More

    ನೀವು ಆರ್​ಸಿಬಿ ಫ್ಯಾನ್​ ಆಗಿದ್ದೇ ಹೌದಾದರೆ ಇವರ್ಯಾರು ಎಂದು ಗುರುತಿಸಿ; ಅಭಿಮಾನಿಗಳಿಗೆ ಆರ್​ಸಿಬಿ ಸವಾಲ್​

    ಬೆಂಗಳೂರು: ಐಪಿಎಲ್​ ಮುಗಿದಿದೆ, ಆದರೆ ಅದರ ಅಭಿಮಾನಿಗಳು ಮಾತ್ರ ಅದರ ಗುಂಗಿನಿಂದ ಹೊರಬಂದಿಲ್ಲ. ಅದರಲ್ಲೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್​ಸಿಬಿ ಅಭಿಮಾನಿಗಳಂತೂ ಈಗಾಗಲೇ ಮುಂದಿನ ಐಪಿಎಲ್​ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ, ಹಾಗೆಯೇ ಮುಗಿದಿರುವ ಐಪಿಎಲ್​ನಲ್ಲಿ ಆರ್​ಸಿಬಿ ಎಲ್ಲಿ ಎಡವಿತು, ಹೇಗೆ ಆಡಬೇಕಿತ್ತು ಎನ್ನುವುದರ ವಿಮರ್ಶೆಯನ್ನು ಮುಂದುವರಿಸಿದ್ದಾರೆ.

    ಇದನ್ನೂ ಓದಿ: ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ

    ನೀವು ಒಂದು ವೇಳೆ ಅರ್​ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದರೆ ನಿಮಗೊಂದು ಸವಾಲಿದೆ. ಹಾಗೆಂದು ಈ ಸವಾಲನ್ನು ನಾವು ಕೊಡುತ್ತಿದ್ದೇವೆ ಎಂದುಕೊಳ್ಳಬೇಡಿ. ಈ ಸವಾಲನ್ನು ಕೊಟ್ಟಿರುವುದು ಕೂಡ ಆರ್​ಸಿಬಿ ತಂಡವೇ.

    ಆರ್​ಸಿಬಿಯ ನಿಮ್ಮಿಷ್ಟದ ಆಟಗಾರರೊಬ್ಬರನ್ನು ಕೇವಲ ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಹಿಂದೆ ಆರ್​ಸಿಬಿಯ ಕೆಂಪು ಬಣ್ಣದ ಬ್ಯಾಕ್​ಗ್ರೌಂಡ್​ ಕೊಡಲಾಗಿದೆ. ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿರುವ ಆಟಗಾರ ನಿಂತಿರುವ ಭಂಗಿ ನೋಡಿಯೇ ನೀವು ಅವರನ್ನು ಕಂಡು ಹಿಡಿಯುತ್ತೀರಿ ಎನ್ನುವ ನಂಬಿಕೆ ತಂಡಕ್ಕಿದೆ. ಯಾರೆಂದು ಕಂಡುಹಿಡಿಯಿರಿ ಎಂದು ಟ್ವಿಟ್ಟರ್​ನಲ್ಲಿ ಕೇಳಿದೆ.

    ಇದನ್ನೂ ಓದಿ: ಮಾಸ್ಕ್​ ಹಾಕದಿದ್ದರೆ 500 ರೂ. ಅಲ್ಲ, 2 ಸಾವಿರ ರೂ. ಫೈನ್​!

    ಆರ್​ಸಿಬಿ ಈ ಸವಾಲಿನ ಟ್ವೀಟ್​ ಮಾಡಿ ಅರ್ಧ ಗಂಟೆಯೊಳಗೆ ಸಾವಿರಾರು ಜನರು ಆಟಗಾರರನನ್ನು ಗೆಸ್​ ಮಾಡಿ ಕಮೆಂಟ್​ ಮಾಡಿದ್ದಾರೆ. ಒಂದು ವೇಳೆ ನಿಮಗೂ ಅದು ಯಾರೆಂದು ತಿಳಿದರೆ ನೀವೂ ಕಮೆಂಟ್​ ಮಾಡಿ ಬನ್ನಿ. (ಏಜೆನ್ಸೀಸ್​)

    ಬಿಹಾರದ ಶಾಸಕರಿಗೆ ರಾಷ್ಟ್ರಗೀತೆಯೇ ಬರೋದಿಲ್ಲ; ವಿಡಿಯೋ ಮೂಲಕ ಮರ್ಯಾದೆ ಕಳೆದುಕೊಂಡ ಶಾಸಕ

    ಮುಂಬೈನಲ್ಲಿ ಶಿವಸೇನೆಗೆ ಉಲ್ಟಾ ಹೊಡೆದ ಕಾಂಗ್ರೆಸ್​; ಸ್ವತಂತ್ರವಾಗಿ ಸ್ಪರ್ಧಿಸೋಕೆ ಕಾಂಗ್ರೆಸ್​ ರೆಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts