More

    ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ತೊಡುವ ಸ್ವೆಟರ್ ಹಾಗೂ ಜೆರ್ಸಿ ಶೈಲಿ ಹೇಗಿದೆ ಗೊತ್ತೇ?

    ಮುಂಬೈ: ಆಲ್ರೌಂಡರ್ ರವೀಂದ್ರ ಜಡೇಜಾ, ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ತೊಡುವ ರೆಟ್ರೋ ಜಂಪರ್ ಶೈಲಿಯ ಸ್ವೆಟರ್ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡರು. ಜಡೇಜಾ ತೊಟ್ಟಿರುವ ನೂತನ ಶೈಲಿಯ ಬಿಳಿ ಬಣ್ಣದ ಸ್ವೆಟರ್‌ನಲ್ಲಿ ತಂಡದ ಪ್ರಾಯೋಜಕತ್ವ ಹೊಂದಿರುವ ಯಾವುದೇ ಕಂಪನಿಯ ಲಾಂಛನ ಬಳಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜಿಸುತ್ತಿರುವ ಪಂದ್ಯವಾಗಿರುವುದರಿಂದ ಕೇವಲ ಬಿಸಿಸಿಐ ಹಾಗೂ ಐಸಿಸಿ ಲೋಗೋ ಮಾತ್ರ ಬಳಸಲಾಗಿದೆ. ಪ್ರಾಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲಾಂಛನವನ್ನು ಸ್ವೆಟರ್ ಮೇಲೆ ಹಾಕಿಲ್ಲ. ಇದೇ ಮಾದರಿಯಲ್ಲಿ ಜೆರ್ಸಿ ಕೂಡ ಸಿದ್ಧವಾಗಲಿದೆ ಎನ್ನಲಾಗಿದೆ. ಆದರೆ, ತಂಡದ ಹೊಸ ಕಿಟ್‌ನಲ್ಲಿ ಮಾತ್ರ ಪ್ರಾಯೋಜಕರ ಲಾಂಛನ ಬಳಸಲಾಗಿದೆ.

    ಇದನ್ನೂ ಓದಿ: VIDEO: ಫುಟ್‌ಬಾಲ್ ಆಟಗಾರನ ಸಾಮಾಜಿಕ ಕಾರ್ಯಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಶ್ಲಾಘನೆ

    1996ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಕರ್ನಾಟಕದ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಜತೆಗೆ ಸಚಿನ್ ತೆಂಡುಲ್ಕರ್ ಕೂಡ ಇಂಥದ್ದೆ ಸ್ವೆಟರ್ ಹಾಕಿದ್ದರು. ಇಂಗ್ಲೆಂಡ್‌ನಲ್ಲಿ ಜೂನ್-ಜುಲೈ ತಿಂಗಳಲ್ಲಿ ಅತಿಯಾದ ಚಳಿ ಇರುವ ಹಿನ್ನೆಲೆಯಲ್ಲಿ ಇಂಥ ಸ್ವೆಟರ್ ಹಾಕುತ್ತಾರೆ ಎನ್ನಲಾಗಿದೆ.

    ಇದನ್ನೂ ಓದಿ: ಟೀಮ್​ ಇಂಡಿಯಾ ಈಗ ವಿರಾಟ್​ ಕೊಹ್ಲಿಯದ್ದಲ್ಲ, ರವಿಶಾಸ್ತ್ರಿ ತಂಡದಂತಿದೆ

    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಮುನ್ನ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಹೊಸ ಕಿಟ್ ಕೂಡ ನೀಡಲಾಗಿದೆ. ಗುರುವಾರವಷ್ಟೇ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಹಂಚಿಕೊಂಡಿದ್ದರು. ಟೀಮ್ ಇಂಡಿಯಾ ಸದ್ಯ ಮುಂಬೈನಲ್ಲಿ ಹೋಟೆಲ್ ಕ್ವಾರಂಟೈನ್‌ನಲ್ಲಿರುವ ನಡುವೆ ಮಯಾಂಕ್ ಅಗರ್ವಾಲ್, ತಿಳಿನೀಲಿ ಮತ್ತು ಕಡುನೀಲಿ ಬಣ್ಣದ ಈ ಹೊಸ ಕಿಟ್ ಜೆರ್ಸಿಯನ್ನು ಪ್ರದರ್ಶಿಸಿದ್ದರು. ಇದರಲ್ಲಿ ಬಿಸಿಸಿಐ ಲಾಂಛನದ ಜತೆಗೆ ಪ್ರಾಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲಾಂಛನವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts