More

    ಗುರುತಿನ ಚೀಟಿ, ವೋಟರ್ ಸ್ಲಿಪ್​ ಅಸಲಿ ಮತದಾರನ ಕೈಯಲ್ಲಿದ್ದರೂ ಅದಾಗಲೇ ಆತನ ಮತ ಚಲಾವಣೆ ಆಗಿತ್ತು!

    ಬೆಂಗಳೂರು: ಈ ಚುನಾವಣೆಯಲ್ಲಿ ಬಹಳಷ್ಟು ಮಂದಿಯ ಬಳಿ ವೋಟರ್ ಐಡಿ ಇದ್ದರೂ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಡಿಲೀಟ್ ಆಗಿತ್ತು. ಹೀಗಾಗಿ ಎಷ್ಟೋ ಮಂದಿ ವೋಟರ್​ ಐಡಿ ಇದ್ದರೂ ಮತ ಚಲಾವಣೆಯಿಂದ ವಂಚಿತರಾಗಿದ್ದರು. ಆದರೆ ಇಲ್ಲೊಬ್ಬರ ಬಳಿ ವೋಟರ್ ಐಡಿ, ವೋಟರ್​ ಸ್ಲಿಪ್ ಕೈಯಲ್ಲಿದ್ದರೂ ಅದಾಗಲೇ ಅವರ ಮತ ಇನ್ಯಾರೋ ಚಲಾಯಿಸಿದ್ದರು.

    ಇದನ್ನೂ ಓದಿ: ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಸಯ್ಯದ್ ಪಹಾದ್ ಮತ ಚಲಾವಣೆಯಿಂದ ವಂಚಿತನಾದ ಮತದಾರ. ವಾರ್ಡ್ 48ರ 144ನೇ ಬೂತ್​ನ ಕ್ರಮಸಂಖ್ಯೆ 885ರ ಮತದಾರ ಆಗಿರುವ ಇವರು, ತನಗೆ ಮತ ಚಲಾಯಿಸಲು ಅವಕಾಶ ಸಿಗದ್ದಕ್ಕೆ ಮತದಾನ ಕೇಂದ್ರದಲ್ಲಿ ಸಯ್ಯದ್ ಆಕ್ರೋಶ ವ್ಯಕ್ತಪಡಿಸಿದ್ದೂ ನಡೆಯಿತು.

    ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

    ಸಯ್ಯದ್ ಪಹಾದ್ ತಮ್ಮ ವೋಟರ್​ ಐಡಿ ಹಾಗೂ ವೋಟರ್​ ಸ್ಲಿಪ್​​ನೊಂದಿಗೆ ಮತದಾನ ಮಾಡಲು ಬಂದಿದ್ದಾಗ, ನಿಮ್ಮ ವೋಟ್ ಈಗಾಗಲೇ ಚಲಾವಣೆ ಆಗಿದೆ ಎಂದು ಅಧಿಕಾರಿಗಳು ವಾಪಸ್ ಕಳಿಸಿದರು. ನನ್ನ ವೋಟರ್ ಐಡಿ, ವೋಟರ್ ಸ್ಲಿಪ್ ನನ್ನ ಬಳಿಯೇ ಇದ್ದರೂ ನನ್ನ ಹೆಸರಿನಲ್ಲಿ ಈಗಾಗಲೇ ಮತ ಚಲಾವಣೆ ಆಗಿದೆ, ಇವರು ಯಾವ ರೀತಿ ಪರಿಶೀಲನೆ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದ ಸಯ್ಯದ್, ನನ್ನ ಓಟ್ ನನಗೆ ಬೇಕು, ಇದು ನನ್ನ ಹಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಯಾಕೆ ಎಲ್ಲರೂ ಮತ ಚಲಾಯಿಸಬೇಕು?; ಮತದಾನ ಕಡಿಮೆಯಾದಷ್ಟೂ ಆಗುವ ಅಪಾಯ ಏನು?

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts