More

    ನೆಲಗದರನಹಳ್ಳಿಯಲ್ಲಿ ಬದುಕು ನರಕ!

    1 ಮೂಲಸೌಕರ್ಯ ಕಲ್ಪಿಸದ ಬಿಬಿಎಂಪಿ

    2 ಮನೆಗೆ ನುಗ್ಗುತ್ತದೆ ರಾಜಕಾಲುವೆ ನೀರು

    3 ರುಕ್ಮಿಣಿನಗರ ನಿವಾಸಿಗಳ ಗೋಳು ಕೇಳೋರ್ಯಾರು?

    4 ಮುಖ್ಯರಸ್ತೆ ಅಗೆದಿದ್ದರಿಂದ ಸಂಚಾರಕ್ಕೆ ಸಂಕಷ್ಟ

    ಸತೀಶ್ ಕೆ.ಬಳ್ಳಾರಿ
    ಬೆಂಗಳೂರು: ನೆಲಗೆದರನಹಳ್ಳಿಯ ರುಕ್ಮಿಣಿನಗರದಲ್ಲಿ ರಾಜಕಾಲುವೆ ದುರಸ್ತಿಗೆ 15 ದಿನಗಳ ಹಿಂದೆ ಮುಖ್ಯರಸ್ತೆಯನ್ನು ಅಗೆದಿದ್ದು, ಸಂಚಾರ, ವ್ಯಾಪಾರ ಮತ್ತು ಜೀವನ ನಿರ್ವಹಣೆ ದುಸ್ತರವಾಗಿದೆ.

    ಸೆ.8ರ ರಾತ್ರಿ ಸುರಿದಿದ್ದ ಭಾರಿ ಮಳೆಯಿಂದಾಗಿ ರುಕ್ಮಿಣಿನಗರದಲ್ಲಿ ರಾಜಕಾಲುವೆ ತುಂಬಿ, ಮನೆಗಳು ಸೇರಿ ಸುಮಾರು 100ಕ್ಕೂ ಹೆಚ್ಚು ಕಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅದಾಗಿ ಕೆಲವೇ ದಿನಗಳಲ್ಲಿ ರಾಜಕಾಲುವೆ ದುರಸ್ತಿಗಾಗಿ ಬಿಬಿಎಂಪಿ ಎರಡೂ ಭಾಗದಲ್ಲಿ ರಸ್ತೆ ಅಗೆದಿದೆ. ಇದರಿಂದ ತುಮಕೂರು ರಸ್ತೆಯ 8ನೇ ಮೈಲಿಯಿಂದ ನೆಲಗೆದರನಹಳ್ಳಿ, ನಾಗಸಂದ್ರ, ಬೆಲ್ಮಾರ್ ಲೇಔಟ್, ಗೋಪಾಲನಗರ, ತಿಪ್ಪೇನಹಳ್ಳಿ ಹಾಗೂ ಪೀಣ್ಯ 2ನೇ ಹಂತದ ಕೆಲವು ಪ್ರದೇಶಗಳತ್ತ ತೆರಳುವವರಿಗೆ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ:  ಖ್ಯಾತ ವಿಮರ್ಶಕ ಡಾ.ಜಿ.ಎಸ್​.ಆಮೂರ ಅಸ್ತಂಗತ

    ಕುಸಿಯುತ್ತಿದೆ ನೆಲ: ರುಕ್ಮಿಣಿನಗರದಲ್ಲಿ ರಾಜಕಾಲುವೆ ತುಂಬಿ ಮನೆಗಳು ಹಾಗೂ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಣ್ಣ ರಸ್ತೆಗಳಲ್ಲಿ ಗುಂಡಿಗಳಾಗುತ್ತಿವೆ. ಭಾರಿ ಗಾತ್ರದ ವಾಹನ ಸಂಚಾರಕ್ಕೆ ಅವಕಾಶವಿಲ್ಲದಂತಾಗಿದೆ. ಲಾರಿಗಳ ಸಂಚಾರದಿಂದ ಕೆಲವು ಲೇಔಟ್ ರಸ್ತೆಗಳು ಪೂರ್ಣ ಹಾಳಾಗಿ ಕೆಸರುಗದ್ದೆಯಂತಾಗಿವೆ. ಮ್ಯಾನ್​ಹೋಲ್​ಗಳು ಮತ್ತು ಮೋರಿಗಳಿಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿದ ಜಾಗದಲ್ಲಿ ನೆಲ ಕುಸಿಯುತ್ತಿದೆ. ರಸ್ತೆ ಸಂಚಾರದಿಂದ ಜೀವಕ್ಕೆ ಆಪತ್ತು ಬಂದೊದಗಿದೆ.

    ಇದನ್ನೂ ಓದಿ: ಸೋರಿಯಾಸಿಸ್ ಕಾಯಿಲೆಗೆ ಆಯುರ್ವೇದ ಚಿಕಿತ್ಸೆ; ಪಂಚಕರ್ಮ ಪರಿಣಾಮಕಾರಿ

    ಮೂಲ ಸೌಕರ್ಯಗಳಿಲ್ಲ: ಬಿಬಿಎಂಪಿಗೆ 2008ರಲ್ಲಿ ಸೇರ್ಪಡೆಗೊಂಡ ಈ ಪ್ರದೇಶದಲ್ಲಿ ಜನರ ಪಾಡು ನರಕವಾಗಿದೆ. ಇತ್ತ ಹಳ್ಳಿ ವಾತಾವರಣವೂ ಇಲ್ಲ, ನಗರಕ್ಕೆ ಕಲ್ಪಿಸಬೇಕಾದ ಮೂಲಸೌಕರ್ಯವೂ ಸಿಕ್ಕಿಲ್ಲ. ಸೂಕ್ತ ನಗರ ಯೋಜನೆ ಇಲ್ಲದ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ, ನಕ್ಷೆಯಿಲ್ಲದ ಮನೆಗಳು ಹಾಗೂ ಸುರಕ್ಷತಾ ನಿಯಮಗಳನ್ನು ಅನುಸರಿಸದ ಕಟ್ಟಡಗಳು ಇಲ್ಲಿ ಕಾಣಿಸುತ್ತವೆ.

    ಇದನ್ನೂ ಓದಿ: ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಜೈಲು!

    ರಾಜಕಾಲುವೆಗಳ ಜಂಕ್ಷನ್: ರಾಮಯ್ಯ ಲೇಔಟ್, ಹೆಸರುಘಟ್ಟ, ದಾಸರಹಳ್ಳಿ, ಪೀಣ್ಯ, ಅಯ್ಯಪ್ಪಸ್ವಾಮಿ ದೇವಾಲಯ ಬಡಾವಣೆ, ಕೆಂಪೇಗೌಡನಗರ, ಪೀಣ್ಯ ಕೈಗಾರಿಕಾ ಪ್ರದೇಶ, ನೆಲಗೆದರನಹಳ್ಳಿ, ಚೊಕ್ಕಸಂದ್ರ, ಮಾರುತಿ ಲೇಔಟ್, ಬೆಲ್ಮಾರ್ ಲೇಔಟ್, ವಿದ್ಯಾನಗರದಿಂದ ಬರುವ ನೀರು ರುಕ್ಮಿಣಿನಗರದಲ್ಲಿ ಹಾದುಹೋಗಿರುವ ರಾಜಕಾಲುವೆಗೆ ಸೇರುತ್ತಿದ್ದು, ಇದೊಂದು ‘ಜಂಕ್ಷನ್’ ಮಾದರಿಯಲ್ಲಿದೆ. ಆದರೆ, ಕಾಲುವೆ ಕಿರಿದಾಗಿದ್ದು, ಹೆಚ್ಚಿನ ನೀರು ಹರಿಯಲು ಅನುಕೂಲವಿಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದಿಂದ ಎಚ್ಚೆತ್ತುಕೊಂಡ ಪಾಲಿಕೆ, ಈಗ ರಾಜಕಾಲುವೆ ಅಗಲೀಕರಣಕ್ಕೆ ಕಾರ್ಯಪ್ರವೃತ್ತವಾಗಿದೆ.

    ಇದನ್ನೂ ಓದಿ: ಬಾಯ್​​ಫ್ರೆಂಡ್ ಹುಟ್ಟುಹಬ್ಬಕ್ಕೆ 25 ಲಕ್ಷ ರೂ. ಖರ್ಚು ಮಾಡಿದ ನಯನತಾರಾ

    ಪ್ರವಾಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ರಾಜಕಾಲುವೆ ಕಿರಿದಾಗಿದ್ದರಿಂದ ಸಮಸ್ಯೆ ಉದ್ಭವಿಸಿತ್ತು. ಅದರ ಮರುನಿರ್ವಣ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ ತಡೆಗೋಡೆ ನಿರ್ವಿುಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಸೃಷ್ಟಿಯಾಗದಂತೆ ರಾಜಕಾಲುವೆ ಅಗಲೀಕರಣ ಮತ್ತು ಪರ್ಯಾಯ ಕಾಲುವೆಗಳನ್ನು (ಡೈವರ್ಷನಲ್) ನಿರ್ವಿುಸಲಾಗುವುದು.
    | ಪ್ರಹ್ಲಾದ್, ಪಾಲಿಕೆ ರಾಜಕಾಲುವೆ ವಿಭಾಗದ ಸಿಇ

    ನೆಲಗೆದರನಹಳ್ಳಿಯ ಮುಖ್ಯರಸ್ತೆಯನ್ನು ಎರಡೂ ಕಡೆ ಅಗೆಯಲಾಗಿದ್ದು, 400 ಮೀ. ದೂರದ ಮನೆಗೆ, 3 ಕಿ.ಮೀ. ಬಳಸಿಕೊಂಡು ಬರಬೇಕಿದೆ! ರಸ್ತೆ ಅಗೆದಿದ್ದರಿಂದ ಪ್ರಯಾಣಿಕರೇ ಸಿಗದಂತಾಗಿದೆ.
    | ಮೈಲಾರಪ್ಪ, ಆಟೋ ಚಾಲಕ

    20 ದಿನಗಳ ಹಿಂದೆ ಸುರಿದ ಮಳೆಯಿಂದ ರಾತ್ರೋರಾತ್ರಿ ನಮ್ಮ ಮನೆಗಳಿಗೆ ನೀರು ನುಗ್ಗಿತು. ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು, ಮತ್ತೆ ಜೀವನ ಕಟ್ಟಿಕೊಳ್ಳಲು ವಾರಗಟ್ಟಲೆ ಕಾಲಾವಧಿ ಬೇಕಾಯಿತು. ನಷ್ಟ ಅನುಭವಿಸಿದ್ದಕ್ಕೆ ಪ್ರತಿಯಾಗಿ, ಪಾಲಿಕೆಯಾಗಲಿ- ಸರ್ಕಾರವಾಗಲಿ ಯಾವುದೇ ಪರಿಹಾರ ಕೊಟ್ಟಿಲ್ಲ.
    | ಚಂದ್ರಶೇಖರ್, ಸ್ಥಳೀಯ ನಿವಾಸಿ

    ಐದಾರು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದರೂ ಯಾವುದೇ ಹಾನಿ ಸಂಬಂಧಿಸಿರಲಿಲ್ಲ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ಮಳಿಗೆಗೆ ನೀರು ನುಗ್ಗಿದ್ದು, 1.5 ಲಕ್ಷ ರೂ.ಗಿಂತ ಅಧಿಕ ನಷ್ಟವಾಗಿದೆ. ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು.
    | ತ್ಯಾಗರಾಜು, ಸ್ಥಳೀಯ ವ್ಯಾಪಾರಿ

    ನಮ್ಮ ಕೊರಿಯರ್ ಕಚೇರಿಯಲ್ಲಿದ್ದ ದಾಖಲೆ ಪುಸ್ತಕಗಳು, ರಶೀದಿಗಳು, ಕಂಪ್ಯೂಟರ್, ಲ್ಯಾಪ್​ಟಾಪ್ ಸೇರಿ ಎಲ್ಲವೂ ನೀರಿನಲ್ಲಿ ಒದ್ದೆಯಾಗಿ ಹಾಳಾಗಿದ್ದವು. ಈಗಲೂ ಕೆಲವು ಗ್ರಾಹಕರಿಗೆ ಸಾಮಗ್ರಿಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ.
    | ಅನುಪಮಾ, ಕೊರಿಯರ್ ಕಚೇರಿ

    ರಾಜಕಾಲುವೆ ಪಕ್ಕದ ಮನೆಗಳು ಒತ್ತುವರಿ ಮಾಡಿಕೊಂಡಿದ್ದರಿಂದ, ನೀರು ಹರಿಯದೆ ಮನೆಗಳು ಮತ್ತು ಮಳಿಗೆಗಳಿಗೆ ನೀರು ನುಗ್ಗಿದೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕು. ಜತೆಗೆ, ಪ್ರವಾಹಕ್ಕೆ ಕಾರಣವಾದವರಿಂದಲೇ ಪರಿಹಾರ ಕೊಡಿಸಬೇಕು.
    | ಎಂ.ಪಿ. ಮನೋಹರ್, ಸ್ಥಳೀಯ ನಿವಾಸಿ

    ಕರ್ನಾಟಕ ಬಂದ್: ವಿವಿಧೆಡೆ ಬೆಳಗ್ಗಿನ ಸನ್ನಿವೇಶ ಹೀಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts