More

    ಆಲ್ರೌಂಡರ್​ ರವೀಂದ್ರ ಜಡೇಜಾ ವೃತ್ತಿಜೀವನಕ್ಕೆ ತಿರುವು ನೀಡಿದ ಆ ಪಂದ್ಯ ಯಾವುದು ಗೊತ್ತೇ?

    ಮುಂಬೈ: ಆಲ್ರೌಂಡರ್​ ರವೀಂದ್ರ ಜಡೇಜಾ, ಭಾರತ ತಂಡದ ಪ್ರಮುಖ ಆಲ್ರೌಂಡರ್​ ಎಂಬುದರಲ್ಲಿ ಎರಡು ಮಾತಿಲ್ಲ. ಮೂರು ಮಾದರಿಯಲ್ಲೂ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿರುವ ಜಡೇಜಾ, ಕೇವಲ ಬ್ಯಾಟಿಂಗ್​, ಬೌಲಿಂಗ್​ ಅಲ್ಲದೆ, ಫೀಲ್ಡಿಂಗ್​ನಲ್ಲೂ ತಮ್ಮ ಛಾಪು ಮೂಡಿಸಿರುವ ಆಟಗಾರ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ ಆರಂಭಿಕ ಜೀವನದಲ್ಲಿ ಉಂಟಾದ ಕಹಿ ಘಟನೆಗಳನ್ನು ಜಡೇಜಾ ಇತ್ತೀಚೆಗೆ ಮೆಲುಕು ಹಾಕಿದ್ದಾರೆ. ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲು ಪರದಾಡಿದ ದಿನಗಳನ್ನು ಹಂಚಿಕೊಂಡಿದ್ದರು. ಎಷ್ಟೋ ದಿನಗಳ ಕಾಲ ಸರಿಯಾಗಿ ನಿದ್ದೆ ಮಾಡದೆ, ಬೆಳಗಿನ ಜಾವ 4-5 ಗಂಟೆವರೆಗೂ ಎಚ್ಚರವಾಗಿದ್ದ ಘಟನೆಗಳನ್ನು ಹೇಳಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದ ಜಡೇಜಾ, ಇದೀಗ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.

    ಇದನ್ನೂ ಓದಿ: 14ನೇ ಐಪಿಎಲ್​ ಭಾಗ-2 ಆರಂಭಕ್ಕೂ ಮುನ್ನವೇ ಕೆಕೆಆರ್​ ತಂಡಕ್ಕೆ ಬಿಗ್​ ಶಾಕ್​,

    ರಾಷ್ಟ್ರೀಯ ತಂಡದಲ್ಲಿದ್ದರೂ ಹನ್ನೊಂದರ ಬಳಗದಲ್ಲಿ ಕಾಯಂ ಸ್ಥಾನ ಪಡೆಯಲು ಸುಮಾರು ಒಂದೂವರೆ ವರ್ಷಗಳೇ ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ತಂಡಕ್ಕೆ ವಾಪಸಾಗುವುದು ಹೇಗೆ, ಹನ್ನೊಂದರ ಬಳಗದಲ್ಲಿ ನನಗೆ ಸ್ಥಾನ ಸಿಗುವುದೇ ಎಂದು ಎಷ್ಟೋ ಬಾರಿ ಪ್ರಶ್ನೆ ಮಾಡಿಕೊಂಡಿದ್ದರಂತೆ. ವಿದೇಶ ಪ್ರವಾಸಕ್ಕೆ ಹೋದರೂ ಆಡದೆ ಖಾಲಿಯಾಗಿ ಬಂದ ಘಟನೆಗಳನ್ನು ನೆನೆದು ಬೇಸರಗೊಂಡಿದ್ದರಂತೆ. ಅತ್ತ ಟೆಸ್ಟ್​ನಲ್ಲೂ ಇಲ್ಲ. ಏಕದಿನದಲ್ಲೂ ಇಲ್ಲ ಎನ್ನುವ ಸ್ಥಿತಿ ಎದುರಾಯಿತು. ಕಡೆಗೆ ದೇಶೀಯ ಟೂರ್ನಿಗಳಲ್ಲೂ ಆಡಲು ಆಗುತ್ತಿರಲಿಲ್ಲ ಎಂದು ನೆನೆದು ಬೇಜಾರಾದರು. ಆದರೆ ತಮ್ಮ ಸಾಮರ್ಥ್ಯ ತೋರುವ ದಿನ ಕಡೆಗೂ ಬಂತು. 2018ರ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯ ನನ್ನ ದಿಕ್ಕನ್ನು ಬದಲಿಸಿತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ದೇಶದ ಪ್ರತಿಷ್ಠಿತ ನಗರಗಳಲ್ಲಿ ಮನೆ ಖರೀದಿಸಿದ್ದಾರೆ ಎಂಎಸ್​ ಧೋನಿ..,

    ಕೆನ್ನಿಂಗ್ಟನ್​ ಓವೆಲ್​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್​ ನಡುವಿನ 5ನೇ ಟೆಸ್ಟ್​ ಪಂದ್ಯದಲ್ಲಿ ಜಡೇಜಾ ಮೊದಲ ಇನಿಂಗ್ಸ್​ನಲ್ಲಿ 156 ಎಸೆತಗಳಿಗೆ 86 ರನ್​ಗಳಿಸಿದರಂತೆ. ಈ ಪಂದ್ಯದಲ್ಲಿ ಭಾರತ 118 ರನ್​ಗಳಿಂದ ಸೋತರೂ ಜಡೇಜಾ ಉತ್ತಮ ನಿರ್ವಹಣೆ ಎಲ್ಲರ ಗಮನಸೆಳೆಯಿತು. ಅದೊಂದು ಟೆಸ್ಟ್​ ಪಂದ್ಯ ನನ್ನನ್ನು ಸಂಪೂರ್ಣ ಬದಲಿಸಿತು ಎಂದು ಹೇಳಿದ್ದಾರೆ. ಜಡೇಜಾ ಇದುವರೆಗೂ 51 ಟೆಸ್ಟ್​, 168 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿದ್ದಾರೆ.

    ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ತೊಡುವ ಸ್ವೆಟರ್ ಹಾಗೂ ಜೆರ್ಸಿ ಶೈಲಿ ಹೇಗಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts