More

    ಖ್ಯಾತ ವಿಮರ್ಶಕ ಡಾ.ಜಿ.ಎಸ್​.ಆಮೂರ ಅಸ್ತಂಗತ

    ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರದ ಖ್ಯಾತ ವಿಮರ್ಶಕ ಡಾ ಜಿ.ಎಸ್. ಆಮೂರ ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಸ್ವಗೃಹದಲ್ಲೇ ಅಸ್ತಂಗತರಾದರು ಎಂದು ಇವರ ಮಗ ರವಿ ಆಮೂರ ತಿಳಿಸಿದ್ದಾರೆ.

    ಗುರುರಾಜ ಶ್ಯಾಮಾಚಾರ ಆಮೂರ ಎಂಬುದು ಇವರ ಪೂರ್ಣ ಹೆಸರು. ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿ ಮೂಲದ ಆಮೂರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಔರಂಗಾಬಾದ್ ನ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು ನಿವೃತ್ತಿ ನಂತರ ಕನ್ನಡ, ಇಂಗ್ಲಿಷ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕೊಡುಗೆ ಪರಿಗಣಿಸಿ ಕೇಂದ್ರ ಸಾಹ ಅಕಾಡೆಮಿ, ಪಂಪ, ಮಾಸ್ತಿ, ನೃಪತುಂಗ, ರಾಜ್ಯೋತ್ಸವ ಪ್ರಶಸ್ತಿ ದೊರೆತಿವೆ.

    ಇದನ್ನೂ ಓದಿ: ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!

    ಆಮೂರರು 1925ರ ಮೇ 8ರಂದು ಜನಿಸಿದರು. ತಂದೆ ಶ್ಯಾಮಾಚಾರ್ಯ. ಶಿರಹಟ್ಟಿ ತಾಲೂಕಿನ ಸೊರಣಗಿಯಲ್ಲಿ ಪ್ರಾಥಾಮಿಕ ಶಾಲಾ ಶಿಕ್ಷಕರು. ತಾಯಿ ಗಂಗೂಬಾಯಿ. ಆಮೂರರಿಗೆ ಇಬ್ಬರು ಸಹೋದರಿಯರು ಮತ್ತು ಇಬ್ಬರು ಸಹೋದರರು. ಇವರೇ ಹಿರಿಯರು. ಇವರು ಸೂರಣಗಿಕರ್ಜಗಿ ಹಾಗೂ ಹಾವೇರಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ, 1943ರಲ್ಲಿ ಮುಂಬಯಿನಲ್ಲಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. 1947ರಲ್ಲಿ, ಬಿ.ಎ. ಆನರ್ಸ್ ಇಂಗ್ಲಿಷ್  ವಿಷಯದಲ್ಲಿ ಮಾಡಿ ಮುಗಿಸಿದರು. 1949ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ, ಎಂಎ ಪದವಿಗಳಿಸಿ, ಗದಗದ, ತೋಂಟದಾರ್ಯ ಕಾಲೇಜಿನಲ್ಲಿ, ಇಂಗ್ಲಿಷ್ ಅಧ್ಯಾಪಕರಾಗಿ ಸೇರಿದರು. “ದ ಕಾನ್ಸೆಪ್ಟ್ ಆಫ್ ಕಾಮಿಡಿ” ಎಂಬ ವಿಷಯದಲ್ಲಿ ಮಹಾಪ್ರಬಂಧ ರಚಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ 1961ರಲ್ಲಿ ಡಾಕ್ಟಾರೇಟ್ ಕೊಟ್ಟು ಗೌರವಿಸಿತು. 1962ರಲ್ಲಿ ಫುಲ್​ಬ್ರೈಟ್ ಸ್ಕಾಲರ್​ಶಿಪ್ ಗಳಿಸಿ ಅಮೆರಿಕದ ಮೇಲ್ ಹಾಗೂ ಕ್ಯಾಲಿಫೋರ್ನಿಯ ವಿವಿಗಳಲ್ಲಿ ಟಿ.ಎಸ್.ಎಲಿಯಟ್ ಮೇಲೆ, ಪೋಸ್ಟ್ ಡಾಕ್ಟೊರಲ್ ಸಂಶೋಧನೆಯನ್ನು ಪೂರ್ಣಗೊಳಿಸಿದರು. 1985ರಲ್ಲಿ, ಔರಂಗಬಾದ್ ವಿವಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ವಿಭಾಗ ಪ್ರಮುಖರೆಂದು ನೇಮಕಗೊಂಡರು. 1988ರಲ್ಲಿ ನಿವೃತ್ತರಾಗುವವರೆಗೂ ಔರಂಗಾಬಾದ್​ನಲ್ಲಿದ್ದರು.

    ಇದನ್ನೂ ಓದಿ: ಇಂದು ಕೊಹ್ಲಿ ವರ್ಸಸ್ ರೋಹಿತ್ ಫೈಟ್ : ದುಬೈನಲ್ಲಿ ಆರ್​ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು

    ಆಧುನಿಕ ಕನ್ನಡಸಾಹಿತ್ಯ ವಿಮರ್ಶಕರಲ್ಲಿ ಅತಿ ಅಗ್ರಮಾನ್ಯರಲ್ಲೊಬ್ಬರು. ಪಂಪ ಪ್ರಶಸ್ತಿ ವಿಜೇತರಾದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಪ್ರಾಕಾರಗಳಲ್ಲಿ ಪಂಡಿತರಾಗಿದ್ದು, ಕನ್ನಡ ಸಾಹಿತ್ಯವನ್ನು ಆಂಗ್ಲಭಾಷಾ ಓದುಗರಿಗೆ ಪರಿಚಯಿಸಿದ್ದಾರೆ. ನಾಡಿನಾದ್ಯಂತ ಅಪಾರ ಶಿಷ್ಯರನ್ನು ಗಳಿಸಿರುವ ಇವರು, ವಿಮರ್ಶೆಯ ಜತೆಗೆ, ಸತತ ಓದು, ಬರವಣಿಗೆ, ತಮ್ಮ ಅಧ್ಯಾಪನ ಕಾರ್ಯ, ಆಡಳಿತ ಕಾರ್ಯಗಳೊಂದಿಗೆ ಎಲ್ಲವನ್ನು ಸರಿತೂಗಿಸಿಕೊಂಡು ತಾವೂ ಬೆಳೆದು, ತಮ್ಮ ಅಪಾರ ಶಿಷ್ಯವೃಂದಕ್ಕೆ ಮಾರ್ಗದರ್ಶನ ಮಾಡಿದವರು.

    ನೆಲಗದರನಹಳ್ಳಿಯಲ್ಲಿ ಬದುಕು ನರಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts