More

    14ನೇ ಐಪಿಎಲ್​ ಭಾಗ-2 ಆರಂಭಕ್ಕೂ ಮುನ್ನವೇ ಕೆಕೆಆರ್​ ತಂಡಕ್ಕೆ ಬಿಗ್​ ಶಾಕ್​

    ಕೋಲ್ಕತ: ಕೋವಿಡ್​ನಿಂದಾಗಿ ಮುಂದೂಡಿಕೆಯಾಗಿದ್ದ 14ನೇ ಆವೃತ್ತಿಯ ಐಪಿಎಲ್​ನ ಉಳಿಕೆ ಪಂದ್ಯಗಳಿಗೆ ಬಿಸಿಸಿಐ ಮುಹೂರ್ತ ಫಿಕ್ಸ್​ ಮಾಡಿದೆ. ಮುಂದಿನ ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ನಲ್ಲಿ ಯುಎಇಯಲ್ಲಿ ಉಳಿದ 31 ಪಂದ್ಯಗಳು ನಡೆಯಲಿವೆ. ಆದರೆ, ಲೀಗ್​ಗೆ ವಿದೇಶಿ ಆಟಗಾರರು ಪೂರ್ಣಪ್ರಮಾಣದಲ್ಲಿ ಲಭ್ಯರಾಗುವುದು ಅನುಮಾನ ಮೂಡಿಸಿದೆ. ಈಗಾಗಲೇ ಇಂಗ್ಲೆಂಡ್​ ಆಟಗಾರರು ಐಪಿಎಲ್​ ಭಾಗ-2ಕ್ಕೆ ಲಭ್ಯವಿಲ್ಲ ಎಂದು ಹೇಳಲಾಗಿದೆ. ಅದೇ ರೀತಿ ಕೋಲ್ಕತ ನೈಟ್​ ರೈಡರ್ಸ್​ ತಂಡದ ಪ್ರಮುಖ ವೇಗಿ ಪ್ಯಾಟ್​ ಕಮ್ಮಿನ್ಸ್​ ಕೂಡ ಹೊರಗುಳಿಯುವುದು ಅಧಿಕೃತವಾಗಿ ಖಾತ್ರಿಯಾಗಿದೆ. ಪ್ರಮುಖ ವೇಗಿಯ ಅಲಭ್ಯತೆ ಕೆಕೆಆರ್​ ತಂಡಕ್ಕೆ ಹಿನ್ನಡೆಯುಂಟು ಮಾಡಿದೆ.

    ಇದನ್ನೂ ಓದಿ: ದೇಶದ ಪ್ರತಿಷ್ಠಿತ ನಗರಗಳಲ್ಲಿ ಮನೆ ಖರೀದಿಸಿದ್ದಾರೆ ಎಂಎಸ್​ ಧೋನಿ.., 

    ಆಸ್ಟ್ರೆಲಿಯಾದ ಪ್ರಮುಖ ದಿನ ಪತ್ರಿಕೆ ಸಿಡ್ನಿ ಮಾನಿರ್ಂಗ್​ ಹೆರಾಲ್ಡ್​, ಪ್ಯಾಟ್​ ಕಮ್ಮಿನ್ಸ್​ ಅಲಭ್ಯತೆಯನ್ನು ಖಚಿತಪಡಿಸಿದೆ. ಕಮ್ಮಿನ್ಸ್​ ಐಪಿಎಲ್​ಗೆ ವಾಪಸಾಗುವುದಿಲ್ಲ ಎಂದು ವರದಿ ಮಾಡಿದೆ. ವೇಗದ ಬೌಲಿಂಗ್​ ವಿಭಾಗದಲ್ಲಿ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಇದೀಗ ಅಲಭ್ಯತೆಯಿಂದಾಗಿ ಕಮ್ಮಿನ್ಸ್​ ಕೇವಲ ಅರ್ಧ ಸಂಭಾವನೆಯಷ್ಟೆ ಪಡೆಯಲಿದ್ದಾರೆ. ಕಮ್ಮಿನ್ಸ್​ ಅವರನ್ನು ಕೆಕೆಆರ್​ ತಂಡದ ಕಳೆದ ವರ್ಷ 15.5 ಕೋಟಿ ರೂಪಾಯಿಗೆ ಕೆಕೆಆರ್​ ತಂಡ ಕೊಂಡುಕೊಂಡಿತ್ತು.

    ಇದನ್ನೂ ಓದಿ: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ತೊಡುವ ಸ್ವೆಟರ್ ಹಾಗೂ ಜೆರ್ಸಿ ಶೈಲಿ ಹೇಗಿದೆ ಗೊತ್ತೇ?,

    ಕಳೆದ ವರ್ಷದ ಲೀಗ್​ನಲ್ಲಿ ಕಮ್ಮಿನ್ಸ್​ 12 ವಿಕೆಟ್​ ಕಬಳಿಸಿದ್ದರೆ, ಈ ವರ್ಷ 9 ವಿಕೆಟ್​ ಕಬಳಿಸಿದ್ದರು. ಕಮ್ಮಿನ್ಸ್​ ಅಲ್ಲದೆ, ನಾಯಕ ಇವೊಯಿನ್​ ಮಾರ್ಗನ್​ ಕೂಡ ಕೆಕೆಆರ್​ ತಂಡಕ್ಕೆ ಅಲಭ್ಯರಾಗಲಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts