More

    ಮಾರ್ಗದಲ್ಲಿ ಸಂಚರಿಸದ ಬಸ್​ಗಳ ವಿರುದ್ಧ ಕ್ರಮ ಕೈಗೊಳ್ಳಿ

    ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ | ಉಡುಪಿ ಆರ್​ಟಿಒ ಕಚೇರಿಗೆ ಭೇಟಿ

    ವಿಜಯವಾಣಿ ಸುದ್ದಿಜಾಲ ಉಡುಪಿ
    ನಿಗದಿತ ರೂಟ್​ ಪರ್ಮಿಟ್​ ಹೊಂದಿರುವ ಬಸ್​ಗಳು ಆ ಮಾರ್ಗದಲ್ಲಿ ಸಂಚರಿಸದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಂಬಾಗಿಲು, ಗುಂಡಿಬೈಲ್​, ಕಲ್ಸಂಕ ಮಾರ್ಗದ ಪರ್ಮಿಟ್​ ಪಡೆದ ಬಸ್​ಗಳು ಸಂಚರಿಸುತ್ತಿಲ್ಲ. ಅಂತಹ ಬಸ್​ಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಾರಿಗೆ ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.

    ಉಡುಪಿ ಆರ್​ಟಿಒ ಕಚೇರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದರು.

    ಕ್ರಮ ಕೈಗೊಳ್ಳಿ

    ಆರ್​ಟಿಒ ಕಚೇರಿಯಲ್ಲಿ ಡೆವಿಂಗ್​ ಲೈಸೆನ್ಸ್​ ಹಾಗೂ ಆರ್​ಸಿ ಸ್ಮಾರ್ಟ್​ ಕಾರ್ಡ್​ ವಿತರಣೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹಿಂದಿನ ಪುಸ್ತಕ ಆರ್​ಸಿ ಹಾಗೂ ಡೆವಿಂಗ್​ ಲೈಸನ್ಸ್​ ನವೀಕರಣಕ್ಕಾಗಿ ಬೆಂಗಳೂರು ಕಚೇರಿಗೆ ಕಳುಹಿಸುತ್ತಿದ್ದು, 8 ತಿಂಗಳಿಂದ ಈ ಪ್ರಕ್ರಿಯೆ ನಡೆಯದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೆ ಈ ಬಗ್ಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    16 ಹುದ್ದೆ ಖಾಲಿ

    ಆರ್​ಟಿಒ ಕಚೇರಿಯಲ್ಲಿಯೂ ಸಹ 36 ಮಂಜೂರು ಹುದ್ದೆಗಳ ಪೈಕಿ 15 ಹುದ್ದೆ ಮಾತ್ರ ಭರ್ತಿಯಾಗಿದೆ. ತಕ್ಷಣ ಖಾಲಿ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಯಶ್​ಪಾಲ್​ ಭರವಸೆ ನೀಡಿದರು.

    ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್​ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts