More

    ಸಿಎಂ ಸ್ಟಾಲಿನ್​ಗೆ ಚೀನಾ ಭಾಷೆಯಲ್ಲಿ ಶುಭ ಕೋರಿ ಬಿಜೆಪಿ ಲೇವಡಿ!

    ಚೆನ್ನೈ: ಇಸ್ರೋದ ಹೊಸ ಉಡಾವಣಾ ಕೇಂದ್ರದ ಬಗ್ಗೆ ನೀಡಿದ ಜಾಹೀರಾತಿನಲ್ಲಿ ಚೀನಾ ಧ್ವಜವನ್ನು ಬಳಸಿ ತಮಿಳುನಾಡು ಸರ್ಕಾರ ದೊಡ್ಡ ಎಡವಟ್ಟು ಒಂದನ್ನು ಮಾಡಿಕೊಂಡಿತ್ತು. ಇದೀಗ ತಮಿಳುನಾಡು ಬಿಜೆಪಿ ಚೀನಾ ಭಾಷೆಯಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಶುಭಾಯಶಗಳನ್ನು ತಿಳಿಸಿ ವ್ಯಂಗ್ಯವಾಡಿದೆ.

    ಇದನ್ನೂ ಓದಿ:ಲೋಕಸಭಾ ಚುಣಾವಣೆಗೆ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ರೆಡಿ..! ಈ ಬಾರಿ ಮೋದಿ, ಅಮಿತ್ ಶಾ, ಸಿಂಗ್​ ಕಣಕ್ಕಿಳಿಯೋದು ಇಲ್ಲಿಂದ!

    ತಮಿಳುನಾಡು ಬಿಜೆಪಿ ತನ್ನ ಎಕ್ಸ್​ ಖಾತೆಯಲ್ಲಿ ಡಿಎಂಕೆ ನೇತೃತ್ವದ ಮುಖ್ಯಮಂತ್ರಿ ಸ್ಟಾಲಿನ್ ಅವರ ಹುಟ್ಟುಹಬ್ಬಕ್ಕೆ ಬಹಳ ವಿಭಿನ್ನ ಮತ್ತು ವಿಶೇಷವಾಗಿ ಶುಭ ಕೋರಿದೆ. ಬಿಜೆಪಿ ಪಕ್ಷ ಸಿಎಂ ಸ್ಟಾಲಿನ್ ಅವರ ಪೋಟೋದೊಂದಿಗೆ ಚೀನಾ ಭಾಷೆಯಲ್ಲಿ ಶುಭ ಕೋರಿ ಪೋಸ್ಟ್ ಮಾಡಿದೆ.

    ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಅವರ ನೆಚ್ಚಿನ ಭಾಷೆಯಲ್ಲಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ ಎಂದು ಟ್ಟೀಟ್​ ಮಾಡಿದೆ.

    ಇತ್ತೀಚೆಗೆ ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ಇಸ್ರೋ ಬಾಹ್ಯಾಕಾಶ ನಿಲ್ದಾಣದ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ಹಿನ್ನೆಲೆ ತಮಿಳುನಾಡಿನ ಮೀನುಗಾರಿಕೆ ಸಚಿವೆ ಅನಿತಾ ರಾಧಾಕೃಷ್ಣನ್‌ ಅವರು ಜಾಹೀರಾತು ನೀಡಿದ್ದರು. ಆದರೆ, ಅದರಲ್ಲಿ ಚೀನಾ ಧ್ವಜ ಇರುವುದು ಕಂಡುಬಂದಿದೆ. ಯೋಜನೆಯನ್ನು ತಮಿಳುನಾಡಿಗೆ ತರಲು ಮಾಜಿ ಸಿಎಂ ಕರುಣಾನಿಧಿ ಹಾಗೂ ಹಾಲಿ ಸಿಎಂ ಎಂಕೆ ಸ್ಟಾಲಿನ್‌ ಅವರ ಪ್ರಯತ್ನಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜಾಹೀರಾತನ್ನು ನೀಡಲಾಗಿತ್ತು. ಆದರೆ, ಈಗ ಜಾಹೀರಾತೇ ಉಲ್ಟಾ ಹೊಡೆದಿತ್ತು. ದೇಶಾದ್ಯಂತ ಆಕ್ರೋಶಕ್ಕೂ ಕಾರಣವಾಗಿತ್ತು.

    ಜಾಹೀರಾತಿನಲ್ಲಿ ಇಸ್ರೋದ ರಾಕೆಟ್‌ನ ತುದಿಯಲ್ಲಿ ಚೀನಾ ಧ್ವಜವನ್ನು ಹಾಕುವ ಮೂಲಕ ಎಡವಟ್ಟು ಮಾಡಿಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.

     

    ಲೋಕಸಭಾ ಚುಣಾವಣೆಗೆ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ರೆಡಿ..! ಈ ಬಾರಿ ಮೋದಿ, ಅಮಿತ್ ಶಾ, ಸಿಂಗ್​ ಕಣಕ್ಕಿಳಿಯೋದು ಇಲ್ಲಿಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts