ರವಾಸಕ್ಕೆ ಹೋದಾಗ ದೀರ್ಘ ಸ್ವರೂಪದಲ್ಲಿ ಎದುರಿಸಿದ್ದರು.

    ಬಿಸಿಸಿಐ ಭವಿಷ್ಯದಲ್ಲಿ ಹೆಚ್ಚಿನ ಟೆಸ್ಟ್‌ಗಳನ್ನು ನಡೆಸುವ ಆಶಯ ಹೊಂದಿದೆ. ಅದರ ಭಾಗವಾಗಿ ಇದೀಗ ದೇಶಿ ಕ್ರಿಕೆಟ್ ನಲ್ಲೂ ಅಭ್ಯಾಸಕ್ಕಾಗಿ ರೆಡ್ ಬಾಲ್ ಪಂದ್ಯಗಳನ್ನು ಆಯೋಜಿಸುತ್ತಿದೆ. ಪ್ರಸ್ತುತ ಮಹಿಳಾ ಕ್ರಿಕೆಟಿಗರು ಡಬ್ಲ್ಯುಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಮಾರ್ಚ್ 17 ರಂದು ಕೊನೆಗೊಳ್ಳುತ್ತದೆ. ಟೂರ್ನಿ ಮುಗಿದ ಹತ್ತು ದಿನಗಳ ನಂತರ ಅಂತರ ವಲಯ ಟೂರ್ನಿ ಆರಂಭವಾಗಲಿದೆ.

    ಪಂದ್ಯಾವಳಿಯನ್ನು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಆಯೋಜಿಸಲಿದೆ. ಪೂರ್ವ ವಲಯ X ಈಶಾನ್ಯ ವಲಯ, ಪಶ್ಚಿಮ ವಲಯ X ಕೇಂದ್ರ ವಲಯ ನಡುವಿನ ಪಂದ್ಯಗಳು ಲೀಗ್ ಹಂತದಲ್ಲಿ ನಡೆಯಲಿವೆ.  14 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಉತ್ತರ ವಲಯ ಹಾಗೂ ದಕ್ಷಿಣ ವಲಯ ನೇರವಾಗಿ ಸೆಮಿಸ್‌ನಲ್ಲಿ ಸೆಣಸಲಿವೆ. ಲೀಗ್ ಹಂತದಲ್ಲಿ ಗೆದ್ದ ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಸೆಮಿಫೈನಲ್ ಪಂದ್ಯಗಳು ಏಪ್ರಿಲ್ 8 ರಂದು ನಡೆಯಲಿದೆ. ಫೈನಲ್ ಏಪ್ರಿಲ್ 9 ರಂದು ನಡೆಯಲಿದೆ.

    ಬಿಸಿಸಿಐ ತೆಗೆದುಕೊಂಡ ನಿರ್ಧಾರಕ್ಕೆ ಸ್ವಾಗತ: ರಾಷ್ಟ್ರೀಯ ತಂಡವು ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ದೇಶೀಯ ಮಟ್ಟದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡುವ ಮುಂದಿನ ಪೀಳಿಗೆಯ ಕ್ರಿಕೆಟಿಗರ ಅಗತ್ಯವಿದೆ. ಕೆಂಪು ಚೆಂಡು ಪಂದ್ಯಗಳನ್ನು ವಲಯ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿಯೂ ಆಡಬೇಕು ಎಂದು ನಾನು ಬಯಸುತ್ತೇನೆ, ಎಂದು ಭಾರತದ ಮಾಜಿ ವೇಗಿ ಅಮಿತಾ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಲೋಕಸಭಾ ಚುಣಾವಣೆಗೆ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ರೆಡಿ..! ಈ ಬಾರಿ ಮೋದಿ, ಅಮಿತ್ ಶಾ, ಸಿಂಗ್​ ಕಣಕ್ಕಿಳಿಯೋದು ಇಲ್ಲಿಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts