More

    ಶಿವನ ಪಾತ್ರಧಾರಿಯ ಕೊರಳಲ್ಲಿ ಜೀವಂತ ನಾಗರಹಾವು!; ಬೆರಗಾಗಿ ನಾಟಕ ನೋಡಿದ ಪ್ರೇಕ್ಷಕರು..

    ಬೆಳಗಾವಿ: ನಾಗರಹಾವನ್ನು ಸುಮ್ಮನೆ ದೂರದಿಂದ ನೋಡಿದರೂ ಒಮ್ಮೆ ಮೈ ಜುಮ್ ಅನಿಸುತ್ತದೆ. ಅಂಥದ್ದರಲ್ಲಿ ಕಣ್ಣೆದುರೇ ಇರುವ ವ್ಯಕ್ತಿಯ ಮೈಮೇಲೆ ನಾಗರಹಾವು ಹರಿದಾಡಿದರೆ ಹೇಗಿರಬೇಡ|?
    – ಇಂಥದ್ದೊಂದು ಅಪರೂಪದ ದೃಶ್ಯಾವಳಿ ಬೆಳಗಾವಿ ಜಿಲ್ಲೆಯಲ್ಲಿ ಕಂಡುಬಂದಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಇಂಚಗೇರಿ ಮಠದ ಸಪ್ತಾಹ ಪ್ರಯುಕ್ತ ನಿನ್ನೆ ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನದಲ್ಲಿ ಶಿವನ ಪಾತ್ರಧಾರಿಯ ಕೊರಳಲ್ಲಿ ನಿಜವಾದ ನಾಗರಹಾವು ಕಂಡುಬಂದಿತ್ತು.

    ಶಿವನ ಪಾತ್ರವನ್ನು ಮಾಡಿದ್ದ ಚರಂತಯ್ಯ ಕಾಜಿಬೀಳಗಿ ಎಂಬವರು ಹಲ್ಲು ತೆಗೆದ ನಾಗರಹಾವನ್ನು ಕೊರಳಲ್ಲಿ ಹಾಕಿಕೊಂಡು ಬಂದು ಅಭಿನಯಿಸಿದ್ದಾರೆ. ಶಿವನ ಪಾತ್ರಧಾರಿಯಲ್ಲಿ ಜೀವಂತ ನಾಗರಹಾವನ್ನು ಕಂಡ ಜನರು ಒಮ್ಮೆ ದಿಗ್ಭ್ರಮೆಗೊಂಡಿದ್ದು, ಬಳಿಕ ಬೆರಗಾಗಿ ನಾಟಕವನ್ನು ನೋಡಿದರು.

    ಬಸವೇಶ್ವರ ನಾಟಕದಲ್ಲಿ ಶಿವನ ಪಾತ್ರ ಮಾಡುತ್ತಿರುವ ಚರಂತಯ್ಯ ಕಳೆದ 30 ವರ್ಷಗಳಿಂದ ನಾಟಕರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ನಿನ್ನೆ ನಾಟಕದಲ್ಲಿ ಅಭಿನಯಿಸುವಾಗ ಕೊರಳಲ್ಲಿದ್ದ ನಾಗರಹಾವು ಮೈಮೇಲೆ ಸರಿದಾಡುತ್ತಿರುವುದು ಪ್ರೇಕ್ಷಕರಿಗೆ ರೋಚಕ ಅನುಭವ ನೀಡಿತ್ತು.

    ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡುತ್ತೇನೆ… ಶುರುವಾಯ್ತು ಉಪ್ಪಿ ‘UI’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts