More

    ಎನ್‌ಕೆಜಿಎಸ್‌ಬಿ ಕೋ ಆಪರೇಟೀವ್ ಬ್ಯಾಂಕ್ ಕಾರ್ಪೋರೇಟ್ ಕಚೇರಿಗೆ ಭೂಮಿ ಪೂಜೆ

    ಮುಂಬಯಿ:
    ದೇಶದಲ್ಲಿ 106 ವರ್ಷಗಳ ಸುಧೀರ್ಘ ಇತಿಹಾಸವನ್ನು ಹೊಂದಿರುವ ಎನ್‌ಕೆಜಿಎಸ್‌ಬಿ ಕೋ ಆಪರೇಟೀವ್ ಬ್ಯಾಂಕ್‌ನ ನೂತನ ಕಾರ್ಪೋರೇಟ್ ಆಫೀಸ್‌ಗೆ ಮುಂಬಯಿಯ ಅಂದೇರಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
    ಕವಲಿ ಮಠದ ಪೀಠಾಧೀಶ ಎಚ್.ಎಂ.ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
    ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಹಿಮಾಂಗೀ ನಾಡಕರ್ಣಿ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್, ಮಧ್ಯ ಪ್ರದೇಶದಲ್ಲಿ 104 ಶಾಖೆಗಳನ್ನು ಹೊಂದಿರುವ ಎನ್‌ಕೆಜಿಎಸ್‌ಬಿ ಕೋ ಆಪರೇಟೀವ್ ಬ್ಯಾಂಕ್ ಹೊಸ ಕಾರ್ಪೋರೆಟ್ ಕಚೇರಿಗಾಗಿ ಭೂಮಿ ಪೂಜೆ ಮಾಡುತ್ತಿರುವುದು ಸಂತಸದ ಕ್ಷಣವಾಗಿದೆ ಎಂದರು. ಗ್ರಾಹಕರಿಗಾಗಿ ಬ್ಯಾಂಕ್ ತನ್ನ ಸೇವೆಯನ್ನು ಪ್ರಾಮಾಣಿಕವಾಗಿ ಬದ್ಧತೆಯಿಂದ ಮುಂದುವರಿಸಲಿದೆ ಎಂದರು. ಬ್ಯಾಂಕ್ ಉಪಾಧ್ಯಕ್ಷ ಸಂತೋಷ್ ವರ್ತೆ, ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂದರ್ಭದಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts