More

    ಮನಿಮೈಂಡೆಡ್​ ಜನಪ್ರತಿನಿಧಿಗಳಿಗೆ ಇದು ಶಾಕಿಂಗ್ ಸುದ್ದಿ: ಸಂಚಲನ ಮೂಡಿಸುವಂತಿದೆ ಆರ್​ಬಿಐನ ಈ ಕ್ರಮ!

    ನವದೆಹಲಿ: ಇದು ಹಣಕಾಸು ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವ ಜನಪ್ರತಿನಿಧಿಗಳಿಗಂತೂ ಶಾಕಿಂಗ್ ಸುದ್ದಿ. ಭಾರತೀಯ ರಿಸರ್ವ್​ ಬ್ಯಾಂಕ್ ಕೈಗೊಂಡಿರುವ ಹೊಸ ಕ್ರಮ ಕೆಲವು ಹಣಕಾಸು ಸಂಸ್ಥೆಗಳ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ತರಲಿದ್ದರೆ, ಅಂಥ ಸಂಸ್ಥೆಗಳ ಚುಕ್ಕಾಣಿ ಹಿಡಿದು ಲಾಭ ಮಾಡಿಕೊಳ್ಳಲು ಅಥವಾ ಭ್ರಷ್ಟಾಚಾರ ನಡೆಸಲು ಹವಣಿಸುವ ಜನಪ್ರತಿನಿಧಿಗಳಿಗೆ ಇದು ದೊಡ್ಡ ತಡೆಯನ್ನೇ ಒಡ್ಡಲಿದೆ.

    ಆರ್​ಬಿಐನ ಈ ಕ್ರಮದ ಪರಿಣಾಮವಾಗಿ ಇನ್ನು ಪ್ರಾಥಮಿಕ ಪಟ್ಟಣ ಸಹಕಾರಿ ಬ್ಯಾಂಕ್​ಗಳಲ್ಲಿ ಯಾರ್ಯಾರೋ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾಯಂ ನಿರ್ದೇಶಕರಾಗುವಂತಿಲ್ಲ. ಇಂಥ ಕೋಆಪರೇಟಿವ್​ ಬ್ಯಾಂಕ್​ಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗುವವರಿಗೆ ವಿದ್ಯಾರ್ಹತೆಯನ್ನೂ ಸೂಚಿಸಿರುವ ಆರ್​ಬಿಐ, ಸಂಸದ-ಶಾಸಕ ಹಾಗೂ ನಗರಸಂಸ್ಥೆಗಳ ಜನಪ್ರತಿನಿಧಿಗಳು ಇವುಗಳಲ್ಲಿ ಎಂಡಿ ಆಗುವ ಹಾಗಿಲ್ಲ ಎಂದು ಹೇಳಿದೆ.

    ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

    ಅಲ್ಲದೆ ಇಂಥ ಹಣಕಾಸು ಸಂಸ್ಥೆಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ, ಕಾಯಂ ನಿರ್ದೇಶಕ ಆಗುವವರು ಸ್ನಾತಕೋತ್ತರ ಪದವಿ ಅಥವಾ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು ಎಂದು ಹೇಳಿದೆ. ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಿಚ್ಛಿಸುವವರು ಚಾರ್ಟರ್ಡ್​​/ಕಾಸ್ಟ್ ಅಕೌಂಟೆಂಟ್​, ಎಂಬಿಎ ಫೈನಾನ್ಸ್​ ಇಲ್ಲವೇ ಬ್ಯಾಂಕಿಂಗ್ ಅಥವಾ ಕೋ-ಆಪರೇಟಿವ್​ ಬಿಸಿನೆಸ್​ ಮ್ಯಾನೇಜ್​ಮೆಂಟ್​ಗೆ ಸಂಬಂಧಿಸಿದಂತೆ ಡಿಪ್ಲೊಮಾ ಮಾಡಿರಬೇಕು. ಮಾತ್ರವಲ್ಲ, ಅಂಥವರು 35 ವರ್ಷಕ್ಕೆ ಚಿಕ್ಕವರಾಗಿರಬಾರದು ಹಾಗೂ 70 ವರ್ಷ ಮೇಲ್ಪಟ್ಟವರಾಗಿರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಹೀಗೆ ಎಂಡಿ, ಕಾಯಂ ಎಂಡಿ ಆಗಿ ನೇಮಕಗೊಂಡವರು ಆ ಹುದ್ದೆಗಳಲ್ಲಿ ಸತತ 15 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಮುಂದುವರಿಯಬಾರದು. ಒಂದು ವೇಳೆ ಮುಂದುವರಿಸಲೇಬೇಕು ಎಂದರೆ 3 ವರ್ಷಗಳ ಬಿಡುವಿನ ಬಳಿಕ ಮುಂದುವರಿಸಬಹುದು ಎಂಬುದು ಸೇರಿದಂತೆ ಇನ್ನೂ ಹಲವಾರು ನಿಯಮಗಳನ್ನು ಆರ್​ಬಿಐ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. (ಏಜೆನ್ಸೀಸ್)

    ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

    ಮಹಿಳಾ ಪೊಲೀಸರಿಗೇ ಲೈಂಗಿಕ ಕಿರುಕುಳ ಕೊಟ್ಟ; ಮಾಸ್ಕ್ ಹಾಕಿಲ್ಲ ಎಂದು ತಡೆದಿದ್ದಕ್ಕೆ ಪೀಡಿಸಿದ…

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts