More

    ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಜೈಲು!

    ನವದೆಹಲಿ: ವಾಹನ ಚಾಲಕರು ಪಥ ತಿಳಿಯಲು (ನ್ಯಾವಿಗೇಷನ್) ಮಾತ್ರವೇ ಮೊಬೈಲ್ ಫೋನ್​ಗಳನ್ನು ಬಳಸ ಬಹುದು ಎಂದು ರಸ್ತೆ ಸಂಚಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಚಾಲನಾ ಪರವಾನಗಿ (ಡಿಎಲ್), ಪರ್ವಿುಟ್​ಗಳು, ನೋಂದಣಿ (ಆರ್​ಸಿ), ವಿಮೆ ಮತ್ತು ಫಿಟ್​ನೆಸ್ ಸರ್ಟಿಫಿಕೆಟ್ ಮುಂತಾದ ಕಾಗದ ಪತ್ರಗಳ ಡಿಜಿಟಲ್ ದಾಖಲೆಗಳ ಬಳಕೆಗೂ ಸಚಿವಾಲಯ ಅನುಮತಿ ನೀಡಿದೆ. ದಾಖಲೆಪತ್ರಗಳ ಸುಗಮ ಪರಿಶೀಲನೆ ಮತ್ತು ನಿಯಮಗಳ ಉಲ್ಲಂಘನೆ ದಾಖಲಾತಿಗೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಹಾದಿ ಸುಗಮಗೊಳಿಸುವಲ್ಲಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

    ನ್ಯಾವಿಗೇಷನ್​ಗಾಗಿ ಮಾತ್ರ ಮೊಬೈಲ್ ಬಳಕೆ

    ಚಾಲಕರ ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿ ಪಥದ ನ್ಯಾವಿಗೇಷನ್​ಗಾಗಿ ವಾಹನದ ಡ್ಯಾಷ್​ಬೋರ್ಡ್ ಮೇಲೆ ಮೊಬೈಲ್ ಫೋನ್ ಇಟ್ಟಿರಬೇಕು. ವಾಹನ ಚಾಲನೆ ವೇಳೆ ಮೆಸೇಜ್ ಅಥವಾ ಕರೆ ಮಾಡುವಂತಿಲ್ಲ. ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್

    ಫೋನ್​ನಲ್ಲಿ ಟೆಕ್ಸ್ಟ್​ ಮಾಡುವಾಗ ಅಪಘಾತದ ಪ್ರಮಾಣ ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎನ್ನುವುದು ಜಾಗತಿಕ ಅಧ್ಯಯನದಿಂದ ತಿಳಿದು ಬಂದಿದೆ. ವಾಹನ ಚಲಾಯಿಸುವಾಗ ಟೆಕ್ಸ್ಟ್ ಮಾಡುವುದು ಅತ್ಯಂತ ಅಪಾಯಕಾರಿ.

    ತಂತ್ರಜ್ಞಾನದ ಬಳಕೆಗೆ ಆದ್ಯತೆ

    ವಾಹನ ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಅಧಿಕವಾಗಿ ಅಳವಡಿಸಲು ಸರ್ಕಾರ ಮುಂದಾಗಿದೆ. ಸಂಚಾರ ನಿಯಮಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಇದು ನೆರವಾಗುತ್ತದೆ. ಚಾಲಕರು ಮತ್ತು ಇತರ ನಾಗರಿಕರಿಗೆ ಕಿರಿಕಿರಿ ಯಾಗುವುದನ್ನು ಕೂಡ ಅದು ತಪ್ಪಿಸುತ್ತದೆ ಎಂಬುದು ಸಚಿವಾಲಯದ ವಿವರಣೆ. ಇದನ್ನೂ ಓದಿ: VIDEO| ದೃಷ್ಟಿ ತೆಗೆಯುವ ನೆಪದಲ್ಲಿ ಬಂದ ಮಂಗಳಮುಖಿಯರ ಗ್ಯಾಂಗ್​ ಮಾಡಬಾರದ್ದನ್ನು ಮಾಡಿ ಎಸ್ಕೇಪ್​!

    ಭ್ರಷ್ಟಾಚಾರಕ್ಕೆ ತಡೆ
    1. ಎಲ್ಲ ಕ್ರಮಗಳ ಕುರಿತು ಡಿಜಿಟಲ್ ದಾಖಲಾತಿ ಯಿದ್ದರೆ ಭ್ರಷ್ಟಾಚಾರ ನಿಯಂತ್ರಿಸಲೂ ಸಾಧ್ಯವಾಗುತ್ತದೆ ಎನ್ನುವುದು ಕೇಂದ್ರ ರಸ್ತೆ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ.
    2. ಅಕ್ಟೋಬರ್ 1 ರಿಂದ ದೇಶದಾದ್ಯಂತ ಏಕ ರೂಪದ ಡಿಎಲ್ ಮತ್ತು ಆರ್​ಸಿ ನೀಡಲಾಗುತ್ತದೆ.
    3. ಹೊಸ ಡಿಎಲ್​ನಲ್ಲಿ ಸುಧಾರಿತ ಮೈಕ್ರೋಚಿಪ್ ಇರುತ್ತದೆ. ಅದರಲ್ಲಿ ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್​ಎಫ್​ಸಿ) ಫೀಚರ್​ಗಳು ಇರುತ್ತವೆ.
    4. ಹೊಸ ಬದಲಾವಣೆಗಳು, ದಾಖಲೆಗಳನ್ನು ಕೇಂದ್ರೀಕೃತ ಆನ್​ಲೈನ್ ಡೇಟಾಬೇಸ್​ನಲ್ಲಿ ಹತ್ತು ವರ್ಷ ಕಾಲ ಉಳಿಸಿಕೊಳ್ಳಲು ನೆರವಾಗುತ್ತದೆ.
    5 ಸಾವಿರ ರೂಪಾಯಿ ದಂಡ

    ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದನ್ನು ಅತ್ಯಂತ ಅಪಾಯಕಾರಿ ವಿಭಾಗಕ್ಕೆ ಸೇರಿಸಲಾಗಿದೆ. ಈ ನಿಯಮ ಉಲ್ಲಂಘನೆಗೆ 5,000 ರೂಪಾಯಿ ವರೆಗೆ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ನಿಗದಿಪಡಿಸಿದೆ. ಈ ಎರಡನ್ನೂ ಏಕಕಾಲಕ್ಕೆ ವಿಧಿಸಲೂ ಅವಕಾಶವಿದೆ.

    ಪೋರ್ಟಲ್​ನಲ್ಲಿ ದಾಖಲು

    ಚಾಲಕರ ವರ್ತನೆ ಮೇಲೆ ನಿಗಾ ಇರಿಸುವ ಉದ್ದೇಶದಿಂದ, ಡ್ರೖೆವಿಂಗ್ ಲೈಸೆನ್ಸ್ ಅನರ್ಹಗೊಂಡ ಅಥವಾ ಅನರ್ಹತೆಯನ್ನು ವಾಪಸ್ ಪಡೆದ ದಿನಾಂಕಗಳನ್ನು ವೆಬ್ ಪೋರ್ಟಲ್​ನಲ್ಲಿ ದಾಖಲಿಸಬೇಕು. ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಪರಿಶೀಲಿಸಲಾದ ದಾಖಲೆಪತ್ರಗಳ ಭೌತಿಕ ಪ್ರತಿ ಪ್ರಸ್ತುತಪಡಿಸುವಂತೆ ಅಧಿಕಾರಿಗಳು ಒತ್ತಾಯಿಸಬಾರದು ಎಂದೂ ಹೊಸ ನಿಯಮಾವಳಿ ತಿಳಿಸಿದೆ. ಸಂಚಾರ ನಿಯಮ ಉಲ್ಲಂಘನೆಯ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಅಧಿಕ ದಂಡ ವಿಧಿಸಲು ರಾಜ್ಯಗಳಿಗೆ ಅವಕಾಶ ನೀಡುವ ನಿಯಮವನ್ನೂ ಈ ಕಾನೂನಿನಲ್ಲಿ ಅಳವಡಿಸಲಾಗಿದೆ. ಚಾಲಕ ಅಥವಾ ನಿರ್ವಾಹಕರು ಡಿಎಲ್, ಆರ್​ಸಿ, ವಿಮೆ, ಫಿಟ್​ನೆಸ್ ಮತ್ತು ಪದವಿಪೂರ್ವ ಸರ್ಟಿಫಿಕೆಟ್ ಮತ್ತಿತರ ಸಂಬಂಧಿತ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲೇ ಆಗಲಿ, ಭೌತಿಕವಾಗಿಯೇ ಆಗಲಿ ಹಾಜರು ಪಡಿಸಬಹುದು. ಡಿಜಿಟಲ್ ರೂಪದ ದಾಖಲೆಪತ್ರಗಳು ಸರಿಯಾಗಿವೆ ಹಾಗೂ ಮಾನ್ಯವಾಗಿವೆ ಎಂದು ತಿಳಿದ ನಂತರ ಪರಿಶೀಲನೆಗಾಗಿ ಅವುಗಳ ಭೌತಿಕ ಪ್ರತಿಗಳನ್ನು ಹಾಜರುಪಡಿಸುವಂತೆ ಒತ್ತಾಯಿಸಬಾರದು. ವಾಹನಗಳ ಪರಿಶೀಲನೆ ನಡೆಸಿದ ಅಧಿಕಾರಿ, ಮುದ್ರೆ ಹಾಗೂ ತನ್ನ ಗುರುತನ್ನು ಪೋರ್ಟಲ್​ನಲ್ಲಿ ದಾಖಲಿಸಬೇಕು. ವಾಹನಗಳನ್ನು ಪದೇ ಪದೆ ಪರಿಶೀಲನೆ ಮಾಡುವುದನ್ನು ತಡೆಯಲು ಅದು ಸಹಕಾರಿಯಾಗಲಿದೆ. ಚಾಲಕರಿಗೂ ಕಿರಿಕಿರಿ ತಪ್ಪುತ್ತದೆ.

    ಲಾಕ್​ಡೌನ್​ನಲ್ಲಿ ಕಾದಂಬರಿ ಬರೆದ ಬಾಲಕ.. ‘ಅರ್ಧ ಜೀವನ- ಪೂರ್ತಿ ಲಾಕ್​ಡೌನ್​ನಲ್ಲಿ..’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts